ಬಾಗೇಪಲ್ಲಿ | ಗ್ರಾಮಸ್ಥರ ವಿರೋಧದ ನಡುವೆ ಸರ್ಕಾರಿ ಗೋಮಾಳ ಜಮೀನು ಸರ್ವೇ ಕಾರ್ಯ:ತಹಶೀಲ್ದಾರ್ ವಿರುದ್ಧ ತಿರುಗಿಬಿದ್ದಿ ಗ್ರಾಮಸ್ಥರು

Date:

ಗ್ರಾಮಸ್ಥರ ವಿರೋಧದ ನಡುವೆ ಸರ್ಕಾರಿ ಗೋಮಾಳ ಜಮೀನು ಸರ್ವೇ ಕಾರ್ಯಕ್ಕೆ ತೆರಳಿದ್ದ ತಹಶೀಲ್ದಾರ್ ಮನೀಷಾಪತ್ರಿ ಹಾಗೂ ಭೂ ಮಾಪನಾ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ತಿರುಗಿಬಿದ್ದಿರುವ ಘಟನೆ ಚನ್ನರಾಯನಪಲ್ಲಿ ಗ್ರಾಮದಲ್ಲಿ ನಡೆದಿದೆ. ಬಾಗೇಪಲ್ಲಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚನ್ನರಾಯನಪಲ್ಲಿ ಗ್ರಾಮದ ಬಳಿಯಲ್ಲಿರುವ ಸರ್ಕಾರಿ ಗೋಮಾಳ ಜಮೀನನ್ನು ತಾಲೂಕು ಆಡಳಿತ ಗೂಳೂರು ಗ್ರಾಮ ಪಂಚಾಯತಿಯ ಅಶ್ರಯ ಯೋಜನೆಯ ನಿವೇಶನಗಳಿಗಾಗಿ ಮಂಜೂರು ಮಾಡಿದ್ದು, ಸದರಿ ಗೋಮಾಳ ಜಮೀನನ್ನು ಆಳತೆ
ಮಾಡಲು ತಾಲೂಕು ಮಟ್ಟದ ಅಧಿಕಾರಿಗಳು ಜಮೀನು ಬಳಿ ತೆರಳಿರುತ್ತಾರೆ. ಗ್ರಾಮಸ್ಥರು ಆಳತೆ ಕಾರ್ಯಕ್ಕೆ ಅಡ್ಡಿಪಡಿಸಿ ತಾಲೂಕು ಆಡಳಿತದ ವಿರುದ್ದ ತಿರುಗಿಬಿದ್ದಾರೆ.

ನಲ್ಲಪರೆಡ್ಡಿಪಲ್ಲಿ ಮತ್ತು ಚನ್ನರಾಯನಪಲ್ಲಿ ಗ್ರಾಮದ ಸುತ್ತಮುತ್ತಲಿನಲ್ಲಿರುವ ಸರ್ಕಾರಿ ಗೋಮಾಳ ಜಮೀನನನ್ನು ಅಶ್ರಯ ನಿವೇಶನಗಳಿಗಾಗಿ ಮಂಜೂರು ಮಾಡಬಾರದು, ಸರ್ಕಾರ ದನಕರುಗಳ ಮೇವುಗಾಗಿ ಮೀಸಲಿಟ್ಟಿರುವ ಗೋಮಾಳ ಜಮೀನು ದನಕರುಗಳ ಮೇವಿಗಾಗಿಯೇ ಉಳಿಯಬೇಕೆಂದು 2022 ಮಾರ್ಚ್ 11 ರಂದು ಅಂದಿನ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಎರಡು ಗ್ರಾಮಗಳ ಗ್ರಾಮಸ್ಥರು ಮನವಿ ಸಲ್ಲಿಸಿ ಮಂಜೂರಾತಿಗೆ ಅಡ್ಡಿಪಡಿಸಿರುತ್ತಾರೆ, ಎರಡು ಗ್ರಾಮಗಳ ಗ್ರಾಮಸ್ಥರ
ಮನವಿಗೆ ವಿರುದ್ದವಾಗಿ ಇಂದಿನ ತಹಶೀಲ್ದಾರ್ ಮನೀಷಾ ಎನ್ ಪತ್ರಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆಂದು
ಗ್ರಾಮಸ್ಥರ ಆಕ್ರೋಶವಾಗಿದೆ.

2022 ರಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಸಲ್ಲಿಸಿರುವ ದೂರು ಅರ್ಜಿಯಂತೆ ಎರಡು ಗ್ರಾಮಗಳ ಗ್ರಾಮಸ್ಥರೊಂದಿಗೆ ತಾಲೂಕು ಆಡಳಿತ ಗ್ರಾಮ ಸಭೆ ನಡೆಸಿ ನಾಗರೀಕರ ಅಭಿಪ್ರಾಯವನ್ನು ಸಂಗ್ರಹಿಸದೆ ಏಕಾಎಕಿ ಸರ್ಕಾರಿ ಗೋಮಾಳ ಜಮೀನನ್ನು ವಸತಿ ಉದ್ದೇಶಕ್ಕಾಗಿ ಪರಿವರ್ತನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ತಹಶೀಲ್ದಾರ್‌ನ್ನು ಪ್ರಶ್ನಿಸಿ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಇದನ್ನು ಓದಿದ್ದೀರಾ..? ಕೋಲಾರ | ₹ 10 ಕೋಟಿ ವೆಚ್ಚದಲ್ಲಿ ಎರಡು ಸೇತುವೆ ನಿರ್ಮಾಣ: ಕೊತ್ತೂರು ಮಂಜುನಾಥ್‌

- Advertisement -

ಈ ಸಂದರ್ಭದಲ್ಲಿ ಆರ್.ವಿ.ದೇವರಾಜು, ಪಿ.ರಾಮಾಂಜಿನಪ್ಪ, ವೆಂಕಟಸ್ವಾಮಿ, ಆಧಿನಾರಾಯಣ, ಪ್ರಕಾಶ್, ಈರಪ್ಪ, ಶಿವಪ್ಪ,
ಪಿ.ವೆಂಕಟಸ್ವಾಮಿ, ರಾಮಪ್ಪ, ಸಿ.ವಿ.ಶ್ರೀನಾಥ, ಸುರೇಶ್, ಲಕ್ಷ್ಮೀನಾರಾಯಣ, ಕೆ.ಮಂಜುನಾಥ, ವಿ.ಅಶೋಕ, ವೆಂಕಟೇಶ್, ಜಯಕುಮಾರ್, ಶ್ರೀಕಾಂತ, ಅಶ್ವತ್ಥನಾರಾಯಣ, ನಾರಾಯಣಪ್ಪ, ರಾಮಾಂಜಿನಪ್ಪ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಶೈಕ್ಷಣಿಕ ಸಂಯೋಜಕರನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಹೋರಾಟ: ಹನಮಂತ ಕಲ್ಮನಿ ಎಚ್ಚರಿಕೆ

"ಅಕ್ಟೋಬರ್ ಮೊದಲ ವಾರದೊಳಗೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ...

ಕಲಬುರಗಿ | ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ: ಎಸ್‌ಐಆರ್ ಸ್ಥಗಿತಕ್ಕೆ ಸಿಪಿಐ ಒತ್ತಾಯ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು, ಮತದಾರರ ಪಟ್ಟಿಯ...

ಧಾರವಾಡ | ಗ್ರಂಥಾಲಯದಲ್ಲಿ ಎಐ ಬಳಕೆ ಇತಿ-ಮಿತಿ ಇರಲಿ: ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ.ಕುಂಬಾರ

"ಗ್ರಂಥಾಲಯದಲ್ಲಿ ಎಐ ಅಳವಡಿಕೆ ಮಾಡಿಕೊಳ್ಳುವದು ಒಳ್ಳೆಯದು. ಆದರೆ ಇದು ಮನುಷ್ಯನ ಸೃಜನಶೀಲತೆ...

ಯಾದಗಿರಿ | ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸಿಡಬ್ಲ್ಯೂ‌ಎಫ್‌ಐ, ಸಿಐಟಿಯು ಆಗ್ರಹ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ...