SSLC RESULT | ಸತತ ಎರಡು ವರ್ಷಗಳಿಂದ ಹಿಂದಿಯಲ್ಲೇ ಅಧಿಕ ಸಾಧನೆ: ಶಿಕ್ಷಣದಲ್ಲಿಯೂ ರಾಜಕೀಯವೇ?

Date:

ಸರ್ಕಾರವು ತಜ್ಞರ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಬೇಕು. ಕನ್ನಡ ಶಿಕ್ಷಕರಿಗೆ ತರಬೇತಿ ನೀಡಬೇಕು. ಪಠ್ಯಪುಸ್ತಕಗಳ ಗುಣಮಟ್ಟದಲ್ಲಿ ಬದಲಾವಣೆ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೆ ಭಾಷಾ ಆಸಕ್ತಿ ಮೂಡಿಸುವ ಹೊಸ ವಿಧಾನಗಳನ್ನು ಅನುಸರಿಸಬೇಕು. ಕನ್ನಡವನ್ನು ಕೇವಲ ಪಾಸಾಗಬೇಕಾದ ವಿಷಯವನ್ನಾಗಿ ಅಲ್ಲ, ಕಲಿಯಲು ಇಷ್ಟಪಡುವ ವಿಷಯವನ್ನಾಗಿ ರೂಪಿಸಬೇಕು. 

ರಾಜ್ಯದಲ್ಲಿ ಸತತ ಎರಡು ವರ್ಷಗಳಿಂದ ಕನ್ನಡ ವಿಷಯಕ್ಕಿಂತ ಹಿಂದಿ ವಿಷಯದಲ್ಲೇ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡುತ್ತಿರುವುದನ್ನು SSLC RESULT ತೋರಿಸುತ್ತಿದೆ. ಈ ಬೆಳವಣಿಗೆ ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಭಾಷಾ ನೀತಿಯು ರಾಜಕಾರಣದಿಂದ ಕೂಡಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಪ್ರಾಯವಾಗಿದೆ.

- Advertisement -

ಇದೇ ಸಂದರ್ಭದಲ್ಲಿ, ಹಿಂದಿ ವಿಷಯಕ್ಕೆ ಅಂಕಗಳ ಬದಲು ಗ್ರೇಡ್ ನೀಡುವ ಸರ್ಕಾರದ ಯೋಚನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ತೆಗೆದುಕೊಳ್ಳಲಾದ ಈ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಭಯ ಉಂಟುಮಾಡಿತು. ವರ್ಷಗಳ ಪರಿಶ್ರಮವನ್ನು ಕ್ಷಣಾರ್ಧದಲ್ಲಿ ಬದಲಾಯಿಸುವಂತಹ ನೀತಿ ಕ್ರಮಗಳು ವಿದ್ಯಾರ್ಥಿಗಳ ಮನೋಸ್ಥಿತಿಗೆ ಧಕ್ಕೆ ಉಂಟುಮಾಡುತ್ತವೆ ಎಂಬುದನ್ನು ಸರ್ಕಾರ ಅರಿಯಬೇಕಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ನ್ಯಾಯಾಲಯವು ಈ ನಿರ್ಧಾರಕ್ಕೆ ತಿರುಗೇಟು ನೀಡಿ, ಅಂಕಗಳನ್ನೇ ನೀಡಬೇಕೆಂದು ಆದೇಶಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ಕ್ರಮ. ಆದರೆ, ಈ ಘಟನೆಯು ಸರ್ಕಾರದ ಶಿಕ್ಷಣ ನೀತಿ ರೂಪಿಸುವ ವಿಧಾನದಲ್ಲಿನ ದುರ್ಬಲತೆಯನ್ನು ಬಯಲಿಗೆಳೆದಿದೆ. ಶಿಕ್ಷಣದಂತಹ ಸಂವೇದನಾಶೀಲ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳನ್ನು ಆಲೋಚನೆ ಇಲ್ಲದೆ, ತುರ್ತು ನಿರ್ಧಾರಗಳ ಮೂಲಕ ಜಾರಿಗೆ ತರುವುದು ಅಸಮಂಜಸ

