ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

Date:

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ. ಇಂದು ಅಂತಿಮ ಘಟ್ಟದ ನಿರ್ಣಾಯಕ ಹೋರಾಟ ನಡೆಯುತ್ತಿದೆ. ಆದರೂ, ಮಾದಿಗ ಸಮುದಾಯಗಳಿಗೆ ದೊರೆಯಬೇಕಾದ ಹಕ್ಕುಗಳು ಇನ್ನೂ ದೊರೆತಿಲ್ಲ. ಇಂದು (ಗುರುವಾರ) ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದಿದ್ದರೆ, ಹೋರಾಟವು ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುತ್ತದೆ ಎಂದು ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

- Advertisement -

ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಒಳಮೀಸಲಾತಿ ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಪಕ್ಕದ ಕೇರಳ, ಪಂಜಾಬ್‌ನಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಈ ರಾಜ್ಯಗಳಲ್ಲಿ ತೊಡಕಾಗದ ಕಾನೂನುಗಳು ಕರ್ನಾಟಕದಲ್ಲಿ ಹೇಗೆ ಅಡ್ಡಿಯಾಗುತ್ತವೆ ಎಂದು ನಾವು ಸರ್ಕಾರವನ್ನು ಕೇಳಬೇಕಿದೆ. ಎಲ್ಲ ಸಮಯದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಹೇಳಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ, ಒಳಮೀಸಲಾತಿಯನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೇಟು ಹಾಕುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಇದನ್ನು ಓದಿದ್ದೀರಾ? ತುಮಕೂರು | ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

“ಎಡಗೈ ಸಮುದಾಯಗಳನ್ನು ಸಭೆಗೆ ಕರೆಯುತ್ತಾರೆ, ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆಂದು ನಿರೀಕ್ಷಿಸಿದ್ದೆವು. ಆದರೆ, ಸರ್ಕಾರ ತಮ್ಮ ಕ್ಯಾಬಿನೆಟ್ ಸಭೆಯಲ್ಲಿ ಎರಡು ವಾರಗಳ ಕಾಲ ಮುಂದೂಡಿತು. ಸಮುದಾಯಗಳನ್ನು ವಂಚಿಸಿತು. ಈಗ, ಸರ್ಕಾರವು 50,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಆದೇಶಿಸಿದೆ. ಆದರೆ, ಒಳಮೀಸಲಾತಿಯನ್ನು ತಪ್ಪಿಸಿದೆ. ನಾವು ನೇಮಕಾತಿಯನ್ನು ನಿಲ್ಲಿಸಿ ಎಂದು ಕೇಳುತ್ತಿಲ್ಲ. ಬದಲಾಗಿ, ಎಲ್ಲ ಸಮುದಾಯದ ಯುವಜನರಿಗೂ ಉದ್ಯೋಗಳ ಅಗತ್ಯವಿದೆ ಎಂಬುದನ್ನು ಅರಿತು, ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಕೆ ಆಗಬೇಕೆಂದು ಆಗ್ರಹಿಸುತ್ತಿದ್ದೇವೆ. ಸರ್ಕಾರವು ಇದೇ ರೀತಿ ನಿರ್ಲಕ್ಷ್ಯ ಧೋರಣೆ ತಳೆದರೆ, ಈ ಹೋರಾಟವು ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುತ್ತದೆ” ಎಂದು ಎಚ್ಚರಿಕೆ ನೀಡಿದರು.

“ನಾಗಮೋಹನ್ ದಾಸ್ ಕಮಿಟಿಯನ್ನು ರಚಿಸಿದಿರಿ, ಕೋಟ್ಯಂತರ ಹಣ ವ್ಯಯ ಮಾಡಿದಿರಿ. ಆದರೆ, ಆ ವರದಿಯನ್ನು ಮೂಲೆಗೊತ್ತಿದ್ದೀರಿ. ನಿಮಗೆ ಬೇಕಾದಂತೆ ನೀವು ಮಾಡುವುದಾದರೆ, ಕಮಿಟಿಗಳನ್ನು ಯಾಕೆ ರಚಿಸಿದಿರಿ?. ಹಣವನ್ನೇಕೆ ವ್ಯಯಿಸಿದಿರಿ? ನಿಮ್ಮಿಚ್ಚೆಯಂತೆ ನೀವು ಒಳಮೀಸಲಾತಿಯನ್ನು ಬರೆದು, ಜಾರಿಗೊಳಿಸಿದ್ದರೆ, ನಾವು ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತಿದ್ದೆವು” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

“ಗುರುವಾರ, (ಮಾರ್ಚ್‌ 12) ಸಂಪುಟ ಸಭೆ ನಡೆಯಲಿದೆ. ಸಿದ್ದರಾಮಯ್ಯನವರು ಇಂದಿನ ಸಭೆಯಲ್ಲಿಯೇ ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಮುದಾಯದ ಹೋರಾಟಗಾರರು ಯಾವ ಕ್ರಮಕ್ಕೆ ಮುಂದಾಗುತ್ತಾರೆಯೋ, ಅದರಂತೆ ಇಡೀ ಸಮುದಾಯ ಮುನ್ನಡೆಯುತ್ತದೆ” ಎಂದು ಎಚ್ಚರಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿಗೆ ಚಿರಾಗ್-ನಿತಿನ್ ಎಂಟ್ರಿ; ‘ಮಹಾ ಸಮರ’ಕ್ಕೆ ಸಜ್ಜಾದ ಎನ್‌ಡಿಎ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಬಿಹಾರದ...

100 ರೂ.ಗೆ 10 ಬಗೆಯ ತರಕಾರಿ: ‘ವೆಟ್ರಿ ಕಿಟ್’ ಯೋಜನೆ ಆರಂಭಿಸಿದ ತಮಿಳು ಸರ್ಕಾರ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಅಗತ್ಯ ತರಕಾರಿಗಳನ್ನು ಒದಗಿಸುವ...

ಹಾಸನ | ದಲಿತರ ಭೂಮಿ, ಶಿಕ್ಷಣ, ಉದ್ಯೋಗ ಘನತೆಯ ಬದುಕಿನ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲಿ; ಡಿಎಚ್‌ಎಸ್

ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ದಲಿತರ ಭೂಮಿ, ಶಿಕ್ಷಣ, ವಸತಿ ಮತ್ತು...

ವಂಚನೆಗೊಳಗಾದ ಮಹಿಳೆಗೆ ಸಕಾಲದಲ್ಲಿ ಸ್ಪಂದಿಸದ ಕೆನರಾ ಬ್ಯಾಂಕ್‌: ಬಡ್ಡಿ ಸಮೇತ ಹಣ ಹಿಂದಿರುಗಿಸಲು ಸೂಚನೆ

ಸೈಬರ್ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳಾ ಗ್ರಾಹಕಿಯೊಬ್ಬರಿಗೆ ಕಳೆದುಕೊಂಡ ಹಣ ಹಾಗೂ...