ಮಾತಿನ ಭರವಸೆಯಲ್ಲಿಯೇ ಉಳಿದ ಕಂಪನಿಗಳಿಂದ ರಸ್ತೆ ದುರಸ್ಥಿ

Date:

ಕೋಲಾರ : ತಾಲೂಕಿನ ನರಸಾಪುರ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಮುಖ್ಯ ರಸ್ತೆಯ ಮಧ್ಯೆ ಗುಂಡಿಗಳು ಬಿದ್ದು ಹಾಳಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

- Advertisement -

ರಾಮಸಂದ್ರ ಗ್ರಾಮದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 75 ರಿಂದ ಸೇಫ್ ಎಕ್ಸ್ಪ್ರೆಸ್ ಕಂಪನಿಯವರೆಗೂ ಹಾಳಾದ ರಸ್ತೆಯನ್ನು ಸಿ ಎಸ್ ಆರ್ ಯೋಜನೆಯ ನಿಧಿಯಲ್ಲಿ ನೂತನ ರಸ್ತೆಯನ್ನು ಮಾಡುತ್ತೇವೆ ಎಂದು ಆ ರಸ್ತೆಯ ಪಕ್ಕದಲ್ಲಿರುವ ಕಂಪನಿಗಳಾದ ಸೇಫ್ ಎಕ್ಸ್ಪ್ರೆಸ್, ಫ್ಲಿಪ್ ಕಾರ್ಟ್ ಮತ್ತು ನೈಕಾ ಕಂಪನಿಗಳು ಭರವಸೆ ನೀಡಿದ್ದವು,

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಆದರೆ ಭರವಸೆಯಂತೆ ಇದುವರೆವಿಗೊ ರಸ್ತೆಯ ಕಾಮಗಾರಿಯನ್ನು ಪ್ರಾರಂಭ ಮಾಡಿಲ್ಲ ತಾತ್ಕಾಲಿಕವಾಗಿ ಮಣ್ಣನ್ನು ಸಹ ಹಾಕಿರುವುದಿಲ್ಲ, ಸೇಫ್ ಎಕ್ಸ್ಪ್ರೆಸ್, ಫ್ಲಿಪ್ಕಾರ್ಟ್ ಮತ್ತು ನೈಕಾ ಕಂಪನಿಗಳಿಗೆ ಭೇಟಿ ನೀಡಿ ರಸ್ತೆಯನ್ನು ಸರಿಪಡಿಸಿ ಕೊಡಿ ಎಂದು ಕೇಳಿದಾಗ ಹಿರಿಯ ಅಧಿಕಾರಿಗಳು ಗಮನಕ್ಕೆ ತರಲಾಗಿದೆ ಎಂದು ಸುಮಾರು 3 ತಿಂಗಳುಗಳಿಂದ ಸತಾಯಿಸುತಿದ್ದಾರೆ, ಮತ್ತೆ ಕೇಳಿದಾಗಲೆಲ್ಲ ಮಳೆಯ ನೆಪ ಹಾಕಿ ರಸ್ತೆ ಮಾಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು,

ಜಿಲ್ಲೆಯ ಗಡಿ ಗ್ರಾಮವಾದ ರಾಮಸಂದ್ರ ಗ್ರಾಮಕ್ಕೆ ಶಾಸಕ ಕೊತ್ತೂರು ಜಿ ಮಂಜುನಾಥ್ ಅವರ ಅನುದಾನದಲ್ಲಿ ಗ್ರಾಮದ ಇತಿಹಾಸದಲ್ಲಿಯೇ ಗ್ರಾಮದ ಒಳಗಡೆ 3 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ, ಆದರೆ ರಸ್ತೆಯನ್ನು ಮಾಡುತ್ತೇವೆ ಎಂದು ಒಪ್ಪಿಕೊಂಡ ಕಂಪನಿಗಳು ಇದುವರೆಗೂ ರಸ್ತೆಯನ್ನು ಸರಿಪಡಿಸಿಲ್ಲ, ರಸ್ತೆಯ ಈ ಹಳ್ಳಗಳಲ್ಲಿ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು

ರಾಮಸಂದ್ರ ಗ್ರಾಮದ ಕೆರೆಯಲ್ಲಿ ಸುಮಾರು 25 ರಿಂದ 30 ಅಡಿಗಳಷ್ಟು ಹಾಳ ಇಟ್ಟು ರಾಷ್ಟ್ರೀಯ ಎಕ್ಸ್ಪ್ರೆಸ್ ಹೆದ್ದಾರಿಗೆ ಮತ್ತು ಕ್ರೌನ್ ಕಂಪನಿಯವರು ಮಣ್ಣನ್ನು ತೆಗೆದುಕೊಂಡು ರಸ್ತೆಗಳು ಹಾಳು ಆಗಲು ಅವರು ಸಹ ಕಾರಣರಾಗಿರುತ್ತಾರೆ, ಮಣ್ಣನ್ನು ತೆಗೆಯುವ ವಿಚಾರದಲ್ಲಿ ಕೇಳಲು ಹೋದಾಗ ದೌರ್ಜನ್ಯ ಮಾಡಲು ಬಂದಿದ್ದಾರೆ, ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿದ್ದು ಕೆಲವು ನಿಯಮಗಳನ್ನು ಗಾಳಿಗೆ ತೋರಿದ್ದಾರೆ ಎಂದರು.

ಇದನ್ನು ಓದಿದ್ದೀರಾ..? ಇಂಜಿನಿಯರಿಂಗ್ ಕಾಲೇಜ್ ಕಾಮಗಾರಿ ಕೆಲಸ ನೋಡಿ ಮಾಜಿ ಶಾಸಕರಿಗೆ ಹೊಟ್ಟೆ ಉರಿಯುತ್ತದೆ

ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ನಿಗದಿತ ಹೊರೆ ಮಿತಿಗಳಿಗಿಂತ ಹೆಚ್ಚಿನ ಲೋಡ್ ಮಾಡಿಕೊಂಡು ಸಂಚರಿಸುತ್ತಿವೆ ಟ್ರಕ್ ಓವರ್ ಲೋಡಿಂಗ್ ನಿಯಮಗಳನ್ನು ಗಾಳಿಗೆ ತೂರಿವೆ, ಕೂಡಲೇ ರಸ್ತೆಯನ್ನು ನೀಡಿರುವ ಭರವಸೆಯಂತೆ ಕಂಪನಿಯವರು ರಸ್ತೆಯನ್ನು ಸರಿಪಡಿಸಬೇಕೆಂದು ವೇಮಗಲ್ ನರಸಾಪುರ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಮಸಂದ್ರ ಕುಮಾರ್ ಒತ್ತಾಯಿಸಿದ್ದಾರೆ,

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...