2025ರ ಎಸ್‌ಎಸ್‌ಎಲ್‌ಸಿ ಫಲಿತಾಂಶ

2025ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕನ್ನಡ ವಿಷಯದಲ್ಲಿ ಶೇ.88.56ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ಹಿಂದಿ ವಿಷಯದಲ್ಲಿ ಶೇ.89.02ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಅಂತರ ತುಂಬಾ ಕಡಿಮೆ ಇದ್ದರೂ, ಹಿಂದಿ ವಿಷಯ ಮೇಲುಗೈ ಸಾಧಿಸಿರುವುದು ಗಮನಾರ್ಹ.

WhatsApp Image 2026 04 25 at 1.00.50 PM

2025ರ ಪೂರ್ಣ ಅಂಕಗಳ ವಿಚಾರದಲ್ಲಿ ಈ ವ್ಯತ್ಯಾಸ ಇನ್ನಷ್ಟು ಸ್ಪಷ್ಟವಾಗುತ್ತದೆ. ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದವರು 7,115 ಮಂದಿ ಇದ್ದರೆ, ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದವರು 15,889 ಮಂದಿ. ಇದು ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.

2026ರ ಎಸ್‌ಎಸ್‌ಎಲ್‌ಸಿ ಫಲಿತಾಂಶ

2026ರ ಫಲಿತಾಂಶದಲ್ಲಿ ಈ ವ್ಯತ್ಯಾಸ ಇನ್ನಷ್ಟು ಹೆಚ್ಚಾಗಿದೆ. ಕನ್ನಡ ವಿಷಯದಲ್ಲಿ 7,69,926 ವಿದ್ಯಾರ್ಥಿಗಳಲ್ಲಿ 7,48,660 ಮಂದಿ(97.24%) ಪಾಸ್ ಆಗಿದ್ದರೆ, ಹಿಂದಿ ವಿಷಯದಲ್ಲಿ 7,69,751ವಿದ್ಯಾರ್ಥಿಗಳಲ್ಲಿ 7,58,623 ವಿದ್ಯಾರ್ಥಿಗಳು(98.55%) ಪಾಸ್ ಆಗಿದ್ದಾರೆ. ಇಲ್ಲಿ ಸುಮಾರು ಶೇ.1.31ರಷ್ಟು ಅಂತರ ಕಂಡುಬರುತ್ತಿದ್ದು, ಹಿಂದಿ ವಿಷಯದಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದಾರೆ.

WhatsApp Image 2026 04 25 at 1.00.50 PM 1

ಪೂರ್ಣ ಅಂಕಗಳ ವಿಚಾರದಲ್ಲಿನ ವ್ಯತ್ಯಾಸ ಮತ್ತಷ್ಟು ದೊಡ್ಡದಿದ್ದು, ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದವರು 10,341 ಮಂದಿ ಇದ್ದರೆ, ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದವರು 31,255 ಮಂದಿ. ಇದು ಹಿಂದಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಮಟ್ಟದ ಅಂಕಗಳನ್ನು ಗಳಿಸುತ್ತಿರುವುದನ್ನು ತೋರಿಸುತ್ತದೆ.

ಈ ಅಂಕಿಅಂಶಗಳು ವಿದ್ಯಾರ್ಥಿಗಳು ಕನ್ನಡಕ್ಕಿಂತ ಹಿಂದಿ ವಿಷಯದಲ್ಲಿ ಹೆಚ್ಚು ಸಾಧನೆ ಮಾಡುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.

