ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು: ಇಟಲಿಯ ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಲಿಡ್ಕರ್

Date:

ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸ ನಕಲು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಇಟಲಿ ಮೂಲದ ಐಷಾರಾಮಿ ಫ್ಯಾಷನ್‌ ಬ್ರಾಂಡ್‌ ಪ್ರಾಡಾ(ಪಿಆರ್‌ಎಡಿಎ) ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಕರ್ನಾಟಕ ಸರ್ಕಾರದ ಉದ್ಯಮ ಘಟಕವಾಗಿರುವ ಡಾ.ಬಾಬುಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) ಮುಂದಾಗಿದೆ.

- Advertisement -

ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಡಾ.ಕೆ.ಎಂ ವಸುಂಧರಾ, ಪ್ರಾಡಾ ಕಂಪನಿ ವಿರುದ್ಧ ₹500 ಕೋಟಿ ರೂ.ನಷ್ಟದ ದಾವೆ ಹೂಡಲು ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

“ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು 2018ರ ಡಿಸೆಂಬರ್ 11ರಂದು ಲಿಡ್ಕರ್ ಹಾಗೂ ಮಹಾರಾಷ್ಟ್ರದ ಲಿಡ್ ಕಾಂ ಜಂಟಿಯಾಗಿ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ (ರಿಜಿಸ್ಟ್ರೇಶನ್ ಅಂಡ್ ಪ್ರೊಟೆಕ್ಷನ್) 1999ರಡಿ ನೋಂದಣಿ ಮಾಡಿಸಲಾಗಿದೆ. ಆದರೆ, ಪ್ರಾಡಾ ಕಂಪನಿಯು ಕೊಲ್ಹಾಪುರಿ ಚಪ್ಪಲಿಗಳನ್ನು ‘ಲೆದರ್ ಪ್ಲಾಟ್ ಸ್ಯಾಂಡಲ್ಸ್ ಹೆಸರಿನಲ್ಲಿ ಸುಮಾರು 1.2 ಲಕ್ಷ ರೂ. ಮೌಲ್ಯಕ್ಕೆ ಫ್ಯಾಶನ್ ಶೋವೊಂದರಲ್ಲಿ ಪ್ರದರ್ಶನಕ್ಕಿಟ್ಟಿದೆ. ಈ ಕ್ರಮ ಜಿಐಜಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ಭಾರತದ ಪಾರಂಪರಿಕ ಅಸ್ಮಿತೆಗೆ ಧಕ್ಕೆಯಾಗಿದೆ” ಎಂದು ಅವರು ಹೇಳಿದ್ದಾರೆ.

prada

”ಈ ನಿಟ್ಟಿನಲ್ಲಿ ಜಿಐಜಿ ಕಾಯಿದೆ ಉಲ್ಲಂಘಿಸಿ ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ಬಳಸಿರುವ ಪ್ರಾಡಾ ಕಂಪನಿಯ ವಿರುದ್ಧ 500 ಕೋಟಿ ರೂ.ಗಳ ನಷ್ಟ ಹಾನಿ ದಾವೆ ಹೂಡಲು ತೀರ್ಮಾನಿಸಲಾಗಿದೆ. ಜತೆಗೆ, ನಿಗಮದ ಕಾನೂನು ಸಲಹೆಗಾರರಾದ ನಿವೃತ್ತ ನ್ಯಾ. ಗೋಪಾಲ್ ಅವರಿಂದ ಪ್ರಾಡಾ ಕಂಪನಿಗೆ ನೋಟಿಸ್ ಜಾರಿಗೊಳಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಮುಂದಿನ 7 ದಿನ ತೀವ್ರ ಗಾಳಿ, ಭಾರೀ ಮಳೆ: ಹವಾಮಾನ ಇಲಾಖೆ

ವಸುಂಧರಾ
ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ ವಸುಂಧರಾ

ಅಲ್ಲದೆ, ವಂಚನೆಗೆ ಪ್ರತಿಯಾಗಿ ಪ್ರಾಡಾ ಕಂಪನಿ ಲಿಡ್ಕ‌ರ್‌ನಿಂದ ಪಾದರಕ್ಷೆ ಖರೀದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಈ ಮೂಲಕ ಪಾರಂಪರಿಕ ಚರ್ಮ ಕುಶಲಕರ್ಮಿಗಳಿಗೆ ನಿರಂತರ ಉದ್ಯೋಗಾವಕಾಶ ಹಾಗೂ ಆರ್ಥಿಕ ಬಲ ತುಂಬುವುದು ಕಾನೂನು ಹೋರಾಟದ ಉದ್ದೇಶ ಎಂದು ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ ವಸುಂಧರಾ ತಿಳಿಸಿದ್ದಾರೆ.

ಕೊಲ್ಹಾಪುರಿ ಚಪ್ಪಲಿ ಬಗ್ಗೆ

ಕೊಲ್ಹಾಪುರಿ ಚಪ್ಪಲಿ ಭಾರತದ ಮಹಾರಾಷ್ಟ್ರದ ಕೊಲ್ಹಾಪುರದಿಂದ ಉಗಮವಾದ ಸಾಂಪ್ರದಾಯಿಕ ಕೈಯಿಂದ ಮಾಡಿದ ಚರ್ಮದ ಫೂಟ್‌ವೇರ್ ಆಗಿದೆ. ಇದು ತನ್ನ ವಿಶಿಷ್ಟ ವಿನ್ಯಾಸ, ಬಾಳಿಕೆ ಮತ್ತು ಕರಕುಶಲತೆಗೆ ಹೆಸರುವಾಸಿಯಾಗಿದೆ. ಈ ಚಪ್ಪಲಿಗಳನ್ನು ಸಾಮಾನ್ಯವಾಗಿ ಎರಡು ತೊಗಲಿನಿಂದ (ಗೋವಿನ ಅಥವಾ ಎಮ್ಮೆಯ ಚರ್ಮ) ತಯಾರಿಸಲಾಗುತ್ತದೆ, ಇದನ್ನು ಸಸ್ಯದ ತೊಗಲಿನಿಂದ ಒಗೆದು, ಕೈಯಿಂದ ಕೆತ್ತಲಾಗುತ್ತದೆ ಮತ್ತು ಕೆಲವೊಮ್ಮೆ ಸಾಂಪ್ರದಾಯಿಕ ವಿಧಾನಗಳಿಂದ ಬಣ್ಣ ಹಾಕಲಾಗುತ್ತದೆ.

ಕೊಲ್ಹಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಶಲಕರ್ಮಿಗಳು ಕೈಯಿಂದ ಚಪ್ಪಲಿಗಳನ್ನು ತಯಾರಿಸುತ್ತಾರೆ, ಇದಕ್ಕೆ ಗಂಟೆಗಟ್ಟಲೆ ಕೆಲಸ ಬೇಕಾಗುತ್ತದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯಲ್ಲಿ ಆಂತರಿಕ ಕುಸ್ತಿ; ಪ್ರತಾಪ್ ಸಿಂಹ – ನಾಗೇಂದ್ರ‌ ಬೀದಿ ಕಾಳಗ

ಮೈಸೂರು ಜಿಲ್ಲೆಯ ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಇನ್ಸ್‌ಪೆಕ್ಟರ್ ಧನಂಜಯ್‌...

ಮುಸ್ಲಿಂ ಮಹಿಳೆಯ ಸೌಹಾರ್ದತೆ: 18 ವರ್ಷಗಳಿಂದ ಗಣೇಶ ಸಮಿತಿ ಮುನ್ನಡೆಸುತ್ತಿರುವ ಜುಬೇದಾ

ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಒಡಕು ಮೂಡಿಸಲು ಹಿಂದುತ್ವ ಕೋಮುವಾದಿ...

ಕರ್ನಾಟಕ ಕಾಂಗ್ರೆಸ್‌ ವಾರ್‌ ರೂಂ ಅಧ್ಯಕ್ಷರಾಗಿ ತಿಪಟೂರು ಟುಡಾ ಶಶಿಧರ್‌ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಮುಂಬರುವ ಪಕ್ಷದ ಸಂಘಟನಾತ್ಮಕ ಹಾಗೂ...

ಮಹಿಳಾ ಉದ್ಯೋಗಿಗಳ ರಾತ್ರಿ ಪಾಳಿ ಸುರಕ್ಷತಾ ನಿಯಮ ತಿದ್ದುಪಡಿ: ಸರ್ಕಾರದ ನಡೆಗೆ ಕೆಐಟಿಯು ತೀವ್ರ ವಿರೋಧ

ಕರ್ನಾಟಕ ಸರ್ಕಾರವು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರುವ...