ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಪ್ರತಿಷ್ಠಿತ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ 2024ನೇ ಸಾಲಿನ ವಿವಿಧ ಪ್ರಕಾರಗಳ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದ್ದು, ನಾಡಿನ ಖ್ಯಾತ ಬರಹಗಾರರಾದ ದು. ಸರಸ್ವತಿ, ಡಾ. ಹುಲಿಕುಂಟೆ ಮೂರ್ತಿ ಹಾಗೂ ಬಿ.ಎಂ. ಬಶೀರ್ ಸೇರಿದಂತೆ ಹಲವು ಪ್ರಮುಖ ಸಾಹಿತಿಗಳು ಈ ಸಾಲಿನ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 25ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿ ವಿಜೇತರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕೃತಿಗಳ ಅನುವಾದ ವಿಭಾಗದಲ್ಲಿ ದು. ಸರಸ್ವತಿ, ವೈಚಾರಿಕ ಬರಹ ವಿಭಾಗದಲ್ಲಿ ಡಾ. ಹುಲಿಕುಂಟೆ ಮೂರ್ತಿ ಅವರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದರೆ, ಹಿರಿಯ ಪತ್ರಕರ್ತ-ಸಾಹಿತಿ ಬಿ.ಎಂ. ಬಶೀರ್ ಅವರು ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದ್ದಾರೆ.
2025ನೇ ವರ್ಷದ ‘ಗೌರವ ಪ್ರಶಸ್ತಿ’ ಪುರಸ್ಕೃತರು:
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇದು ಐವತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.
ಪ್ರೊ. ಶಿವರಾಮಯ್ಯ – ಬೆಂಗಳೂರು
ಚಂದ್ರಶೇಖರ ತಾಳ್ಯ – ಚಿತ್ರದುರ್ಗ
ಡಾ. ಚಂದ್ರಕಾಂತ ಪೋಕಳೆ – ಬೆಳಗಾವಿ
ಡಾ. ವಸುಂಧರಾ ಭೂಪತಿ – ಬಳ್ಳಾರಿ
ಡಾ. ಎಸ್. ತುಕಾರಾಂ – ಮೈಸೂರು
This video cannot be played in your browser. Open the video directly
2025ನೇ ವರ್ಷದ ‘ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತರು:
50ರಿಂದ 60ರ ವಯೋಮಾನದ ಒಟ್ಟು 10 ಮಂದಿ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ ಒಲಿದಿದೆ. ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಡಾ. ನಿಖಿಲ್ ರುದ್ರಪ್ಪ – ಬಳ್ಳಾರಿ
ಡಾ. ವೀರೇಶ ಬಡಿಗೇರ – ಬಾಗಲಕೋಟೆ
ಡಾ. ಸಿ. ಜಿ. ಲಕ್ಷ್ಮೀಪತಿ – ತುಮಕೂರು
ಕನ್ನಡಿಗ ನಾರಾಯಣ – ಬೆಂಗಳೂರು
ರೂಪ ಹಾಸನ – ಹಾಸನ
ಜಯರಾಮ್ ರಾಯಪುರ – ವಿಜಯವಾಡ
ಕುಮುದಾ ಸುಶೀಲ – ದಾವಣಗೆರೆ
ಡಾ. ಕೆ. ನಾಗರಾಜು – ತುಮಕೂರು
ಬಿ. ಎಂ. ಬಶೀರ್ – ಮಂಗಳೂರು
ಡಾ. ಜ್ಯೋತಿ – ಬೆಂಗಳೂರು
2024ನೇ ವರ್ಷದ ‘ಪುಸ್ತಕ ಬಹುಮಾನ’ ವಿಜೇತರು:
ವಿವಿಧ 17 ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗಳಿಗೆ ತಲಾ ಇಪ್ಪತ್ತೈದು ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ.
