ತಾಲೂಕಿನ ಪರಗೋಡು ಗ್ರಾಪಂ ವ್ಯಾಪ್ತಿಯ ಪೂಲವಾರಿಪಲ್ಲಿ ಗ್ರಾಮದ ನಡೆದ ಭೂಹಗರಣದಲ್ಲಿ ತಹಸೀಲ್ದಾರ್ ಮನಿಷಾ ಎನ್.ಪತ್ರಿಯನ್ನು ಸೇವೆಯಿಂದ ವಜಾಗೊಳಿಸಿ ಈ ಪ್ರಕರಣಮ್ನ ಸಿಬಿಐ ವಶಕ್ಕೆ ಒಪ್ಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ.ವೆಂಕಟರಣ ಆಗ್ರಹಿಸಿದ್ದಾರೆ.
ಅವರು ಪಟ್ಟಣದ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಹಸೀಲ್ದಾರ್ ಮನಿಷಾ ಎನ್.ಪತ್ರಿ ಅವರು 2ವರ್ಷ 6 ತಿಂಗಳಿಂದ ಬಾಗೇಪಲ್ಲಿಯಲ್ಲಿ ಸೇವೆಯಲ್ಲಿದ್ದಾರೆ.ಈ ಸಂದರ್ಭದಲ್ಲಿ ಸರಕಾರಿ ಗೋಮಾಳ ಜಮೀನನ್ನು ನುಂಗಿ ನೀರು ಕುಡಿದಿದ್ದಾರೆ.
ಇವರ ಕಾಲದಲ್ಲಿ ಭೂಹಗರಣಗಳು ಹೆಚ್ಚಾಗಿ ನಡೆದಿದೆ.ಪೂಲವಾರಿಪಲ್ಲಿ ಗ್ರಾಮದ ವೆಂಕಟರೆಡ್ಡಿ,ಆದಿ ಲಕ್ಷ್ಮಮ್ಮ,ಕೆ.ವಿ.ಲಕ್ಷ್ಮಯ್ಯ ಮತ್ತಿತರರು ತಹಸೀಲ್ದಾರ್ ಬಳಿ ಬಂದು ನಮ್ಮ ತಂದೆ ತಾಯಿಗಳು ತೀರಿಹೋಗಿದ್ದಾರೆ ಎಂದು ತಂದೆತಾಯಿಗಳ ಹೆಸರಿನಲ್ಲಿರುವ ಜಮೀನನ್ನು ನಮಗೆ ಪವತಿವಾರು ಖಾತೆ ಮಾಡಿಕೊಡುವಂತೆ ತಹಸೀಲ್ದಾರರನ್ನು ಕೇಳಿದರೆ ಈ ಮೂವರಿಗೆ ಜಮೀನು ನಿಮ್ಮದಲ್ಲ ಎಂದು ಹೇಳಿ ಕಳುಹಿಸಿ ಇವರ ಜಮೀನನ್ನು ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗ್ರಾಮ ಸಹಾಯಕಿಯ ಶಿವಮ್ಮ ಹೆಸರಿಗೆ ತಹಸೀಲ್ದಾರ್ ಮಾರ್ಗದರ್ಶನದಂತೆ ಖಾತೆ ಮಾಡಿಸಿದ್ದಾರೆ.ಆದರೆ ಜಿಲ್ಲಾಧಿಕಾರಿಗಳು ಶಿವಮ್ಮಳನ್ನು ಸೇವೆಯಿಂದ ವಜಾಗೊಳಿಸಿದ್ದು ಗ್ರಾಮ ಸಹಾಯಕಿ ಅಮಾಕಿಯಾಗಿದ್ದು ಈಕೆಯನ್ನು ಬಲಿಪಶು ಮಾಡಲಾಗಿದೆ.ದಲಿತ ಹೆಣ್ಣು ಕುಟುಂಬ ಪೋಷಣೆ ಮಾಡುವುದು ಹೇಗೆ ಜಿಲ್ಲಾಧಿಕಾರಿಗಳು ತಕ್ಷಣ ಶಿವಮ್ಮ ವಜಾಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು.
45ಕೋಟಿ ಮೌಲ್ಯದ 15 ಎಕರೆ ಭೂಮಿಯನ್ನು ನಕಲಿ ಫವತಿವಾರು ಖಾತೆ ಮಾಡಿರುವುದರಿಂದ ತಹಶೀಲ್ದಾರ್‌ರ ಕೈವಾಡ ಇರುವುದು ನಿಚ್ಚಳವಾಗಿದೆ.
ಭಾರತ ದೇಶ ಇಂದು ಸುಭೀಕ್ಷವಾಗಿ ಇದೆ ಎಂದರೆ ಅಂಬೇಡ್ಕರ್ ಬರೆದ ಸಂವಿಧಾನದಿಂದ ಮಾತ್ರ ಸಾದ್ಯವಾಗಿದೆ.ಬಾಗೇಪಲ್ಲಿ ಸರ್ವೆ ಇಲಾಖೆಯಲ್ಲಿ ಗಂಗಿರೆಡ್ಡಿ ಎಂಬ ನೌಕರ ಈತ ತೋರಿಸಿದ ಗೋಮಾಳ ಜಮೀನನ್ನು ತಹಸೀಲ್ದಾರ್ ರವರು ನುಂಗಿ ನೀರು ಕುಡಿದಿದ್ದಾರೆ.
ಈತ ಈಗ ಕೋಟ್ಯಾಂತರೂಗಳ ಶ್ರೀಮಂತನಾಗಿದ್ದು ಈತನ ವಿರುದ್ದ ಉನ್ನತ ಮಟ್ಟದ ತನಿಖೆ ಅಗತ್ಯವಾಗಿದೆ.ಇಂತಹ ನೀಚ ಕೆಲಸ ಮಾಡಲು ದಲಿತ ಹೆಣ್ಣು ಮಕ್ಕಳೇ ಬೇಕಾ ಎಂದು ಪ್ರಶ್ನಿಸಿರುವ ಅವರು ಗೋಮಾಳ,ಸಾಗುವಳಿ ಚೀಟಿ ವಿತರಣೆಯಲ್ಲಿ 2ವರ್ಷ 6 ತಿಂಗಳ ಅವಧಿಯಲ್ಲಿ ಎಲ್ಲಾ ಅಕ್ರಮಗಳು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ, ಪೈಪಾಳ್ಯ ರವಿ, ಅಹಿಂದ ಮುಖಂಡರಾದ ನಗುರ್ಲು ನರಸಿಂಹಪ್ಪ , ತಾಲೂಕು ಖಚಾoಚಿ,ಸತೀಶ್ ತಾಲೂಕು ಸಂಘಟನೆ ಸಂಚಾಲಕರಾದ, ಚೌಡಯ್ಯ, , ಕಲ್ಲಿಪಲ್ಲಿ ಶೀನ, ನಂಜುಂಡಪ್ಪ, ಆಚೇಪಲ್ಲಿ ಶ್ರೀನಿವಾಸ್, ಇಂದ್ರ ಗೋಪಿ, , ಪ್ರದೀಪ್, ರಘು, ಗಂಗರಾಜ, ವಿನೋದ, ಹೊಸಹುಡ್ಯ ಶ್ರೀನಿವಾಸ್, ಹರ್ಷಿವರ್ದನ, ಮುಸ್ತಾಕ್, ಆದಿ ಹಾಗೂ ಇತರರು ಹಾಜರಿದ್ದರು.



