ಉಡುಪಿ | ರಮಝಾನ್ ಆತ್ಮಶುದ್ಧಿಯ ಅಪ್ಡೇಟ್ ಮತ್ತು ಅಪ್‌ಗ್ರೇಡ್ ಮಾಸ : ಎಸ್. ಅಮೀನುಲ್ ಹಸನ್

Date:

ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆಯ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಎಸ್. ಅಮೀನುಲ್ ಹಸನ್ ಅವರು, ರಮಝಾನ್ ಮಹತ್ವವನ್ನು ವಿವರಿಸಿದರು. “ರಮಝಾನ್ ಆತ್ಮಶುದ್ಧಿ ಹಾಗೂ ಆತ್ಮಪರಿಶೀಲನೆಯ ತಿಂಗಳು. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಅಗತ್ಯವಿರುವಂತೆ, ನಮ್ಮ ಜೀವನಕ್ಕೂ ಆಧ್ಯಾತ್ಮಿಕ ಅಪ್ಡೇಟ್ ಅಗತ್ಯ. ಆ ಅಪ್ಡೇಟ್ ಆಗುವ ಪವಿತ್ರ ಕಾಲವೇ ರಮಝಾನ್” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...
1009610094

ರಮಝಾನ್ ಕೇವಲ ಉಪವಾಸದ ಆಚರಣೆಯಷ್ಟೇ ಅಲ್ಲ, ಅದು ವ್ಯಕ್ತಿತ್ವ ಪರಿವರ್ತನೆಗೆ ದಾರಿ ತೋರಿಸುವ ಮಾಸವಾಗಿದ್ದು, “ಅಪ್ಡೇಟ್ ಮಾತ್ರವಲ್ಲ, ರಮಝಾನ್ ಅಪ್‌ಗ್ರೇಡ್ ಆಗುವ ತಿಂಗಳು ಕೂಡ ಹೌದು. ನಮ್ಮ ಈಮಾನ್‌, ನೈತಿಕತೆ ಮತ್ತು ವರ್ತನೆಯಲ್ಲಿ ಉನ್ನತಿ ಬರಬೇಕು” ಎಂದು ಅಭಿಪ್ರಾಯಪಟ್ಟರು.

ಸಮಾಜದ ಹಿತದೃಷ್ಟಿಯಿಂದ ಬಡವರು, ಅನಾಥರು ಹಾಗೂ ಅಗತ್ಯವಿರುವವರ ಕಡೆ ಹೆಚ್ಚಿನ ಕಾಳಜಿ ವಹಿಸುವುದು ರಮಝಾನ್‌ನ ಪ್ರಮುಖ ಪಾಠವಾಗಿದೆ. ಮಾನವೀಯತೆ, ಸಹೋದರತ್ವ ಹಾಗೂ ಸಹಾನುಭೂತಿ ಬೆಳೆಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಯುವಜನತೆ ಸಮಯವನ್ನು ಸದುಪಯೋಗಪಡಿಸಿಕೊಂಡು ಜ್ಞಾನಾರ್ಜನೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಆತ್ಮವಿಕಾಸದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಮಸೀದಿಯ ಗುರುಗಳಾದ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಮೀಯ ಮಸೀದಿಯ ಗುರುಗಳಾದ ಮೌಲಾನ ಯೂನಸ್ ಕುರ್‌ಆನ್ ಪಠಿಸಿ ಅದರ ಅನುವಾದ ಮಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಅಧ್ಯಕ್ಷ ಅನ್ವರ್ ಅಲಿ ಧನ್ಯವಾದವಿತ್ತರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...