ಅನುವಾದ-1: ದು. ಸರಸ್ವತಿ (ಕೃತಿ: ಜಾತಿ ಮತ್ತು ಲಿಂಗತ್ವ)
ವೈಚಾರಿಕ/ಅಂಕಣ ಬರಹ: ಡಾ. ಹುಲಿಕುಂಟೆ ಮೂರ್ತಿ (ಕೃತಿ: ನುಡಿ ಕಂದಾಯ)
ಕಾವ್ಯ: ಭಾರತಿದೇವಿ ಪಿ. (ಕೃತಿ: ಚಲಿಸುತ್ತಿರುವ ಚುಕ್ಕಿಗಳು)
ನವಕವಿಗಳ ಪ್ರಥಮ ಸಂಕಲನ: ಶಶಿ ತರೀಕೆರೆ (ಕೃತಿ: ಪುಣ್ಯ)
ಕಾದಂಬರಿ: ಬಿ. ಎನ್. ಹಳ್ಳಿ (ಕೃತಿ: ಇಮಾಮ್ ಸಾಹೇಬರ ಕುದುರೆ)
ಸಣ್ಣಕತೆ: ಅನಿಲ್ ಗುಂಜಾಪುರ (ಕೃತಿ: ಸರ್ವೇ ನಂಬರ್-97)
ನಾಟಕ: ಡಾ. ಚಂದ್ರು ಕಾಳೇನಹಳ್ಳಿ (ಕೃತಿ: ಗಂಧಪತಿ)
ಲಲಿತ ಪ್ರಬಂಧ: ಡಾ. ಶಿವರಾಜು ಬಂಡಾರಬೆಲೆ (ಕೃತಿ: ಒಂದು ಕಲೆ ಅನ್ನದ ಕಥೆ)
ಪ್ರವಾಸ ಸಾಹಿತ್ಯ: ಮಲ್ಲಿಕಾರ್ಜುನ ಹುಲಗಬಾಲಿ (ಕೃತಿ: ತಿರುಗಾಟ)
ಜೀವನ ಚರಿತ್ರೆ/ಆತ್ಮಕಥೆ: ವಿ. ಜಿ. ಹೆಗಡೆ (ಕೃತಿ: ಬೆಳಗಿನ ಬೆಳಕಿನಿಂದ)
ಸಾಹಿತ್ಯ ವಿಮರ್ಶೆ: ಮಹಾಂತೇಶ ಬಟಕುರ (ಕೃತಿ: ಬೆಳಕು ಚೆಲ್ಲುವ ಹೊತ್ತು)
ಮಕ್ಕಳ ಸಾಹಿತ್ಯ: ರಘುನಾಥ ಕುಕ್ಕೂಂದ (ಕೃತಿ: ಬಿಸಿ ಬಿಸಿ ಬಾತು)
ವಿಜ್ಞಾನ ಸಾಹಿತ್ಯ: ಶ್ರೀಧರ ಕುಮಾರಿ (ಕೃತಿ: ಹಕ್ಕಿಗಳ ವಿಸ್ಮಯ ಲೋಕ)
ಮಾನವಿಕ: ಡಾ. ಎಂ.ಎನ್. ಚಿಕ್ಕಮದು (ಕೃತಿ: ಪ್ರಜಾಪ್ರಭುತ್ವ)
ಗ್ರಂಥ ಸಂಪಾದನೆ/ಸಂಶೋಧನೆ: ಡಾ. ಅಂಪಹಳ್ಳಿ ತಿಮ್ಮೇಗೌಡ (ಕೃತಿ: ದಾಸಸಾಹಿತ್ಯ…)
ಲೇಖಕರ ಮೊದಲ ಸ್ವತಂತ್ರ ಕೃತಿ: ಅಕ್ಷತಾ ಶಿರಗಾರ (ಕೃತಿ: ಬೀದಿಯ ಹುಡುಗಿ ಬೆಂಕಿಯಾದಳು)
ಸಂಕೀರ್ಣ: ಡಾ. ಪ್ರದೀಪ್ ಕೆಂಜಿಗೆ (ಕೃತಿ: ನರವಾನರ)





