ಹಾಲು, ಬಸ್ ದರ ಏರಿಕೆ; ಕಾಂಗ್ರೆಸ್ ಸರ್ಕಾರದ ಸರಣಿ ಎಡವಟ್ಟು!

Date:

ರಾಜ್ಯದಲ್ಲಿ ನವೆಂಬರ್ ತಿಂಗಳು ಜನಸಾಮಾನ್ಯರ ದೈನಂದಿನ ಬದುಕಿನ ಮೇಲಿನ ಭಾರೀ ಆರ್ಥಿಕ ಹೊರೆಯೊಂದಿಗೆ ಆರಂಭವಾಗಿದೆ. ಒಂದೆಡೆ, ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ.ಗಳಷ್ಟು ಏರಿಕೆ ಕಂಡಿದ್ದರೆ, ಮತ್ತೊಂದೆಡೆ, ರಾಜ್ಯ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರಗಳು 23% ಮತ್ತು 35%ರಷ್ಟು ದುಬಾರಿಯಾಗಿವೆ. ರೈತರಿಗೆ ನ್ಯಾಯಯುತ ಬೆಲೆ ಒದಗಿಸುವುದು ಮತ್ತು ನಷ್ಟದಲ್ಲಿರುವ ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ದೈನಂದಿನ ಕನಿಷ್ಠ ಅಗತ್ಯ ವಸ್ತುಗಳ ಮೇಲಿನ ಈ ದಿಢೀರ್‌ ದರ ಏರಿಕೆಯು ಪ್ರತಿಯೊಂದು ಕುಟುಂಬದ ಮಾಸಿಕ ಬಜೆಟ್‌ಅನ್ನೇ ತಲೆಕೆಳಗು ಮಾಡಿದೆ.

- Advertisement -

ಕಾಂಗ್ರೆಸ್ ಸರ್ಕಾರವು ತನ್ನ ಪ್ರಮುಖ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೇರ ಹಣಕಾಸಿನ ನೆರವು ನೀಡುತ್ತಿತ್ತು/ನೀಡುತ್ತಿದೆ. ಅದರ ನಡುವೆಯೇ, ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆಯನ್ನೂ ಹೆಚ್ಚಿಸಿದೆ. ಸರ್ಕಾರದ ಈ ಕ್ರಮಗಳು ವಿರೋದಾಭಾಸವಾಗಿ ಕಾಣುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ನಂದಿನಿ ಹಾಲಿನ ಬೆಲೆಯಲ್ಲಿ ಸರ್ಕಾರವು 8 ರೂ. ಹೆಚ್ಚಿಸಿದೆ. ಪರಿಣಾಮ, ನಂದಿನಿ ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ 46 ರೂ.ನಿಂದ ಏಕಾಏಕಿ 54 ರೂ.ಗಳಿಗೆ ಏರಿಕೆಯಾಗಿದೆ. ಇತರ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಗಳಲ್ಲಿ 8 ರೂ.ನಿಂದ 12 ರೂ.ರವರೆಗೆ ಹೆಚ್ಚಳವಾಗಿದೆ. ಈಗ ಹಾಲಿನ ದರದಲ್ಲಿ ಹೆಚ್ಚಿಸಲಾಗಿರುವ 8 ರೂ.ಗಳ ಪೈಕಿ, 7 ರೂ.ಗಳನ್ನು ನೇರವಾಗಿ ರೈತರಿಗೆ ಮತ್ತು 1 ರೂ.ಅನ್ನು ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚಕ್ಕೆ ವ್ಯಯಿಸಲಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

ಹೈನುಗಾರಿಕೆ ಕ್ಷೇತ್ರದಲ್ಲಿ ಪಶು ಆಹಾರ, ಮೇವು, ವೈದ್ಯಕೀಯ ಆರೈಕೆ ಹಾಗೂ ಕಾರ್ಮಿಕ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದಕ್ಕಾಗಿ, ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ರೈತರಿಗೆ ನೀಡುವ ಖರೀದಿ ದರವನ್ನು ಹೆಚ್ಚಿಸಬಾರದ್ದು ಸರ್ಕಾರದ ಕರ್ತವ್ಯವೂ ಹೌದು. ಅದರಂತೆ, ಈಗ ಖರೀದಿ ದರವನ್ನು ಪ್ರತಿ ಲೀಟರ್‌ಗೆ 35 ರೂ.ನಿಂದ 42 ರೂ.ಗೆ ಏರಿಸಿರುವುದು ಮತ್ತು 5 ರೂ. ಪ್ರೋತ್ಸಾಹ ಧನ ನಿಗದಿ ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ.

