ನೈಸ್‌ ಭೂಮಿ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ: ರಾಜ್ಯವ‍್ಯಾಪಿ ಪ್ರತಿಭಟನೆಗೆ ಸಿಪಿಐಎಂ ಕರೆ

Date:

ರಾಜ್ಯ ಹೈಕೋರ್ಟ್ ಜುಲೈ 29ರಂದು ನೈಸ್ ಭೂಮಿಯನ್ನು ರೈತರಿಗೆ ವಾಪಸು ನೀಡಬೇಕೆಂದು ಮತ್ತು ಅಕ್ರಮವಾಗಿ ಸಂಗ್ರಹಿಸುತ್ತಿರುವ ಟೋಲ್ ಸಂಗ್ರಹ ನಿಲ‍್ಲಿಸಬೇಕೆಂದು ತೀರ್ಪು ನೀಡಿದ್ದರೂ ಅದನ್ನು ಜಾರಿಗೆ ತರದ ಕರ್ನಾಟಕದ ಡಿಕೆಶಿ ಸರ್ಕಾರ, ಭೂಮಿ ಕಳೆದುಕೊಂಡ ರೈತರನ್ನು, ರೈತ-ಕಾರ್ಮಿಕ ಸಂಘಗಳ ಮುಖಂಡರನ್ನು ಬಂಧಿಸಲು ಹೊರಟಿದೆ. ಇದನ‍್ನು ಸಿಪಿಐಎಂ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

- Advertisement -

ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಆಧಾರದಲ್ಲಿ ನೈಸ್ ಭೂಮಿಯನ್ನು ರೈತರಿಗೆ ವಾಪಸ್ ಮಾಡುವುದು ಮತ್ತು ಅಕ್ರಮವಾದ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂದು ಇಂದು ಪ್ರತಿಭಟನೆ ಹಮ‍್ಮಿಕೊಳ್ಳಲಾಗಿತ್ತು. ಇದನ್ನು ದಮನ ಮಾಡಲು ರಾಜ್ಯ ಸರ್ಕಾರ ಮಖಂಡರನ್ನು ಬಂಧಿಸುವ ಕೆಲಸ ಮಾಡುತ್ತಿದೆ ಎಂದು ಸಿಪಿಐಎಂ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಇದನ್ನೂ ಓದಿ: ನೈಸ್ ರಸ್ತೆಯ ಟಾಕ್ಸಿಕ್ ಮನರಂಜನೆ

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಯು.ಬಸವರಾಜು, ಮುಖಂಡರಾದ ಎನ್.ವೆಂಕಟಾಚಲಯ್ಯ, ಶಿವಣ್ಣ, ಚಂದ್ರಣ್ಣ, ಕಾರ್ಮಿಕ ಮುಖಂಡರಾದ ಮಹಾಂತೇಶ್ ಮತ್ತು ಇತರರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸಲು ಪ್ರಯತ್ನಗಳು ನಡೆದಿವೆ. ಹೈಕೋರ್ಟ್‌ನ ಆದೇಶ ಇದೆಯೆಂದು ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರ್ಕಾರ, ನೈಸ್ ವಿರುದ್ದ ನೀಡಿರುವ ತೀರ್ಪನ‍್ನು 50 ದಿನ ಕಳೆದರೂ ಜಾರಿ ಮಾಡದೆ, ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ. ಕರ್ನಾಟಕದ ಜನತೆ ಇದನ‍್ನು ವಿರೋಧಿಸಬೇಕಾಗಿದೆ ಎಂದು ಸಿಪಿಐಎಂ ಹೇಳಿದೆ.

ಇದನ‍್ನು ಖಂಡಿಸಿ, ಪಕ್ಷದ ಸಮಿತಿಗಳು, ಸಮೂಹ ಸಂಘಟನೆಗಳು ಮತ್ತು ಹಿತೈಷಿ ಸಂಘಟನೆಗಳನ್ನು ಒಳಗೊಂಡು ರಾಜ್ಯದ ಎಲ್ಲಾ ಕಡೆಗಳಲ್ಲೂ ಪ್ರತಿಭಟನೆಗಳನ್ನು ನಡೆಸಲು ಸಿಪಿಐಎಂ ಕರೆ ನೀಡಿದೆ.

ಬಂಧಿತರರನ್ನು ಕೂಡಲೇ ಬಿಡುಗಡೆ ಮಾಡಬೇಕು, ಪ್ರತಿಭಟನೆಗೆ ಅವಕಾಶ ನೀಡಬೇಕು ಹಾಗೂ ನೈಸ್ ಕಂಪನಿ ವಿರುದ್ದ ಹೈಕೋರ್ಟ್ ತೀರ್ಪಿನ ಅನ್ವಯ ಭೂಮಿಯನ‍್ನು ರೈತರಿಗೆ ವಾಪಾಸು ನೀಡಬೇಕು ಮತ್ತು ಟೋಲ್ ಸಂಗ್ರಹಿಸುವುದನ‍್ನು ನಿಲ್ಲಿಸಬೇಕೆಂದು ಸಿಪಿಐಎಂ ಆಗ್ರಹಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಂಗಳೊಳಗೆ ಜಾರಿಯಾಗಲಿದೆ ಭಾರತ–ನ್ಯೂಜಿಲೆಂಡ್ FTA: ಏನಿದು ‘ಫ್ರೀ ಟ್ರೇಡ್ ಅಗ್ರಿಮೆಂಟ್‌’?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ‘ಮುಕ್ತ ವ್ಯಾಪಾರ ಒಪ್ಪಂದ’ (Free Trade...

ಬಸವನ ಬಾಗೇವಾಡಿ | ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಪತ್ರ ಚಳವಳಿ

ಶಾಸನಬದ್ಧವಾಗಿ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ...

ನಿಠಾರಿ ಸರಣಿ ಹತ್ಯೆ ಪ್ರಕರಣ: ಖುಲಾಸೆಯಾಗಿದ್ದ ಸುರೇಂದ್ರ ಕೋಲಿ ಅನುಮಾನಾಸ್ಪದ ಸಾವು

ದೇಶವನ್ನೇ ಬೆಚ್ಚಿಬೀಳಿಸಿದ್ದ ಭೀಕರ ನೋಯ್ಡಾದ ನಿಠಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ...

ವಿಜಯಪುರ | ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಸುನೀಲಗೌಡ ಪಾಟೀಲ

ಯೋಗಾಭ್ಯಾಸದಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒತ್ತಡವನ್ನು...