ವೈದ್ಯರ ನಿರ್ಲಕ್ಷ್ಯ ಆರೋಪ; ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಯುವತಿ ಸಾವು

Date:

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ತೆರಳಿದ್ದ ಯುವತಿ ವೈದ್ಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಗೆ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ಉಡುಪಿಯಾದ್ಯಂತ ಅಭಿಯಾನ ನಡೆಯುತ್ತಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೆಮ್ಮುಂಡೇಲು ನಿವಾಸಿ ನಿಕಿತಾ (20) ಮೃತ ಯುವತಿ. ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಅಪೆಂಡಿಸೈಟಿಸ್, ಅರ್ನಿಯಾದಂತಹ ಸಮಸ್ಯೆ ಇರಬಹುದೆಂದು ವೈದ್ಯರು ನಾನಾ ಸ್ಕಾನಿಂಗ್‌ ಮತ್ತು ಎಂಡೋಸ್ಕೋಪಿ ಮಾಡಿದ್ದಾರೆ. ಏನು ಸಮಸ್ಯೆಯಾಗಿದೆ ಎಂದು ವಿವರಿಸದೆ, ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಳಿಕ, ಯುವತಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.

ನಿಕಿತಾಗೆ ಅಪೆಂಡಿಸೈಟಿಸ್‌ ಆಗಿದೆಯೆಂದು ಆಪರೇಷನ್‌ ಮಾಡಿದ್ದರು. ಬಳಿಕ, ಆಕೆಯ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು, ಆರೋಗ್ಯ ಏರುಪೇರಾಗಿತ್ತು. ಆತಂಕಗೊಂಡು ಮಣಿಪಾಲಕ್ಕೆ ಕಳಿಸುವಂತೆ ನಾವು ಕೇಳಿದೆವು. ಆದರೆ, ಯಾವ ಸಮಸ್ಯೆಯೂ ಇಲ್ಲ. ನಾವೇ ಚಿಕಿತ್ಸೆ ನೀಡುತ್ತೇವೆಂದು ವೈದ್ಯರು ಹೇಳಿದರು. ಮಗಳು ಭಾನುವಾರ ಸಾವನ್ನಪ್ಪಿದ್ದು, ಆಕೆ ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ಹೇಳಿದ್ದಾರೆ. ನಮ್ಮ ಮಗಳ ಸಾವಿಗೆ ವೈದ್ಯರೇ ಕಾರಣ” ಎಂದು ಪೋಷಕರು ಆರೋಪಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿಕಿತಾ ಸಾವಿಗೆ ನ್ಯಾಯ ದೊರೆಯಬೇಕು. ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಆದರೆ, ಆಸ್ಪತ್ರೆ ವಿರುದ್ಧ ದೂರು ನೀಡಲು ಮೃತ ಯುವತಿಯ ಪೋಷಕರು ನಿರಾಕರಿಸಿದ್ದು, ‘ಮಗಳೇ ಇಲ್ಲವೆಂದ ಮೇಲೆ ದೂರು ನೀಡಿ ಏನು ಪ್ರಯೋಜನ’ವೆಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸೇವೆ ಮರೆತ ಶಿಕ್ಷಣ ಕ್ಷೇತ್ರ ಉದ್ಯಮವಾಗಿದೆ: ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ

ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಸಂದ ಈ ಸುವರ್ಣ ಸಂದರ್ಭದಲ್ಲಿ...

ರಾಯಚೂರು | ಶಿವಶರಣ ಹಡಪದ ಅಪ್ಪಣ್ಣನವರ ತತ್ವ ಆದರ್ಶಗಳು ಅನನ್ಯ: ದುರುಗಣ್ಣ

ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವ ಆದರ್ಶಗಳು ಇಂದಿಗೂ...

ಶಿರೂರು ಗುಡ್ಡ ದುರಂತ | 8 ಮೀಟರ್ ಅಡಿಯಲ್ಲಿ ಲೋಹದ ಸಾಧನ ಪತ್ತೆ; ಲಾರಿಯಾಗಿರುವ ಶಂಕೆ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ...

ಚಿತ್ರದುರ್ಗ | ಅಸಮಾನತೆ ಹೋಗಲಾಡಿಸುವುದೇ ಶೋಷಿತ ಸಮುದಾಯಗಳ ಏಳಿಗೆಗೆ ಪರಿಹಾರ: ಸಿಎಂ ಸಿದ್ದರಾಮಯ್ಯ

ಜಾತಿ ವ್ಯವಸ್ಥೆ ದೇವರಿಂದ ಸೃಷ್ಟಿಯಾಗಿದ್ದಲ್ಲ. ಸ್ವಾರ್ಥ ಮನುಷ್ಯನ ಸೃಷ್ಟಿ, ಅಸಮಾನತೆ ಹೋಗಲಾಡಿಸದೆ...