ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ

Date:

ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ ಅವರ ಹೆಸರಿನಲ್ಲೇ ಇರುವ ವೃತ್ತದಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ವಿಜಯಪುರದಲ್ಲಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಯಿತು.

- Advertisement -

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ , ಅಧಿಕಾರಿಗಳು ಪ್ರತಿಮೆಯನ್ನು ತೆರವುಗೊಳಿಸಿರಬಹುದು. ಆದರೆ ಬಡವರು ಹಾಗೂ ಸಾಮಾನ್ಯ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಸಿದ್ದರಾಮಯ್ಯ ಅವರ ಹೆಸರನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಮೆ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು...

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಸಿದ್ದರಾಮಯ್ಯ ಅವರ ಪ್ರತಿಮೆ ಕೇವಲ ಒಂದು ಕಲಾಕೃತಿಯಲ್ಲ. ಅದರ ಹಿಂದೆ ಸಾಮಾಜಿಕ ಸಂದೇಶವಿದ್ದು, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಸಿದ್ದರಾಮಯ್ಯ ಅವರಿಗೆ ಜನರು ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿದೆ ಎಂದರು.

ಕಲಬುರಗಿಯ ಸಿದ್ದರಾಮಯ್ಯ ವೃತ್ತದಲ್ಲಿಯೇ ಪ್ರತಿಮೆಯನ್ನು ಮರುಸ್ಥಾಪಿಸಬೇಕು. ಒಂದು ವೇಳೆ ಪ್ರತಿಮೆಯನ್ನು ಅಲ್ಲಿಯೇ ಮರುಸ್ಥಾಪಿಸದಿದ್ದರೆ, ಅಸಂಖ್ಯಾತ ಬೆಂಬಲಿಗರೊಂದಿಗೆ ವಿಜಯಪುರದಿಂದ ಕಲಬುರಗಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಭಾರತೀ ಹೊಸಮನಿ, ಷಹಜಾನ್ ದುಂಡಸಿ, ಮಲ್ಲು ಬಿದರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಮಹಾನಗರ ಪಾಲಿಕೆ ಸದಸ್ಯ ಅಶ್ಪಾಕ್ ಮನಗೂಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ, ಚಂದಸಾಬ್ ಗಡಗಲಾವ್, ಎಸ್.ಎಸ್. ಖಾದ್ರಿ ವಕೀಲ, ಫಯಾಜ್ ಕಲಾದಗಿ, ಮನು ಭಾವಿಕಟ್ಟಿ, ಸಂತೋಷ್ ಬಾಲ್ಗಾವಿ, ದೇವಕಾಂತ್ ಬಿಜ್ಜರಗಿ, ಲಾಲ್‌ಸಾಬ್ ಕೋರಬು, ಶಕೀಲ್ ಕಾಜಿ, ರಜಾಕ್ ಕಾಕಂಡಕಿ, ವೀರೇಶ್ ಕಲಾಲ್, ಸಂಗಮೇಶ್ ಕವಡಿಮಟ್ಟಿ, ಸಂತೋಷ ಹತ್ತರಕಿ, ಶಾಂತಪ್ಪ ಕಾಳಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಅಮೆರಿಕದ ಅಹಂಕಾರಕ್ಕೆ ಪೆಟ್ಟು: ಯುದ್ಧದ ನಡುವೆಯೂ ಇರಾನ್ ನಾಯಕರಿಗೆ ವೀಸಾ ನೀಡಿಕೆ

ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಯುದ್ಧ ಆರಂಭವಾಗಿ ಸುಮಾರು ಏಳು...

ಮುದ್ದೇಬಿಹಾಳ | ಸೆ.21ರಂದು ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಸಮಾರಂಭ

ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕದ ವತಿಯಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ...