ಬಾಗೇಪಲ್ಲಿ : ಒಬ್ಬ ರೈತನ ಜೀವ ದೇಶಕ್ಕೆ ಅನ್ನ ನೀಡುವ ಶಕ್ತಿ. ಆ ಶಕ್ತಿಯನ್ನು ಕಾಪಾಡಿಕೊಳ್ಳುವುದು ಹೆಲ್ಮೆಟ್ ಧರಿಸುವ ಒಂದು ಸಣ್ಣ ಶಿಸ್ತಿನಿಂದ ಸಾಧ್ಯ ಎಂದು ಧಾತ್ರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ವಿ ಪ್ರಶಾಂತ್ ಕುಮಾರ್ ತಿಳಿಸಿದರು.
ಧಾತ್ರಿ ಸೇವಾ ಟ್ರಸ್ಟ್ ಮತ್ತು ಗ್ರೀನ್ ಇಂಡಿಯಾ ಫೋರಂ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಲ್ಮೆಟ್ ವಿತರಿಸಿ ಮಾತನಾಡಿದ ಅವರು ರೈತರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ರೈತರು ಹೊಲಗದ್ದೆಗಳಿಗೆ ಹೋಗುವಾಗ ಅಥವಾ ಹತ್ತಿರದ ಮಾರುಕಟ್ಟೆಗೆ ಹೋಗುವಾಗ “ಸ್ವಲ್ಪ ದೂರವೇ ತಾನೇ” ಎಂದು ನಿರ್ಲಕ್ಷ್ಯ ಮಾಡಿ ಹೆಲ್ಮೆಟ್ ಧರಿಸುವುದಿಲ್ಲ.
ರೈತರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.
ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂಭವಿಸಿದಾಗ ತಲೆಗೆ ಆಗುವ ತೀವ್ರ ಸ್ವರೂಪದ ಪೆಟ್ಟುಗಳನ್ನು ತಡೆಯಬಹುದು. ರೈತ ಕುಟುಂಬದ ಆಧಾರಸ್ತಂಭ. ಅವರ ಸುರಕ್ಷತೆಯೇ ಕುಟುಂಬದ ಸುಸ್ಥಿರತೆ ಎಂಬುದನ್ನು ಮನವರಿಕೆ ಮಾಡಿಕೊಡುವುದು. ಕೃಷಿ ಮೇಳಗಳು ನಡೆದಾಗ ಅಲ್ಲಿ ಒಂದು ವಿಶೇಷ ಮಳಿಗೆಯನ್ನು ತೆರೆದು, ಸುರಕ್ಷತಾ ಸಾಧನಗಳ ಬಗ್ಗೆ ಮಾಹಿತಿ ನೀಡಬೇಕಾಗಿದೆ.
ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದ ಸ್ಥಳೀಯ ವ್ಯಕ್ತಿಗಳ ಉದಾಹರಣೆ ಬಹಳಷ್ಟು ಇದೆ. ಹೆಲ್ಮೆಟ್ ಹೊರೆ ಅಲ್ಲ, ಅದು ನಿಮ್ಮ ಪ್ರಾಣದ ಕವಚ. ರೈತರು ಹೆಲ್ಮೆಟ್ ಅನ್ನು ಒಂದು ಅನಗತ್ಯ ವಸ್ತು ಎಂದು ಭಾವಿಸಬಾರದು.
ಕಡಿಮೆ ವೇಗದಲ್ಲೂ ಹೆಲ್ಮೆಟ್ ಇಲ್ಲದಿದ್ದರೂ ಅಪಾಯವಿದೆ. ಹಳ್ಳಿ ರಸ್ತೆಗಳು ಗುಂಡಿ ಬಿದ್ದಿರಬಹುದು ಅಥವಾ ಪ್ರಾಣಿಗಳು ಅಡ್ಡ ಬರಬಹುದು, ಆದ್ದರಿಂದ ಹೆಲ್ಮೆಟ್ ಕಡ್ಡಾಯ. ನೀವು ಹೆಲ್ಮೆಟ್ ಧರಿಸಿದರೆ ನಿಮ್ಮ ಮುಂದಿನ ಪೀಳಿಗೆಯೂ ಅದನ್ನು ಪಾಲಿಸುತ್ತದೆ. ಒಬ್ಬ ರೈತನ ಜೀವ ದೇಶಕ್ಕೆ ಅನ್ನ ನೀಡುವ ಶಕ್ತಿ. ಆ ಶಕ್ತಿಯನ್ನು ಕಾಪಾಡಿಕೊಳ್ಳುವುದು ಹೆಲ್ಮೆಟ್ ಧರಿಸುವ ಒಂದು ಸಣ್ಣ ಶಿಸ್ತಿನಿಂದ ಸಾಧ್ಯ ಆದ್ದರಿಂದ ಪ್ರತಿಯೊಬ್ಬರೂ ಸಹ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಹಾಲು ಡೇರಿ ಕಾರ್ಯದರ್ಶಿಗಳು, ಸಿಬ್ಬಂದಿಗಳ ಬೇಡಿಕೆ ಈಡೇರಿಕೆ
ಈ ಸಂದರ್ಭದಲ್ಲಿ ಗ್ರೀನ್ ಇಂಡಿಯಾ ಫೋರಂ ಅಧ್ಯಕ್ಷ ಸೈಯದ್ ಸಿದ್ದೀಕ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ,ಮಡಿವಾಳ ಮಾಚಿದೇವರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಸ್ ಸುರೇಶ್, ಪತ್ರಕರ್ತರಾದ ಮಣಿಕಂಠ, ಸುಬ್ಬು ಸೇರಿದಂತೆ ಹಲವರು ಹಾಜರಿದ್ದರು
ಧಾತ್ರಿ ಸೇವಾ ಟ್ರಸ್ಟ್ ಮತ್ತು ಗ್ರೀನ್ ಇಂಡಿಯಾ ಫೋರಂ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