ಆದರೆ, ಈ ಸಂಪೂರ್ಣ ಆರ್ಥಿಕ ಹೊರೆಯನ್ನು ಗ್ರಾಹಕನ ಮೇಲೆಯೇ ಹೊರಿಸುವುದು ಆಘಾತಕಾರಿ ಕ್ರಮ. ಯಾಕೆಂದರೆ, ರಾಜ್ಯದ ಬಹುತೇಕ ಕುಟುಂಬಗಳು ಮಧ್ಯಮ ಮತ್ತು ತಳ ವರ್ಗದ ಕುಟುಂಬಗಳೇ ಆಗಿವೆ. ಈ ಕುಟುಂಬಗಳು ತಮ್ಮ ದೈನಂದಿನ ಖರ್ಚುಗಳನ್ನು ಮಾಸಿಕ ಬಜೆಟ್‌ಗೆ ಅನುಗುಣವಾಗಿಯೇ ನಡೆಸುತ್ತವೆ. ಹೀಗಿರುವಾಗ ಏಕಾಏಕಿ ಹಾಲು ಮತ್ತು ಹಾಲಿಗೆ ಸಂಬಂಧಿಸಿದ ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ಹಾಲಿನ ಉಪ ಉತ್ಪನ್ನಗಳ ಬೆಲೆಯೂ ಸಮರೋಪಾದಿಯಲ್ಲಿ ಏರಿಕೆಯಾಗುತ್ತದೆ. ಇದು ಗ್ರಾಹಕರ ಮಾಸಿಕ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು, ಜನಜೀವನದ ಲೆಕ್ಕಾಚಾರವೇ ಏರುಪೇರಾಗಲಿದೆ.

ಇದರ ಜೊತೆಗೆ, ಸರ್ಕಾರಿ ಬಸ್ ಪ್ರಯಾಣ ದರಗಳನ್ನೂ ಸರ್ಕಾರ ಹೆಚ್ಚಿಸಿದೆ. 2025ರ ಆರಂಭದಲ್ಲಷ್ಟೇ 15%ರಷ್ಟು ದರ ಏರಿಕೆ ಮಾಡಿದ್ದ ಸರ್ಕಾರ, ಎರಡು ವರ್ಷಗಳು ಕಳೆಯುವ ಮುನ್ನವೇ ಮತ್ತೆ ಭಾರೀ ಪ್ರಮಾಣದಲ್ಲಿ ಪ್ರಯಾಣ ದರ ಹೆಚ್ಚಿಸಿದೆ.

ಸಾರಿಗೆ ನಿಗಮಗಳು ವಾರ್ಷಿಕ 2,000 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸುತ್ತಿವೆ, ಡೀಸೆಲ್ ದರ ಮತ್ತು ವಾಹನ ಬಿಡಿಭಾಗಗಳ ವೆಚ್ಚ ಹೆಚ್ಚಾಗಿದೆ. ಇದೆಲ್ಲವನ್ನೂ ನಿಭಾಯಿಸಲು ಪ್ರಯಾಣ ದರ ಹೆಚ್ಚಳ ಅನಿವಾರ್ಹವೆಂದು ಸಾರಿಗೆ ಸಚಿವರು ಹೇಳಿಕೊಂಡಿದ್ದಾರೆ.

