SIR | ಬೆಂಗಳೂರಿನಲ್ಲೇ ASDDO ಅಡಿ ಭಾರೀ ಮತದಾರರ ಹೆಸರು ಅಳಿಸಿಹೋಗುವ ಅಪಾಯ!

Date:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೆಂಗಳೂರಿಗರಿಗೆ ಭಾರೀ ಆಘಾತ ಎದುರಾಗಿದೆ.‌ ASDDO ಅಡಿಯಲ್ಲಿ ಅಳಿಸಿ ಹೋಗಲಿರುವ ಮತಗಳಲ್ಲಿ ಬೃಹತ್ ಸಂಖ್ಯೆಯ ಮತಗಳು ಬೆಂಗಳೂರಿನವೇ ಆಗಿವೆ ಎಂದು ದತ್ತಾಂಶ ವಿಶ್ಲೇಷಣಾ ವರದಿಗಳು ಹೇಳಿವೆ.

- Advertisement -

ಕರ್ನಾಟಕದಲ್ಲಿ ಒಟ್ಟು 5.54 ಕೋಟಿ ನೋಂದಾಯಿತ ಮತದಾರರಿದ್ದಾರೆ. ಈ ಪೈಕಿ ಸುಮಾರು ಒಂದು ಕೋಟಿ ಮತದಾರರು ಬೆಂಗಳೂರಿನಲ್ಲೇ ಇದ್ದಾರೆ. ಎಸ್‌ಐಆರ್‌ನಲ್ಲಿ ರಾಜ್ಯಾದ್ಯಂತ ಒಟ್ಟು 84 ಲಕ್ಷ ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ಇವರಲ್ಲಿ ಸುಮಾರು 36.75 ಲಕ್ಷ ಮತದಾರರು ಬೆಂಗಳೂರಿನವರೇ ಆಗಿದ್ದಾರೆ ಎಂಬುದು ಗಮನಾರ್ಹವೂ, ಆಘಾತಕಾರಿಯೂ ಆಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ASDDO ವರ್ಗದಲ್ಲಿ, ಗೈರುಹಾಜರಾದವರು (Absent), ಬೇರೆಡೆಗೆ ಸ್ಥಳಾಂತರಗೊಂಡವರು (Shifted), ಮೃತಪಟ್ಟವರು (Dead), ನಕಲಿ ಹೆಸರು ಹೊಂದಿರುವವರು (Duplicate) ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಕೈಬಿಡಲಾದವರು (Others) ಸೇರಿರುತ್ತಾರೆ. ಮುಂಬರುವ ಆಗಸ್ಟ್ 17 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಿಂದ ಈ ವರ್ಗದಡಿ ಬರೋಬ್ಬರಿ 84 ಲಕ್ಷ ಮತದಾರರನ್ನು ಹೊರಹಾಕುವ ಸಾಧ್ಯಗಳಿವೆ.

ರಾಜ್ಯದ ಒಟ್ಟು 84 ಲಕ್ಷ ASDDO ಮತದಾರರ ಪೈಕಿ 36.75 ಲಕ್ಷ ಮತದಾರರು ಬೆಂಗಳೂರಿನವರೇ ಆಗಿದ್ದಾರೆ. ಅಂದರೆ, ರಾಜ್ಯದ ಒಟ್ಟು ಪ್ರಕರಣಗಳಲ್ಲಿ 46.7%ರಷ್ಟು ASDDO ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಈ ಪೈಕಿ, ಬೆಂಗಳೂರು ನಗರ ಕ್ಷೇತ್ರದಲ್ಲಿ 13.55 ಲಕ್ಷ, ದಕ್ಷಿಣದಲ್ಲಿ 9.35 ಲಕ್ಷ, ಉತ್ತರದಲ್ಲಿ 9 ಲಕ್ಷ ಹಾಗೂ ಕೇಂದ್ರ ಕ್ಷೇತ್ರದಲ್ಲಿ 7.40 ಲಕ್ಷ ಮತದಾರರ ಹೆಸರುಗಳು ಅಳಿಸಿಹೋಗುವ ಅಪಾಯಗಳಿವೆ.

ಮುಖ್ಯವಾಗಿ, ಬೆಂಗಳೂರಿನಲ್ಲಿ ASDDO ವರ್ಗದಲ್ಲಿ ಇಷ್ಟೊಂದು ಪ್ರಕರಣಗಳು ದಾಖಲಾಗಲು ಪ್ರಮುಖ ಕಾರಣ; 2002ರ ಹಳೆಯ ಮತದಾರರ ದಾಖಲೆಗಳು ಪತ್ತೆಯಾಗದೇ ಇರುವುದು ಎನ್ನಲಾಗಿದೆ. ವಿಶೇಷವಾಗಿ, 2008ರಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಿಂದಾಗಿ ಮತಗಟ್ಟೆಗಳು ಮತ್ತು ಕ್ಷೇತ್ರಗಳ ಗಡಿಗಳು ಬದಲಾಗಿವೆ. ಹೀಗಾಗಿ ತಾಂತ್ರಿಕವಾಗಿ ಹಳೆಯ ದತ್ತಾಂಶಗಳನ್ನು ಪ್ರಸ್ತುತ ಮಾಹಿತಿಯೊಂದಿಗೆ ಮ್ಯಾಪ್ ಮಾಡಲು ಬಿಎಲ್‌ಒಗಳಿಗೆ ಕಷ್ಟವಾಗಿದೆ. ಜೊತೆಗೆ, ಮಹದೇವಪುರ ಸೇರಿದಂತೆ ಹಲವು ಕ್ಷೇತ್ರಗಳ ಕೆಲವು ಬೂತ್‌ಗಳಲ್ಲಿನ 2002ರ ಮತಪಟ್ಟಿಯ ವಿವರವನ್ನು‌ ಚುನಾವಣಾ ಆಯೋಗವು ವೆಬ್‌ಸೈಡ್‌ನಲ್ಲಿಯೂ, ಬಿಎಲ್‌ಒಗಳಿಗೂ ಒದಗಿಸಿಲ್ಲ ಎಂದು ಹೇಳಲಾಗಿದೆ. ಆಯೋಗದ ಎಡವಟ್ಟಿನಿಂದ ಈಗ ಭಾರೀ ಪ್ರಮಾಣದ ಮತದಾರರು ತಮ್ಮ ಹೆಸರುಗಳನ್ನು ಕಳೆದುಕೊಳ್ಳುವ ಅಪಾಯವಿದೆ.

ಇದಲ್ಲದೆ, ತಾಂತ್ರಿಕ‌ ವ್ಯತ್ಯಾಸ ಹಾಗೂ ಮ್ಯಾಪಿಂಗ್ ದೋಷಗಳ ಕಾರಣದಿಂದಾಗಿ ರಾಜ್ಯಾದ್ಯಂತ ಒಟ್ಟು 2 ಕೋಟಿ ಮತದಾರರ ಹೆಸರುಗಳನ್ನು ಆಯೋಗವು ಅಳಿಸಿ ಹಾಕುವ ಅಪಾಯವಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ...

ಕಬ್ಬು ಬೆಳೆಗಾರರ ರಕ್ಷಣೆಗೆ ಪ್ರತ್ಯೇಕ ವಿಮೆ, ನ್ಯಾಯಯುತ ಬೆಲೆ ಸೇರಿದಂತೆ 12 ಬೇಡಿಕೆ

ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹6,000 ಕನಿಷ್ಠ...

ಕೊಪ್ಪಳ | ಪರಿಸರ ನಿಯಮ ಉಲ್ಲಂಘನೆ: 8 ಕಾರ್ಖಾನೆಗಳ ಬಂದ್‌ಗೆ ನಿರ್ಧಾರ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳ...