ಜಮಖಂಡಿ | ಸರ್ವೆ ನಂ.71/4ರಲ್ಲೇ ಸ್ಮಶಾನಕ್ಕೆ ಜಾಗ ನೀಡುವಂತೆ ದಲಿತ ಸಮುದಾಯದ ಆಗ್ರಹ

Date:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ನಿವಾಸಿಗಳು ತಮ್ಮ ಸಮುದಾಯದ ಶವ ಸಂಸ್ಕಾರಕ್ಕೆ ಸರ್ವೆ ನಂ.71/4ರಲ್ಲೇ 20 ಗುಂಟೆ ಜಾಗವನ್ನು ಶಾಶ್ವತವಾಗಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

- Advertisement -

ಪರಿಶಿಷ್ಟ ಜಾತಿಯ ಹರಿಜನರು ಹಾಗೂ ಮಾದಿಗ ಸಮುದಾಯದವರು ಪೂರ್ವಜರ ಕಾಲದಿಂದಲೂ ಸರ್ವೆ ನಂ. 71/4ರಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲ ಗ್ರಾಮ ಮುಖಂಡರ ಪ್ರಚೋದನೆಯಿಂದ ಸ್ಮಶಾನಕ್ಕೆ ತೆರಳುವ ದಾರಿ ಹಾಗೂ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು...

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ಸ್ಮಶಾನಕ್ಕೆ ತೆರಳುವ ಮಾರ್ಗಕ್ಕೆ ಇತ್ತೀಚೆಗೆ ಒಡ್ಡು, ಶೆಡ್ ಹಾಗೂ ತಂತಿ ಬೇಲಿ ನಿರ್ಮಿಸಲಾಗಿದ್ದು, ಇದರಿಂದ ಮೃತರ ಶವ ಸಂಸ್ಕಾರ ನಡೆಸಲು ತೀವ್ರ ತೊಂದರೆಯಾಗುತ್ತಿದೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಸಂಬಂಧಿಕರು ಎರಡು-ಮೂರು ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಮಸ್ಯೆ ಉಂಟಾದಾಗ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸುವುದು ಹಾಗೂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 30ರಂದು ರಾಧಾಬಾಯಿ ಚಿದಾನಂದ ಪೋತಿ ಅವರ ನಿಧನದ ಸಂದರ್ಭದಲ್ಲಿಯೂ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿದ್ದ ತಂತಿ ಬೇಲಿಯಿಂದಾಗಿ ಶವ ಸಂಸ್ಕಾರಕ್ಕೆ ಅಡ್ಡಿಯುಂಟಾಯಿತು ಎಂದು ನಿವಾಸಿಗಳು ದೂರಿದ್ದಾರೆ. ಅಲ್ಲದೆ, ಕೆಲವರಿಂದ ಬೆದರಿಕೆಗಳು ಬರುತ್ತಿದ್ದು, ಇದರಿಂದ ಕಾಲೋನಿ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭವಿಷ್ಯದ ಜನಸಂಖ್ಯೆಯನ್ನೂ ಪರಿಗಣಿಸಿ, ತಾವು ಹಿಂದಿನಿಂದಲೂ ಶವ ಸಂಸ್ಕಾರ ಮಾಡಿಕೊಂಡು ಬಂದಿರುವ ಸರ್ವೆ ನಂ.71/4ರಲ್ಲಿಯೇ ಸುಮಾರು 20 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಶಾಶ್ವತವಾಗಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಸೆಪ್ಟೆಂಬರ್ 17ರಂದು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸರ್ವೆ ನಂ.135/3ರ 1 ಎಕರೆ 20 ಗುಂಟೆ ಜನತಾ ಗೃಹ ಜಾಗೆಯಲ್ಲಿ, ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ ಸ್ಮಶಾನ ಜಾಗೆ ಮಂಜೂರು ಮಾಡುವ ಕುರಿತು ಚರ್ಚೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಸರ್ವೆ ನಂ.135/3ರಲ್ಲಿ ಸ್ಮಶಾನ ಜಾಗೆ ಮಂಜೂರು ಮಾಡಬಾರದು. ಬದಲಾಗಿ, ಪೂರ್ವಜರ ಕಾಲದಿಂದ ಶವ ಸಂಸ್ಕಾರ ಮಾಡಿಕೊಂಡು ಬಂದಿರುವ ಸರ್ವೆ ನಂ.71/4ರಲ್ಲಿಯೇ 20 ಗುಂಟೆ ಜಾಗೆಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಂಕರ ಪೂಜಾರಿ, ಪಾಂಡು ಕಾಂಬಳೆ, ಸುಖದೇವ ಕಾಂಬಳೆ, ಯಮನಪ್ಪ ಪೂಜಾರಿ, ವಿಠಲ ಪೂಜಾರಿ, ದುಂಡಪ್ಪ ಬೆಳ್ಳೆನ್ನವರ, ರಾಜು ಪೋತೆ, ಪ್ರಕಾಶ ಬೆಳ್ಳೆನ್ನವರ, ಯಲ್ಲವ್ವ ಕಾಂಬಳೆ, ರೇಷ್ಮಾ ಕವಟಗಿ, ನಿಂಬೆವ್ವ ಕಾಂಬಳೆ, ಮಾದೇವಿ ಬೆಳ್ಳೆನ್ನವರ, ಕಸ್ತೂರಿ ಪೂಜಾರಿ, ಹರಳಯ್ಯ ಪೂಜಾರಿ, ಶಿವಾನಂದ ಪೂಜಾರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿವೃದ್ಧಿ ದೇಶಗಳಿಂದ ಇಂಗಾಲ ಹೆಚ್ಚು ಎಂದ ಮೋದಿ; ದೇಶದ ಮಾಲಿನ್ಯ, ಅರಣ್ಯ ನಾಶದ ಬಗ್ಗೆ ನೆಟ್ಟಿಗರ ಪ್ರಶ್ನೆ

ಇಂಗಾಲದ ಹೊರಸೂಸುವಿಕೆಗೆ (Carbon emissions) ಸಂಬಂಧಿಸಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಗಾಗ್ಗೆ ಅನ್ಯಾಯವಾಗಿ...

SIR | ಮತಪಟ್ಟಿಯಿಂದ ಎಷ್ಟು ಹೆಸರು ರದ್ದು? ಸ್ಪಷ್ಟ ವರದಿ ನೀಡುವಂತೆ ಚು. ಆಯೋಗಕ್ಕೆ ಜಾಗೃತ ಕರ್ನಾಟಕ ಆಗ್ರಹ

ರಾಜ್ಯದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ, ಲಕ್ಷಾಂತರ ಮತದಾರರಿಗೆ ನೋಟಿಸ್...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...