ಬಿ ಎಸ್ ಯಡಿಯೂರಪ್ಪನವರ ಆಡಳಿತದಲ್ಲಿ ರಾಜ್ಯ ವಕೀಲರ ಪರಿಷತ್ತಿಗೆ ₹10 ಕೋಟಿ ಅನುದಾನ ಕೊಟ್ಟಿದ್ದನ್ನು ಸಭೆಯಲ್ಲಿ ಪ್ರಸ್ಥಾಪಿಸಲಾಯಿತು. ಈ ಬಾರಿ ಬಜೆಟ್ಟಿನಲ್ಲಿ ಕೂಡಾ ವಕೀಲರ ಸಂಘಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಕೋವಿಡ್ ನಂತರ ಕಳೆದ 3 ವರ್ಷದಿಂದ ವಕೀಲರ ಸಂಘಗಳಿಗೆ ಪ್ರಸ್ತುತ ಸರ್ಕಾರ ಯಾವುದೇ ಅನುದಾನವನ್ನು ನಿಡಿರುವುದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತಿನ ಹಿಂದಿನ ಅಧ್ಯಕ್ಷ ನ್ಯಾಯವಾದಿ ಎಸ್ ಎಸ್ ಮಿಟ್ಟಲಕೊಡ ಮಾಹಿತಿ ಹಂಚಿಕೊಂಡರು.
ಬಾಗಲಕೋಟೆ ಉಪಚುನಾವಣೆ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ನ್ಯಾಯವಾದಿಗಳ ಸಭೆಯಲ್ಲಿ ಮಾತನಾಡಿದ ಅವರು, “ಈ ಕುರಿತು ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ವಕೀಲರ ಪರಿಷತ್ತನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನೂ ನೀಡಲಾಗಿತ್ತು. ಆದರೆ ಯಾವುದೇ ಫಲಪ್ರದವಾಗಲಿಲ್ಲ. ಒಟ್ಟಾರೆ ಹಲವಾರು ವಿಚಾರಗಳ ಪ್ರಸ್ತಾಪವಾಗಿ ಬಾಗಲಕೋಟೆಯ ಅಭಿವೃದ್ಧಿಗೆ ಅನುದಾನ ತರುವಲ್ಲಿ ವೀರಣ್ಣ ಚರಂತಿಮಠ ಅವರೇ ಸೂಕ್ತ ಅಭ್ಯರ್ಥಿಯಾಗಿದ್ದು, ಎಲ್ಲರೂ ಸೇರಿ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸೋಣ” ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಬ್ರಹ್ಮಾವರದಲ್ಲಿ ಮನೆ ಕಳ್ಳತನ ಪ್ರಕರಣ: ಆರೋಪಿ ಬಂಧನ, ₹14.67 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಸಭೆಯಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡಾ ಪಾಟೀಲರು, ಬಾಗಲಕೋಟೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಗದ್ದಿ, ಪ್ರಧಾನ ಕಾರ್ಯದರ್ಶಿ ಪಿ ಎಚ್ ನಾರಾಯಣಕರ, ಖಜಾಂಚಿ ಜಯತೀರ್ಥ ಕುಲಕರ್ಣಿ, ನವೀನ ವಾಲಿ, ಹಿರಿಯ ವಕೀಲುರುಗಳಾದ ಸಿ ವಿ ಕೋಟಿ, ಜಿ ಎನ್ ಪಾಟೀಲ, ಎಂ ಎಂ ಹಂಡಿ, ಜೆ ಬಿ ಬೂದಿಹಾಳ, ಈರಣ್ಣ ಎಂಡಿಗೇರಿ, ಪವಾಡ ಶೆಟ್ಟರ, ಟಿ ಪಿ ಕಲಾಲ, ವಸ್ತ್ರದ ವಕೀಲರು, ಮಹಾಂತೇಶ ಕೊಲಕಾರ, ಸಂತೋಷ ಜೋಶಿ, ಸಿ ಟಿ ಉಪಾಧ್ಯಾಯ, ಎಸ್ ಕೆ ಜೋಶಿ, ಸೋನಿ ಪರಾಂಡೆ, ಉಮಾ ಜುಕ್ತಿಮಠ, ಜಯಶ್ರೀ ಬಾದಾಮಿ, ಸರ್ವಮಂಗಳಾ ಗವಿಶಟ್ಟಿರ, ಪಾರ್ವತಿ ಪಾಟೀಲ, ಎಸ್ ವಿ ಕುಲಕರ್ಣಿ, ಪ್ರಭಾಕರ ದಡ್ಡೆನ್ನವರ, ಎಸ್ ಎಸ್ ದೇಸಾಯಿ, ಸಿ ಜಿ ದೇಸಾಯಿ, ನ್ಯಾಯವಾದಿ ಹಾಗೂ ಸಂಸದ ಪಿ ಸಿ ಗದ್ದಿಗೌಡರ, ಎಂಎಲ್‌ಸಿ ಹನಮಂತ ನಿರಾಣಿ, ಪಿ ಎಚ್ ಪೂಜಾರವರು ಸೇರಿದಂತೆ ಹಲವಾರು ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.




