ನಾವೆಲ್ಲರೂ ಒಗ್ಗಟ್ಟಿನಿಂದ ಬಾಗಲಕೋಟೆ ಉಪಚುನಾವಣೆ ಎದುರಿಸಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸೋಣ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ ಮನವಿ ಮಾಡಿದರು.
ಮುಚಖಂಡಿ ಎಲ್ ಟಿ 1, ಎಲ್ ಟಿ ಗ್ರಾಮಗಳಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಬಡವರ ಪಕ್ಷವಾದ ಕಾಂಗ್ರೆಸ್ ಎಲ್ಲ ಪಕ್ಷಗಳ ತಾಯಿ ಎನಿಸಿದೆ. ಸರ್ಕಾರದಿಂದ ಬಡವರಿಗಾಗಿ ಯೋಜನೆಗಳನ್ನು ರೂಪಿಸಿದ್ದೇ ಕಾಂಗ್ರೆಸ್ ಪಕ್ಷ. ಬುದ್ಧ, ಬಸವ ಅಂಬೇಡ್ಕರ್ ಸಿದ್ಧಾಂತಗಳ ಮೇಲೆ ಸಾಮಾಜಿಕ ನ್ಯಾಯ ಒದಗಿಸುವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಎಚ್ ವೈ ಮೇಟಿ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಉಮೇಶ್ ಮೇಟಿ ಅವರ ಕೈ ಬಲಪಡಿಸಬೇಕು” ಎಂದು ಕೋರಿದರು.
ಅಪಾರ ಬೆಂಬಲಿಗರೊಂದಿಗೆ ಸಂಜೆ ರಾಮತಾಳ, ಹೂವಿನಹಳ್ಳಿ, ಮುಳ್ಳೂರ, ಕಳ್ಳಿಗುಡ್ಡ, ನಿಂಬಲಗುಂದಿ, ಐಹೊಳೆ ಮತ್ತಿತರ ಭಾಗಗಳಲ್ಲೂ ಉಮೇಶ್ ಮೇಟಿ ಪ್ರಚಾರ ನಡೆಸಿದರು. ನಗರದ ವಿವಿಧ ಭಾಗಗಳಲ್ಲಿ ಮಾಜಿ ಸಚಿವ ಅಜಯಕುಮಾರ್ ಸರನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ ಹದ್ಲಿ, ಸಂತೋಷ ಹೊಕ್ರಾಣಿ, ಶಿವಕುಮಾರ ನಂದಿಕೋಲಮಠ, ಬಸವಪ್ರಭು ಸರನಾಡಗೌಡ, ಅಬ್ದುಲರಜಾಕ್ ಬೇನೂರ, ಅಕ್ಬರ್ ಮುಲ್ಲಾ, ಆನಂದ ಜಿಗಜಿನ್ನಿ, ಜಾಫರ್ ಬೇಪಾರಿ ಇತರರು ಪ್ರಚಾರ ಕೈಗೊಂಡು ಮತ ಯಾಚಿಸಿದರು.
ಬಾಗಲಕೋಟೆ ತಾಲೂಕಿನ ಸೀತಿಮನಿ ಸ್ಟೇಷನ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರ ಪ್ರಚಾರ ನಡೆಸಿದ ಶಾಸಕ ಅಪ್ಪಾಜಿ ನಾಡಗೌಡ ಮಾತನಾಡಿ, “ದಿ. ಎಚ್ ವೈ ಮೇಟಿ ಜನಪರ ಕಾರ್ಯಗಳೇ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಸರಳ ಸ್ವಭಾವದ ಮೇಟಿ ಎಲ್ಲ ಸಮುದಾಯ ಬಾಂಧವರ ನಂಬಿಕೆ, ವಿಶ್ವಾಸ ಗಳಿಸಿದ್ದರು. ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುತ್ತಿದ್ದರು. ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲರೂ ಉಮೇಶ್ ಮೇಟಿ ಅವರನ್ನು ಬೆಂಬಲಿಸಬೇಕು. ಕಾರ್ಯಕರ್ತರೆಲ್ಲ ಒಗ್ಗೂಡಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು” ಎಂದು ಕೋರಿದರು.
ಬಸವಂತಪ್ಪ ಮೇಟಿ, ಬಲರಾಮ ಪವಾರ್, ಜಟ್ಟೆಪ್ಪ ಮಾದಾಪುರ, ಶಶಿಕಾಂತ್ ಪೂಜಾರ, ಶ್ರೀಕರ ದೇಸಾಯಿ ಹಾಗೂ ಇತರರು ಉಪಸ್ಥಿತರಿದ್ದರು. ಶಾಸಕ ನಾಡಗೌಡ ಅವರ ನೇತೃತ್ವದಲ್ಲಿ ಮುಖಂಡರಾದ ಸತೀಶ ಲಮಾಣಿ, ಸಂತೋಷ ಲಮಾಣಿ, ರವಿ ಲಮಾಣಿ, ರಾಹುಲ ಲಮಾಣಿ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು. ಮನಹಳ್ಳಿ ಗ್ರಾಮದಲ್ಲೂ ಪ್ರಚಾರ ನಡೆಸಿ ಮತ ಯಾಚಿಸಲಾಯಿತು.
“ಗ್ರಾಮೀಣ ಭಾಗದಲ್ಲಿ ದಿ.ಎಚ್.ವೈ.ಮೇಟಿ ಅವರ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಟೀಕಿಸುವವರೂ ಕೂಡ ಅವುಗಳ ಲಾಭ ಪಡೆಯುತ್ತಿದ್ದಾರೆ. ಈ ಜನಪರ ಯೋಜನೆಗಳನ್ನು ಮುಂದುವರಿಸಲು ಎಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕು” ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬಡ ಜನರ ಏಳಿಗೆಗೆ ಕಾಂಗ್ರೆಸ್ ಬದ್ಧ: ಎಸ್ ಜಿ ನಂಜಯ್ಯನಮಠ
ಬಾಗಲಕೋಟೆ ಸಮೀಪದ ಮುಚಖಂಡಿ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ ಮಾತನಾಡಿದರು. ಪ್ರೇಮಾ ಗರಸಂಗಿ, ಇಬ್ರಾಹಿಂ ಕಲಾದಗಿ, ಅಯೂಬಖಾನ್ ಪುಣೇಕರ್, ಹಣಮಂತ ರಾಕುಂಪಿ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಮಮತಾ ಸುತಾರ, ಸುಧಾ ಪಾಟೀಲ, ಭರತ ಈಟಿ, ವೀರೇಶ ಹುಂಡೇಕಾರ, ಖಾಜಿಸಾಬ್ ದಂಡೀನ, ಲಕ್ಷ್ಮೀ ಚೌಹಾಣ್, ವಿಜಯ ಕಮತಗಿ, ಕಲ್ಪನಾ ಮೇಟಿ, ಅನ್ನಪೂರ್ಣಾ ಗೂಗುಹಾಳ, ಗುಣವಂತಿ ನಿಡೋಣಿ, ಬಸವರಾಜ ಅಂಬಿಗೇರ, ಮಂಜು ಮುಚಖಂಡಿ, ರಮೇಶ ಪಡಸಲಗಿ, ಪ್ರೇಮಾ ರಾಠೋಡ ಸೇರಿದಂತೆ ಇತರರು ಇದ್ದರು.