ಸಾರಿಗೆ ನಿಗಮಗಳ ಹೊರೆ ತಗ್ಗಿಸುವ ತುಡಿತದಲ್ಲಿ ಸರ್ಕಾರವು ಸಾಮಾಜಿಕ ಜವಾಬ್ದಾರಿಯನ್ನು ಮರೆತಿದೆ. ಗ್ರಾಮೀಣ ಸಂಪರ್ಕ, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ದಿನಗೂಲಿ ನೌಕರರಿಗೆ ಕೈಗೆಟುಕುವ ದರದಲ್ಲಿ ಸಾರಿಗೆ ಒದಗಿಸುವ ಆದ್ಯತೆಯನ್ನು ಸರ್ಕಾರ ಕಡಗಳಿಸಿದೆ. ಮಾತ್ರವಲ್ಲ, ಸಾರ್ವಜನಿಕ ಸಾರಿಗೆ ವೆಚ್ಚ ದುಬಾರಿಯಾದರೆ ಜನರು ಖಾಸಗಿ ದ್ವಿಚಕ್ರ ವಾಹನಗಳ ಕಡೆಗೆ ವಾಲುವುದರಿಂದ ನಗರಗಳಲ್ಲಿ ಮಾಲಿನ್ಯ ಮತ್ತು ಟ್ರಾಫಿಕ್ ಹೆಚ್ಚಳವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನಿರ್ಲಕ್ಷಿಸಿದೆ.

ಇದರ ಜೊತೆಗೆ, ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣದ ಟಿಕೆಟ್ ಮೊತ್ತವನ್ನು ಸಾರಿಗೆ ನಿಗಮಗಳಿಗೆ ಕಾಲಕಾಲಕ್ಕೆ ಪೂರ್ಣಪ್ರಮಾಣದಲ್ಲಿ ಮರುಪಾವತಿ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ನಿಗಮಗಳಿಗೆ ನಗದು ಹರಿವಿನ ಕೊರತೆ ಉಂಟಾದಾಗಲೇ, ಅವು ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕಾಗಿ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ. ಬಿಕ್ಕಟ್ಟಿಗೆ ಸಿಲುಕಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ರೈತರು ಮತ್ತು ಸಾರಿಗೆ ನಿಗಮಗಳ ಹಿತ ಕಾಯುತ್ತಲೇ, ಗ್ರಾಹಕರ ಹಿತವನ್ನೂ ಕಾಪಾಡಬೇಕು. ಅದಕ್ಕಾಗಿ, ಹಾಲು ಉತ್ಪಾದನಾ ಒಕ್ಕೂಟಗಳ ಆಡಳಿತಾತ್ಮಕ ವೆಚ್ಚ, ಮಧ್ಯವರ್ತಿಗಳ ದುಂದುವೆಚ್ಚ ಹಾಗೂ ವಿತರಣಾ ಜಾಲದ ದಕ್ಷತೆಯನ್ನು ಸುಧಾರಿಸಿ, ಸಾರ್ವಜನಿಕ ವೆಚ್ಚ ತಗ್ಗಿಸಿ, ಗ್ರಾಹಕರ ಮೇಲೆ ಹೊರೆಯಾಗದೆಂತೆ ನೋಡಿಕೊಳ್ಳಬೇಕಿತ್ತು. ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ಶಕ್ತಿ ಯೋಜನೆಯ ಹಣವನ್ನು ಕಾಲಕಾಲಕ್ಕೆ ನಿಗಮಗಳಿಗೆ ಪಾವತಿಸಬೇಕಿತ್ತು. ಟಿಕೆಟ್ ರಹಿತ ಆದಾಯಗಳಾದ ಜಾಹೀರಾತು, ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ಇಂಧನ ದಕ್ಷತೆ ಹೆಚ್ಚಿಸುವ ಕಾರ್ಯತಂತ್ರಗಳನ್ನು ಸರ್ಕಾರ ರೂಪಿಸಬೇಕಿತ್ತು.

ಆದರೆ, ಸರ್ಕಾರಗಳು ಪ್ರತಿ ಬಾರಿಯೂ ಗ್ರಾಹಕರ ಜೇಬಿಗೆ ಕೈಹಾಕುವ ಕೆಲಸವನ್ನೇ ಮಾಡುತ್ತಿವೆ. ನಷ್ಟ ಸರಿದೂಗಿಸಲು ಗ್ರಾಹಕರಿಂದಲೇ ಹಣ ಕಿತ್ತುಕೊಳ್ಳುವುದೇ ಏಕೈಕ ಮಾರ್ಗವೆಂದು ಸರ್ಕಾರಗಳು ಭಾವಿಸಿವೆ. ಇದು ಸರ್ಕಾರಗಳ ಮೂಲಭೂತ ಯೋಜನಾ ವೈಫಲ್ಯವನ್ನು ತೋರಿಸುತ್ತವೆ.

ಅಂದಹಾಗೆ, ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಮತ್ತು ಗೃಹಜ್ಯೋತಿಯಡಿ ಉಚಿತ ವಿದ್ಯುತ್ ನೀಡುತ್ತಿದೆ. ಇವು ಬಡ ಕುಟುಂಬಗಳಿಗೆ ಆಸರೆಯಾಗಿದೆ. ಆದರೆ, ಸರ್ಕಾರ ನೀಡುವ ಈ ಆರ್ಥಿಕ ನೆರವು, ಹೆಚ್ಚಾಗುತ್ತಿರುವ ದೈನಂದಿನ ಜೀವನ ವೆಚ್ಚಕ್ಕೆ ಹೋಲಿಸಿದರೆ, ಎಡಗೈಯಲ್ಲಿ ಕೊಟ್ಟು, ಬಲಗೈನಲ್ಲಿ ಕಿತ್ತುಕೊಂಡಂತೆ ಕಾಣುತ್ತಿದೆ.

ನಿರುದ್ಯೋಗ, ಬೆಲೆ ಏರಿಕೆ, ಬರದಂತಹ ಬಿಕಟ್ಟನ್ನು ಎದುರಿಸುತ್ತಿರುವ ಜನಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸುವುದು ತಮ್ಮ ಕರ್ತವ್ಯ ಮತ್ತು ಆದ್ಯತೆಯೆಂದು ಸರ್ಕಾರ ಅರಿತುಕೊಳ್ಳುವ ತುರ್ತು ಅಗತ್ಯವಿದೆ. ರೈತರ ಪ್ರೋತ್ಸಾಹಧನ ಮತ್ತು ಒಕ್ಕೂಟಗಳ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ತಂತ್ರಜ್ಞಾನ ಆಧಾರಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ. ಸಾರ್ವಜನಿಕ ಸೇವೆಗಳ ದರ ಪರಿಷ್ಕರಣೆಯ ದಿಢೀರ್ ನಿರ್ಧಾರಗಳ ಬದಲು, ಪಾರದರ್ಶಕವಾದ ನೀತಿಯನ್ನು ಜಾರಿಗೆ ತರಬೇಕಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

100 ರೂ.ಗೆ 10 ಬಗೆಯ ತರಕಾರಿ: ‘ವೆಟ್ರಿ ಕಿಟ್’ ಯೋಜನೆ ಆರಂಭಿಸಿದ ತಮಿಳು ಸರ್ಕಾರ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಅಗತ್ಯ ತರಕಾರಿಗಳನ್ನು ಒದಗಿಸುವ...

ಹಾಸನ | ದಲಿತರ ಭೂಮಿ, ಶಿಕ್ಷಣ, ಉದ್ಯೋಗ ಘನತೆಯ ಬದುಕಿನ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲಿ; ಡಿಎಚ್‌ಎಸ್

ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ದಲಿತರ ಭೂಮಿ, ಶಿಕ್ಷಣ, ವಸತಿ ಮತ್ತು...

ವಂಚನೆಗೊಳಗಾದ ಮಹಿಳೆಗೆ ಸಕಾಲದಲ್ಲಿ ಸ್ಪಂದಿಸದ ಕೆನರಾ ಬ್ಯಾಂಕ್‌: ಬಡ್ಡಿ ಸಮೇತ ಹಣ ಹಿಂದಿರುಗಿಸಲು ಸೂಚನೆ

ಸೈಬರ್ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳಾ ಗ್ರಾಹಕಿಯೊಬ್ಬರಿಗೆ ಕಳೆದುಕೊಂಡ ಹಣ ಹಾಗೂ...

ಮಹಾರಾಷ್ಟ್ರ | ಬರದ ನಡುವೆ ಸಂಭ್ರಮದ ಸಡಗರ; ಸರ್ಕಾರದ ಆದ್ಯತೆಗೆ ತೀವ್ರ ಆಕ್ರೋಶ!

ಮಹಾರಾಷ್ಟ್ರದಾದ್ಯಂತ ಭೀಕರ ಬರಗಾಲದ ಕರಿನೆರಳು ಆವರಿಸಿದೆ. ಕಳೆದ ಐದು ದಶಕಗಳಲ್ಲೇ ಕಾಣದಂತಹ...