ಚಿಕ್ಕಮಗಳೂರು ನಗರದ ಖಾಸಗೀ ಹೋಟೆಲ್‌ನಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆ, ಪರ್ಯಾಯ ಕಾನೂನು ವೇದಿಕೆ ಸಹಯೋಗದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಪ್ರಯುಕ್ತ ಮಂಗಳವಾರ ಆ ಯೋಜಿಸಿದ್ದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಂಬಂಧಿಸಿದ ಕಾನೂನುಗಳ ಸಮೀಕ್ಷಾ ವರದಿ ಕುರಿತ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿ ಎಂ.ಎನ್.ನಾಗರಾಜು ಉದ್ಘಾಟಿಸಿ ಸಾರ್ವಜನಿಕರು ಹೆಚ್ಚಿನದಾಗಿ ಕಾನೂನು ಅರಿವು ಪಡೆದು ಕೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರ ಶೋಷಿತ ಸಮುದಾಯಗಳ ಕಲ್ಯಾಣಕ್ಕಾಗಿ ರಾಜ್ಯದಲ್ಲಿ ಬಹಳ ಕಾನೂನು ರೂಪಿಸಿದ್ದು, ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಭೂಹೀನ ದಲಿತ ಸಮುದಾಯವು ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಬ ಹುದಾಗಿದ್ದು, ಜಿಲ್ಲಾಡಳಿತ ಸಮಗ್ರವಾಗಿ ಪರಿಶೀಲನೆ ನಡೆಸಿ ಭೂಹೀನಾ ದಲಿತ ಸಮು ದಾಯಕ್ಕೆ ಭೂಮಿ ಒದಗಿಸುವ ಕಾನೂ ನುಗಳಿದ್ದು, ಸಮುದಾಯವು ಸಮರ್ಪ ಕವಾಗಿ ಬಳಸಿಕೊಳ್ಳಬಹುದು ಎಂದರು.ದಲಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಾಗಾರಗಳು ಹೆಚ್ಚಿನ ಪ್ರಮಾಣ ದಲ್ಲಿ ಆಗಬೇಕಿದೆ. ಹೀಗಾಗಿ ಜಿಲ್ಲಾಡಳಿತವು ಈ ರೀತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ನಿಂತುಕೊಳ್ಳಲಿದೆ. ಎಸ್ಸಿ, ಎಸ್ಟಿ ಸಮಾಜವು ಆರ್ಥಿಕ, ಸಾಮಾಜಿಕ ಗಟ್ಟಿಯಾಗುವುದೇ ಮೂಲ ಧೈಯ ಎಂದು ಜಿಲ್ಲಾಧಿಕಾರಿ ಎಂ.ಎನ್.ನಾಗರಾಜ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಭೂಮಿ ಉಳ್ಳವರ ಬಳಿಯೇ ಬಲವಿರುತ್ತದೆ. ಶೋಷಿತ ಸಮುದಾಯಗಳ ಕುಟುಂಬಗಳ ಬಳಿ ಭೂಮಿ ಇಲ್ಲದಿರುವುದು ಅವರ ಅಭಿವೃದ್ದಿಗೆ ಅಡ್ಡಿಯಾಗಲಿದೆ. ಜಿಲ್ಲೆಯಲ್ಲಿ ದೌರ್ಜನ್ಯ ತಡೆ ಕಾಯ್ದೆಯಡಿ ಚಿಕ್ಕಮಗಳೂರು ಜಿಲ್ಲೆಯ SC/ST ಸಮುದಾಯಕ್ಕೆ ಸಂಬಂಧಿಸಿದ ಕಾನೂನುಗಳ ಸಮೀಕ್ಷಾ ವರದಿ ಬಾ| ಬಿ.ಆರ್ ಅಂಬೇಡ್ಕರ್ ಮತ್ತು ಡಾ| ಬಾಬು ಜಗಜೀವನ್ ರಾಂ ರವರ ಜಯಂತಿ ಪ್ರಯುಕ್ತ ಸಮಾಲೋಚನಾ ಸಭೆ ತುಂಬಾ ಕಡಿಮೆ ಪ್ರಕರಣಗಳಲ್ಲಿ ಶಿಕ್ಷೆ ಆಗುತ್ತಿದೆ, ಇದನ್ನು ನಿವಾರಿಸಲು ಯುವ ವಕೀಲರು ಶ್ರಮಿಸಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಬಡ ಜನರಿಗೆ, ಶೋಷಿತರಿಗೆ ಉಚಿತ ಕಾನೂನು ನೆರವು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ಮತಗಳ ಮರುಎಣಿಕೆ!.
ಈ ಕಾರ್ಯಕ್ರಮದಲ್ಲಿ ಕಳಸ ತಹಶೀಲ್ದಾರ್ ನವೀನ್‌ಕುಮಾರ್, ಬೆಂಗಳೂರು ಪರ್ಯಾಯ ವೇದಿಕೆ ವಕೀಲರಾದ ವಿನಯ್ ಶ್ರೀನಿವಾಸ್, ಸದಸ್ಯ ಕೆ.ಎಲ್.ಕಾರ್ತೀಕ್, ಸಂವಿಧಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ವಕೀಲೆ ಚೈತ್ರ ತುಮಕೂರು, ಫಿಲೋಮಿನಾ, ಧರಗುಣಿ ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.





