ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿಯ ಐತಿಹಾಸಿಕ ಜಾತ್ರೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಕ್ಟೋಬರ್ 29ರಿಂದ ನವೆಂಬರ್ 8ರವರೆಗೆ ಒಟ್ಟು 11 ದಿನಗಳ ಕಾಲ ದರ್ಶನೋತ್ಸವ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಸುಗಮ ಹಾಗೂ ಸುರಕ್ಷಿತ ದರ್ಶನ ಕಲ್ಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅ.29ರಂದು ಗರ್ಭಗುಡಿ ಬಾಗಿಲು ತೆರೆಯುವಿಕೆ
ಗುರುವಾರ, ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ದೇವಿಯ ದರ್ಶನ ಪಡೆಯಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.m
ಇದನ್ನೂ ಓದಿದ್ದೀರಾ?ಹಾಸನ | ಜಿಲ್ಲಾಧಿಕಾರಿಗೆ ‘ಮೊದಲು ಶಾಸಕರಿಗೆ ಗೌರವ ಕೊಡಿ’: ಹೆಚ್. ಡಿ ರೇವಣ್ಣ
ದೇವಾಲಯದ ಬಾಗಿಲು ತೆರೆಯುವ ಮೊದಲು ದೇವಾಲಯದ ಎದುರು ಬಾಳೆಕಂದು ಕಡಿಯುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ನಡೆಯಲಿದೆ. ರಾಜವಂಶಸ್ಥ ನಂಜರಾಜ ಅರಸು ಅವರು ಈ ಸಂಪ್ರದಾಯವನ್ನು ನೆರವೇರಿಸಲಿದ್ದಾರೆ. ನಂತರ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ದರ್ಶನೋತ್ಸವಕ್ಕೆ ಚಾಲನೆ ದೊರೆಯಲಿದೆ. ಹಾಸನಾಂಬ ದೇವಿಯ ದರ್ಶನೋತ್ಸವವು ಧಾರ್ಮಿಕ ನಂಬಿಕೆ, ಐತಿಹಾಸಿಕ ಪರಂಪರೆ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರತೀಕವಾಗಿದೆ. ವರ್ಷವಿಡೀ ಮುಚ್ಚಿರುವ ಗರ್ಭಗುಡಿಯ ಬಾಗಿಲು ಉತ್ಸವದ ಸಂದರ್ಭದಲ್ಲಿ ತೆರೆಯುವುದರಿಂದ ಈ ಕ್ಷೇತ್ರಕ್ಕೆ ವಿಶೇಷ ಮಹತ್ವವಿದೆ.