ಈ ಕಾರಣದಿಂದಲೇ ರಾಜ್ಯದ ವಿದ್ಯಾರ್ಥಿಗಳು ಹಿಂದಿ ವಿಷಯಕ್ಕೆ ಗ್ರೇಡ್ ಬೇಡ ಅಂಕ ನೀಡಿ ಇದರಿಂದ ನಮ್ಮ ಒಟ್ಟು ಶೇಕಡಾ ಅಂಕಗಳು ಹೆಚ್ಚಾಗಲು ಅನುಕೂಲವಾಗುತ್ತದೆ ಎಂದು ಆಗ್ರಹಿಸುತ್ತಿದ್ದಾರೆ.

ಈ ಕುರಿತು ದಿನ.ಕಾಮ್ ಜತೆ ವಿದ್ಯಾರ್ಥಿನಿ ಲಕ್ಷ್ಮೀ ಅವರು ಮಾತನಾಡಿ, “ಹಿಂದಿ ವಿಷಯಕ್ಕೆ ಗ್ರೇಡ್ ನೀಡಿದ್ದರೆ ನಮಗೆ ಅನ್ಯಾಯವಾಗುತ್ತಿತ್ತು. ನಾನು ಹಿಂದಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದೇನೆ. ಇದರಿಂದ ಒಟ್ಟು ಫಲಿತಾಂಶ ಹೆಚ್ಚಿಗೆ ಆಗಲು ಸಾಧ್ಯವಾಗಿದೆ. ನ್ಯಾಯಾಲಯದ ಆದೇಶದಿಂದ ನಮಗೆ ಅನುಕೂಲವಾಗಿದೆ. ಮುಂದಿನ ವರ್ಷಗಳಲ್ಲಿಯೂ ಅಂಕ ಪದ್ಧತಿ ಮುಂದುವರಿದರೆ ವಿದ್ಯಾರ್ಥಿಗಳಿಗೆ ಒಳ್ಳೆಯದು” ಎಂದು ಹೇಳಿದ್ದಾರೆ.

ವಿದ್ಯಾರ್ಥಿ ಜಯಶ್ರೀ ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿ, “ಹಿಂದಿಗೆ ಗ್ರೇಡ್ ನೀಡುವ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಒಟ್ಟು ಅಂಕಗಳಲ್ಲಿ ವ್ಯತ್ಯಾಸ ಆಗುತ್ತದೆ. ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಕಗಳೇ ಮುಖ್ಯವಾಗುತ್ತವೆ. ಹೀಗಾಗಿ ಹಿಂದಿಗೂ ಅಂಕ ಪದ್ಧತಿಯೇ ಮುಂದುವರಿಯಬೇಕು” ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಈ ಅಭಿಪ್ರಾಯ ಗಮನಿಸಿದರೆ ಸರ್ಕಾರವು ಶಿಕ್ಷಣವನ್ನು ರಾಜಕೀಯದಿಂದ ದೂರ ಇಡುವುದು ಅತ್ಯಂತ ಮುಖ್ಯವಾಗಿದ್ದು, ಸರ್ಕಾರದ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕೇ ಹೊರತು ಯಾವುದೇ ತಾತ್ಕಾಲಿಕ ಲಾಭದ ಆಧಾರದ ಅಥವಾ ರಾಜಕೀಯ ಸಿದ್ಧಾಂತಗಳ ಆದಾರದ ಮೇಲೆ ಆಗಿರಬಾರದು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಕಾರಣ ಏನು? ಕನ್ನಡ ಭಾಷೆಯ ಬೋಧನಾ ವೈಫಲ್ಯವೋ ಅಥವಾ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ಕಲಿಯಲು ಆಸಕ್ತಿಯ ಕೊರತೆ ಇದೆಯೇ ಎಂಬ ಪ್ರಶ್ನೆಗಳಿಗೆ ಸರ್ಕಾರವು ಸ್ಪಷ್ಟ ಉತ್ತರ ಕಂಡುಹಿಡಿಯಬೇಕಿದೆ. ಹಾಗಾದಾಗ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ.

ಇದನ್ನೂ ಓದಿದ್ದೀರಾ? ಒಳಮೀಸಲಾತಿಗೆ ಸಂಬಂಧಿಸಿದಂತೆ ದೇಶದಲ್ಲಿಯೇ ಮಹತ್ವಪೂರ್ಣ ನಿರ್ಧಾರವಿದು: ಸಿದ್ದರಾಮಯ್ಯ

ಇದಕ್ಕಾಗಿ ಸರ್ಕಾರವು ತಜ್ಞರ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಬೇಕು. ಕನ್ನಡ ಶಿಕ್ಷಕರಿಗೆ ತರಬೇತಿ ನೀಡಬೇಕು. ಪಠ್ಯಪುಸ್ತಕಗಳ ಗುಣಮಟ್ಟದಲ್ಲಿ ಬದಲಾವಣೆ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೆ ಭಾಷಾ ಆಸಕ್ತಿ ಮೂಡಿಸುವ ಹೊಸ ವಿಧಾನಗಳನ್ನು ಅನುಸರಿಸಬೇಕು. ಕನ್ನಡವನ್ನು ಕೇವಲ ಪಾಸಾಗಬೇಕಾದ ವಿಷಯವನ್ನಾಗಿ ಅಲ್ಲ, ಕಲಿಯಲು ಇಷ್ಟಪಡುವ ವಿಷಯವನ್ನಾಗಿ ರೂಪಿಸಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ಸರ್ಕಾರವು ಕನ್ನಡ ಮತ್ತು ಹಿಂದಿ ವಿಷಯಗಳ ನಡುವಿನ ಹೋಲಿಕೆಯನ್ನು ಸ್ಪರ್ಧೆಯಂತೆ ನೋಡದೆ, ಎರಡೂ ಭಾಷೆಗಳಲ್ಲು ವಿದ್ಯಾರ್ಥಿಗಳು ಸಮಾನವಾಗಿ ಸಾಧನೆ ಮಾಡುವಂತಹ ಪರಿಸರ ನಿರ್ಮಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ನ್ಯಾಯ ಸಿಗುವಂತೆ, ಸ್ಪಷ್ಟ ಮತ್ತು ಸ್ಥಿರ ಶಿಕ್ಷಣ ನೀತಿಯನ್ನು ರೂಪಿಸುವುದು ಈ ಸಂದರ್ಭದಲ್ಲಿ ಹೆಚ್ಚು ಅವಶ್ಯಕವಾಗಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಅಂತಿಮ ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರಿದೆಯೇ ಪರಿಶೀಲಿಸಿ

ರಾಜ್ಯದಲ್ಲಿ ಗ್ಯಾನೇಶ್‌ ಕುಮಾರ್‌/ಚುನಾವಣಾ ಆಯೋಗ ಹೇರಿದ್ದ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ...

ಪೂನಾದ ‘IISER’ ಗ್ರಂಥಾಲಯದಿಂದ ಉಮರ್ ಖಾಲಿದ್ ಪುಸ್ತಕ ತೆರವು

ಪುಣೆಯಲ್ಲಿರುವ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್' (IISER)...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ, ಬಡಪಾಯಿ ಜನರಿಗೆ ರೊಟ್ಟಿಯೂ ತುಟ್ಟಿ!

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ...

ದೀಪಾವಳಿ ವ್ಯಾಪಾರದ ಮೇಲೆ ರ‍್ಯಾಲಿ ಬಿಸಿ; ರಾಹುಲ್ ಗಾಂಧಿಗೆ ಮತ್ತೊಮ್ಮೆ ಪತ್ರ ಬರೆದ ದೆಹಲಿ ವ್ಯಾಪಾರಿಗಳ ಸಂಘ

ದೆಹಲಿಯಲ್ಲಿ ನವೆಂಬರ್ 1ರಂದು ನಡೆಯಲಿರುವ ಇಂಡಿಯಾ (INDIA) ಮೈತ್ರಿಕೂಟದ ಬೃಹತ್ ಪ್ರತಿಭಟನಾ...