ಬಾಗಲಕೋಟೆ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲವು ಸಾಧಿಸಿದ್ದು, ಮತದಾರರ ಐತಿಹಾಸಿಕ ತೀರ್ಪು ಇದಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತದಾರ ಪ್ರಭು ಕೈ ಹಿಡಿದಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಸದಸ್ಯೆ ರಕ್ಷಿತಾ ಸಂತಸ ವ್ಯಕ್ತಪಡಿಸಿದ್ದಾರೆ.
“ಚುನಾವಣೆ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಆರ್ ಬಿ ತಿಮ್ಮಾಪುರ ತಂಡದ ಚುನಾವಣೆ ತಂತ್ರಗಾರಿಕೆ ಹೊಸ ಪರ್ವ ಸೃಷ್ಟಿಸಿತು. ಪಕ್ಷದ ಮುಖಂಡರು, ಕಾರ್ಯಕರ್ತರು, ಸಚಿವರ ಶ್ರಮ ಮರೆಯಲಾಗದು. ಮಹಿಳಾ ಮತದಾರರು ತಮ್ಮ ಮತದಾನದ ಶಕ್ತಿ ಪ್ರದರ್ಶಿಸಿರುವುದು ಸಂತೋಷದಾಯಕ ಸಂಗತಿ. ದಿವಂಗತ ಎಚ್ ವೈ ಮೇಟಿ ಅವರ ನೆನಪು ಎಂದಿಗೂ ಅವಿಸ್ಮರಣೀಯ. ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬಿದೆ. ಸುಳ್ಳಿನ ಫ್ಯಾಕ್ಟರಿ ಮಾಡಿಕೊಂಡಿರುವ ಬಿಜೆಪಿಗೆ ಮತದಾರ ಪ್ರಭುಗಳು ತಕ್ಕ ಉತ್ತರ ನೀಡಿದ್ದಾರೆ” ಎಂದು ರಕ್ಷಿತಾ ಅಭಿಪ್ರಾಯಿಸಿದ್ದಾರೆ.
ಬಾಗಲಕೋಟೆ | ಮೇಟಿ ಗೆಲುವು ಕಾಂಗ್ರೆಸ್‌ನ ಹೊಸ ಪರ್ವ: ರಕ್ಷಿತಾ ಹೇಳಿಕೆ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




