ಧಾರವಾಡ | ನ. 2ರಂದು 12-15 ವರ್ಷದ ಮಕ್ಕಳಿಗಾಗಿ ರಾಜ್ಯಮಟ್ಟದ ಗಾಯನ ಸ್ಪರ್ಧೆ

Date:

ಕಳೆದ 25 ವರ್ಷಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಧಾರವಾಡದ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವ ಸಂಭ್ರಮದ ಪ್ರಯುಕ್ತ ಗುಜ್ಜಾಡಿ ಸ್ವರ್ಣ ಜುವೆಲರ್ಸ ಸಹಯೋಗ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಕಾರದಲ್ಲಿ ಇದೇ ನವೆಂಬರ್ 2 ರಂದು ಧಾರವಾಡ ಸೃಜನಾ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ “ಧಾರವಾಡ ಐಡಲ್-2025” ಗ್ರಾಂಡ್ ಪಿನಾಲೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಮಕ್ಕಳಲ್ಲಿರುವ ಕಲೆಯನ್ನು ಉತ್ತೇಜಿಸುವುದು ಹಾಗೂ ಅವರಿಗೆ ವೇದಿಕೆ ಕಲ್ಪಿಸುವುದೇ ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಸ್ಪರ್ಧೆಯ ನಿಯಮಗಳು:
• ಈ ಸ್ಪರ್ಧೆಯು 12 ರಿಂದ 15 ವಯೋಮಾನದ ಮಕ್ಕಳಿಗಾಗಿ ಆಯೋಜಿಸಲಾಗಿದೆ. 
• ಆಸಕ್ತರು ಸುಗಮ ಸಂಗೀತ, ಭಾವಗೀತೆ/ಭಕ್ತಿಗೀತೆ, ಚಲನಚಿತ್ರ ಗೀತೆಗಳ ಗಾಯನ ಕನ್ನಡ ಅಥವಾ ಹಿಂದಿ ಭಾಷೆಯಲ್ಲಿ ಪ್ರಸ್ತುತ ಪಡಿಸಬಹುದಾಗಿದೆ.
• ಪಕ್ಕವಾದ್ಯ ಅಥವಾ ಕರೋಕೆ ಸಂಗೀತ ಬಳಸಬಹುದು, ತಮ್ಮ ಹೆಸರು, ಶಾಲೆಯ ಹೆಸರನ್ನೊಳಗೊಂಡಂತೆ 2 ನಿಮಿಷಗಳ ಹಾಡಿನ ವಿಡಿಯೋವನ್ನು ಅಕ್ಟೋಬರ 20 ರೊಳಗಾಗಿ ವಾಟ್ಸಾಪ್ ಸಂಖ್ಯೆ 7676894447 ಗೆ ಕಳಿಸಬೇಕು. 
• ವಯಸ್ಸಿನ ದಾಖಲೆಗಾಗಿ ತಮ್ಮ ಆಧಾರ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು. 

ಆಯ್ಕೆಗೊಂಡ ಸ್ಪರ್ಧಿಗಳನ್ನು ನವೆಂಬರ್ 2 ರಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಲೈವ್ ಆಡಿಷನ್ ಏರ್ಪಡಿಸಲಾಗುವುದು.
ವಿಜೇತರಿಗೆ ಪ್ರಥಮ ರೂ.20,000/- ನಗದು ಮತ್ತು ಧಾರವಾಡ ಐಡಲ್ ಸ್ವರ್ಣ ಟ್ರೋಫಿ ನೀಡಿ ಗೌರವಿಸಲಾಗುವುದು. ದ್ವಿತೀಯ ರೂ.15,000/- ತೃತೀಯ ರೂ.10,000/- ಸಮಾಧಾನಕರ ಬಹುಮಾನ ರೂ.2500/-ಗಳ ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು.

ಪ್ರವೇಶ ಶುಲ್ಕ ರೂ.100/- ನಿಗದಿಪಡಿಸಲಾಗಿದೆ. 
ಅರ್ಜಿಯನ್ನು ಕಡ್ಡಾಯವಾಗಿ ಗೂಗಲ್ ಫರ‍್ಮನಲ್ಲಿ ಭರ್ತಿಮಾಡಿ ಸಲ್ಲಿಸುವುದು https://forms.gle/okdn8X1t4iriBVGY7
ನಿರ್ಣಾಯಕರ ನಿರ್ಣವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಈ ಸುದ್ಧಿ ಓದಿದ್ದೀರಾ? ಧಾರವಾಡ | ಅಬ್ದುಲ್ ಕಲಾಂ ಜೀವನದಿಂದ ಯುವಕರು ಪ್ರೇರಣೆ ಪಡೆಯಲಿ: ಡಾ. ಎಂ.ಎನ್.ಮೀರಾನಾಯ್ಕ

ಪತ್ರಿಕಾಗೋಷ್ಟಿಯಲ್ಲಿ ಶ್ರೀಕಾಂತ ದೂಡವಾಡ, ಸಿ ಯು ಬೆಳ್ಳಕ್ಕಿ, ಡಾ ಎಮ್ ವಾಯ್ ಸಾವಂತ, ಪ್ರಕಾಶ ಬಾಳೆಕಾಯಿ, ಕುಮಾರೇಶ್ವರ ಸಂಘದ ಅಧ್ಯಕ್ಷ ಚಿಕ್ಕಮಠ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ರೈತರ ಹೊಲಗಳಿಗೆ ಸರ್ವಿಸ್ ರಸ್ತೆ ನಿರ್ಮಿಸದಿದ್ದರೆ ಹೆದ್ದಾರಿ ಕಾಮಗಾರಿ ಬಂದ್: ಅಮರೇಗೌಡ ಪಾಟೀಲ ಬಯ್ಯಾಪುರ

ರಾಷ್ಟ್ರೀಯ ಹೆದ್ದಾರಿ(748 ಎ) ನಿರ್ಮಾಣದಿಂದ ರೈತರಿಗೆ ತಮ್ಮ ಹೊಲಗಳಿಗೆ ತೆರಳಲು ಸರ್ವಿಸ್...

ಬಳ್ಳಾರಿ | ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬಾಣಂತಿಯರು, ಮಕ್ಕಳು

ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿ ಮತ್ತು...

ಉಡುಪಿ ಜಿಲ್ಲೆಯ ಪಂಚಾಯತ್ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಪುರುಷರಿಗೆ ಅವಕಾಶವಿಲ್ಲವೇ? ಮರುಪರಿಶೀಲನೆಗೆ ಆಗ್ರಹ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆಗಳು...