ಸೋನಿಯಾ ಗಾಂಧಿ ಪೂರ್ವಿಕರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಮುಂದಾದ ಪಂಜಾಬಿ ಉದ್ಯಮಿ!

Date:

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆನ್ನಲ್ಲೇ, ಇಟಲಿಯಲ್ಲಿರುವ ಅವರ ಪೂರ್ವಿಕರ ಮನೆಯ ಕುರಿತಾದ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದೆ. ಇಟಲಿಯ ವೆನೆಟೊ ಪ್ರಾಂತ್ಯದ ರಮಣೀಯ ಪಟ್ಟಣವಾದ ಲುಸಿಯಾನಾದಲ್ಲಿರುವ ಸೋನಿಯಾ ಗಾಂಧಿ ತಂದೆ ಸ್ಟೆಫಾನೊ ಮೈನೊ ಅವರ ಪೂರ್ವಿಕರ ಮನೆಯನ್ನು ಪಂಜಾಬ್ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಸುಖ್‌ದೇವ್ ಸಿಂಗ್ ಕಾಂಗ್ ಅವರು ಖರೀದಿಸಿದ್ದು, ಅದನ್ನು ಸಾರ್ವಜನಿಕ ವೀಕ್ಷಣೆಗಾಗಿ ‘ವಸ್ತುಸಂಗ್ರಹಾಲಯ’ವಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

- Advertisement -

ಏನಿದು ‘ಇಂಡಿಯಾ ಹೌಸ್’?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

ಪ.ಬಂಗಾಳ- SIR ಮೇಲ್ಮನವಿ | 19 ನ್ಯಾಯಾಧಿಕರಣಗಳ ದುರ್ಗತಿ-...

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಮೇಲ್ಮನವಿಗಳ ಇತ್ಯರ್ಥಕ್ಕೆ ಸ್ಥಾಪಿಸಲಾದ 19 ನ್ಯಾಯಾಧಿಕರಣಗಳು ಸಾಲುಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕಾರ್ಯಭಾರ, ಕೆಂಪುಪಟ್ಟಿ ಆಡಳಿತದಿಂದ ನಿವೃತ್ತ ನ್ಯಾಯಮೂರ್ತಿಗಳ ರಾಜೀನಾಮೆ, ಸಿಬ್ಬಂದಿಯ ವೇತನ ವಿಳಂಬದ...

ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ...

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು...

ಸುಖ್‌ದೇವ್ ಸಿಂಗ್ ಕಾಂಗ್ ಅವರು ಸುಮಾರು ಆರು ವರ್ಷಗಳ ಹಿಂದೆ ಈ ಆರು ಬೆಡ್‌ರೂಮ್‌ಗಳ ಮನೆಯನ್ನು ಖರೀದಿಸಿದ್ದರು. ಮನೆಯ ಪ್ರವೇಶದ್ವಾರದ ಮುಂಭಾಗದಲ್ಲಿ ಭಾರತದ ತ್ರಿವರ್ಣ ಧ್ವಜದ ಬಣ್ಣದಲ್ಲಿ ಬೋರ್ಡ್ ಒಂದನ್ನು ಹಾಕಲಾಗಿದ್ದು, ಅದರಲ್ಲಿ “ಇಂಡಿಯಾ ಹೌಸ್ – ಜನ್ಮಸ್ಥಳ, 9 ಡಿಸೆಂಬರ್ 1946, ಸೋನಿಯಾ ಗಾಂಧಿ” ಎಂದು ಬರೆಯಲಾಗಿದೆ.

ಇಟಲಿಯ ಕಾನೂನಿನ ಪ್ರಕಾರ ಪಾರಂಪರಿಕ ಕಟ್ಟಡಗಳ ಹೊರಭಾಗದ ವಿನ್ಯಾಸವನ್ನು ಬದಲಾಯಿಸುವಂತಿಲ್ಲ. ಹೀಗಾಗಿ, ಮನೆಯ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಕೇವಲ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾತ್ರ ಮಾಡಿಸಿ, ಮನೆಯೊಳಗಿನ ಪ್ರತಿಯೊಂದು ವಸ್ತುವನ್ನು ಯಥಾಸ್ಥಿತಿಯಲ್ಲಿ ಸಂರಕ್ಷಿಸಲಾಗಿದೆ.

ಲುಸಿಯಾನಾದಿಂದ ಸುಮಾರು ಒಂದು ಗಂಟೆ ಪ್ರಯಾಣದ ದೂರದಲ್ಲಿರುವ ಬ್ರೆಸಿಯಾ ನಗರದಲ್ಲಿ ನೆಲೆಸಿರುವ ಕಾಂಗ್, ಈ ಮನೆ ತಮ್ಮ ಕೈಸೇರಿದ ಬಗೆಯನ್ನು ವಿವರಿಸಿದ್ದಾರೆ. 

“ನಾನು ಮೊದಲ ಬಾರಿಗೆ ಸೋನಿಯಾ ಗಾಂಧಿ ಬಾಲ್ಯ ಕಳೆದ ಮನೆಯನ್ನು ನೋಡಲೆಂದೇ ಲುಸಿಯಾನಾಕ್ಕೆ ಹೋಗಿದ್ದೆ. ಆಗ ಆ ಮನೆ ಮಾರಾಟಕ್ಕಿರುವ ವಿಚಾರ ತಿಳಿಯಿತು. ಸೋನಿಯಾ ಅವರ ಕುಟುಂಬದಿಂದ ಈ ಮನೆಯನ್ನು ಖರೀದಿಸಿದ್ದ ಸ್ಥಳೀಯ ಕುಟುಂಬವೊಂದು ಅಮೆರಿಕಕ್ಕೆ ವಲಸೆ ಹೋಗುತ್ತಿತ್ತು. ಈ ಮನೆಗೆ ಸೋನಿಯಾ ಗಾಂಧಿ ಅವರ ನಂಟು ಇರುವುದರಿಂದ ಇದನ್ನು ಭಾರತೀಯರೇ ಖರೀದಿಸಬೇಕು ಎಂಬುದು ಆ ಕುಟುಂಬದ ಆಶಯವಾಗಿತ್ತು. ಹೀಗಾಗಿ ಅವರು ನನಗೆ ಮಾರಾಟ ಮಾಡಿದರು. ನನ್ನ ಪತ್ನಿ ಮತ್ತು ಮಗಳ ಹೆಸರಿನಲ್ಲಿ ಇದನ್ನು ಖರೀದಿಸಿದ್ದೇನೆ.”

ಈ ಆಸ್ತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಕಾಂಗ್ ಅವರಿಗೆ ಇಷ್ಟವಿಲ್ಲ. ಈ ಮನೆಯನ್ನು ಬಾಡಿಗೆಗೆ ನೀಡಿದರೆ ತಿಂಗಳಿಗೆ 800 ಯೂರೋಗಳಿಗಿಂತ (ಸುಮಾರು 70,000 ರೂ.ಗೂ ಅಧಿಕ) ಹೆಚ್ಚು ಆದಾಯ ಬರುತ್ತದೆ ಎಂದು ಹಲವರು ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ, ಇದನ್ನು ಗುರುದ್ವಾರವಾಗಿ ಪರಿವರ್ತಿಸುವ ಸಲಹೆಯೂ ಕೇಳಿಬಂದಿತ್ತು. ಆದರೆ, ಮನೆಯ ಮೂಲ ಚಾರಿತ್ರಿಕ ಸ್ವರೂಪವನ್ನು ಬದಲಾಯಿಸದೆ ಮ್ಯೂಸಿಯಂ ಮಾಡಲು ಕಾಂಗ್ ನಿರ್ಧರಿಸಿದ್ದು, ಈಗಾಗಲೇ ಸರ್ಕಾರದಿಂದ ಅಗತ್ಯ ಅನುಮತಿಗಳನ್ನೂ ಪಡೆದುಕೊಂಡಿದ್ದಾರೆ.

ಪ್ರಸ್ತುತ ಮನೆಯಲ್ಲಿ ಮೈನೊ ಕುಟುಂಬಕ್ಕೆ ಸೇರಿದ ಕೆಲವು ಹಳೆಯ ಪೀಠೋಪಕರಣಗಳು ಮತ್ತು ಹಳೆಯ ಛಾಯಾಚಿತ್ರಗಳು ಮಾತ್ರ ಇವೆ. ಈ ಹಿನ್ನೆಲೆಯಲ್ಲಿ ಕಾಂಗ್ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. 

“ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲು ಸೋನಿಯಾ ಗಾಂಧಿ ಅವರ ವೈಯಕ್ತಿಕ ವಸ್ತುಗಳು ಅಥವಾ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಮರಣಿಕೆಗಳನ್ನು ನೀಡುವಂತೆ ಗಾಂಧಿ ಕುಟುಂಬವನ್ನು ವಿನಂತಿಸುತ್ತೇನೆ. ಸೋನಿಯಾ ಅವರ ತಂದೆ ಸ್ಟೆಫಾನೊ ಮೈನೊ ಅವರು ಕಟ್ಟಡ ಗುತ್ತಿಗೆದಾರರಾಗಿದ್ದರು. ಇದು ಅವರ ಪೂರ್ವಿಕರ ಮನೆ. ಗಾಂಧಿ ಕುಟುಂಬದವರು ಇಲ್ಲಿಗೆ ಬರಲು ಇಚ್ಛಿಸಿದರೆ ಯಾವಾಗ ಬೇಕಾದರೂ ಮನೆಯ ಕೀಲಿ ಕೈಯನ್ನು ಅವರಿಗೆ ಹಸ್ತಾಂತರಿಸಲು ನಾವು ಸಿದ್ಧರಿದ್ದೇವೆ. ಮದುವೆಯಾದ ನಂತರ ಸೋನಿಯಾ ಅವರು ಕೇವಲ ಎರಡು ಬಾರಿ ಮಾತ್ರ ಈ ಗ್ರಾಮಕ್ಕೆ ಭೇಟಿ ನೀಡಿದ್ದು, ಅವರನ್ನು ಮತ್ತೊಮ್ಮೆ ಭೇಟಿಯಾಗಲು ಗ್ರಾಮದ ಹಿರಿಯರು ಕಾತರರಾಗಿದ್ದಾರೆ.” ಎಂದು ಹೇಳಿದ್ದಾರೆ. 

ಇಟಲಿಯ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದ ಸಾಮಾನ್ಯ ಹುಡುಗಿ ಮುಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾಗಿ, ಪ್ರೇಮವಿವಾಹವಾಗಿ ಭಾರತದ ಅತ್ಯಂತ ಪ್ರಭಾವಿ ರಾಜಕೀಯ ನಾಯಕಿಯಾಗಿ ಬೆಳೆದಿದ್ದು ಒಂದು ರೋಚಕ ಇತಿಹಾಸ. ಈ ಹಿನ್ನೆಲೆಯನ್ನು ಅರಿಯಲು ಇಂದು ಇಟಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಲುಸಿಯಾನಾ ಗ್ರಾಮಕ್ಕೆ ತಪ್ಪದೇ ಭೇಟಿ ನೀಡುತ್ತಿದ್ದಾರೆ.

ಸ್ಥಳೀಯ ಇಟಾಲಿಯನ್ ನಿವಾಸಿಗಳು ಭಾರತೀಯ ಪ್ರವಾಸಿಗರನ್ನು ಕಂಡ ತಕ್ಷಣ ಹೆಮ್ಮೆಯಿಂದ “ಅದು ಸೋನಿಯಾ ಗಾಂಧಿ ಅವರ ಮನೆ” ಎಂದು ದಾರಿ ತೋರಿಸುತ್ತಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಗ್ರಾಮದ ಸ್ಥಳೀಯ ಹೋಟೆಲ್ ಮತ್ತು ವಸತಿ ಗೃಹಗಳ ವ್ಯಾಪಾರಕ್ಕೂ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಿದೆ.

ಇನ್ನು ಸುಖ್‌ದೇವ್ ಸಿಂಗ್ ಕಾಂಗ್ ಅವರ ಕುಟುಂಬವು ಪ್ರತಿ ವರ್ಷ ಡಿಸೆಂಬರ್ 9ರಂದು ಸೋನಿಯಾ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಇಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಮನೆಯ ಉದ್ಘಾಟನೆಯ ಸಂದರ್ಭದಲ್ಲಿಯೂ ಇಟಲಿಯ ಹಲವು ರಾಜಕಾರಣಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.

ಮನೆಯ ಸ್ವಚ್ಛತೆಗಾಗಿ ಸ್ಥಳೀಯ ಇಟಾಲಿಯನ್ ಮಹಿಳೆಯೊಬ್ಬರನ್ನು ಕೇರ್‌ಟೇಕರ್ ಆಗಿ ನೇಮಿಸಲಾಗಿದೆ. ವಾರಕ್ಕೆ ಎರಡು ಬಾರಿ ಬಂದು ಮನೆಯನ್ನು ಸ್ವಚ್ಛಗೊಳಿಸುವ ಅವರಿಗೆ ತಿಂಗಳಿಗೆ 100 ಯೂರೋ (₹9,000 ದಿಂದ ₹9,200) ವೇತನ ನೀಡಲಾಗುತ್ತಿದೆ. ಇದರ ಜೊತೆಗೆ ವಾರ್ಷಿಕವಾಗಿ ಸುಮಾರು 1,000 ಯೂರೋ  ( ₹90,000 ದಿಂದ ₹92,000) ಆಸ್ತಿ ತೆರಿಗೆಯನ್ನು ಕಾಂಗ್ ಪಾವತಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಇಟಲಿಯ ಲುಸಿಯಾನಾದಲ್ಲಿರುವ ಈ ‘ಇಂಡಿಯಾ ಹೌಸ್’ ಕೇವಲ ಇಟ್ಟಿಗೆ-ಗಾರೆಯ ಕಟ್ಟಡವಾಗಿ ಉಳಿಯದೆ, ಭಾರತ ಮತ್ತು ಇಟಲಿಯ ನಡುವಿನ ಭಾವನಾತ್ಮಕ ಹಾಗೂ ಐತಿಹಾಸಿಕ ಬೆಸುಗೆಯ ಸಂಕೇತವಾಗಿ ತಲೆಎತ್ತಿ ನಿಂತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ರಮ ಕ್ವಾರಿ ಪ್ರಕರಣ: ತಮಿಳುನಾಡು ಮಾಜಿ ಸಚಿವ ಪಿ. ಮೂರ್ತಿ ಮನೆ ಮೇಲೆ ಕ್ರೈಂ ಬ್ರಾಂಚ್ ದಾಳಿ!

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಡಿಎಂಕೆ ಸಚಿವ...

ಮಂಡ್ಯದಲ್ಲೇ ಹೃದ್ರೋಗ ಆಸ್ಪತ್ರೆ; ಸ್ಥಳ ಪರಿಶೀಲನೆ ನಡೆಸಿದ ಡಾ. ದಿನೇಶ್

ಮಂಡ್ಯ ಜಿಲ್ಲೆಯ ಜನರಿಗೆ ಗುಣಮಟ್ಟದ ಹೃದ್ರೋಗ ಚಿಕಿತ್ಸಾ ಸೇವೆ ಸ್ಥಳೀಯವಾಗಿಯೇ ದೊರಕಿಸುವ...

ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಜಯ; ಬಿಜೆಪಿಗೆ ತೀವ್ರ ಹಿನ್ನಡೆ

ರಾಜಸ್ಥಾನದ 41 ಜಿಲ್ಲೆಗಳ ಪೈಕಿ 37 ಜಿಲ್ಲೆಗಳಲ್ಲಿ ಶುಕ್ರವಾರ ನಡೆಯುತ್ತಿರುವ ಜಿಲ್ಲಾ...

ಶಿರಸಿ | ಬೇಡ್ತಿ–ವರದಾ ಜೋಡಣೆ ಯೋಜನೆ: ಡ್ರೋನ್ ಸರ್ವೆ ಆರಂಭ

ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ...