ಬಾಗೇಪಲ್ಲಿ | ರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಬಾಗೇಪಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ

Date:

ದಲಿತರು ಉಳುಮೆ ಮಾಡುತ್ತಿರುವ ಭೂಮಿಯಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಬಾಗೇಪಲ್ಲಿ ತಾಲ್ಲೂಕು ಅರಣ್ಯ ಅಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಠಾವಧಿ ಧರಣಿ ನಡೆಸಲಾಗುವುದು’ ಎಂದು ಡಿ.ಎಸ್‌.ಎಸ್ ಮುಖಂಡ ಬಿ.ವಿ.ವೆಂಕಟರವಣ ತಿಳಿಸಿದರು

- Advertisement -

ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎಲ್ಲ ದಾಖಲೆಗಳೊಂದಿಗೆ ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ದಲಿತರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ನಿರಂತರವಾಗಿ ನಡೆಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

‘1972-73ರಲ್ಲಿ ಚಿಕ್ಕಬಳ್ಳಾಪುರದ ಆಗಿನ ತಹಶೀಲ್ದಾರ್ ಸಿಂಗಾಟಕದಿರೇನಹಳ್ಳಿ ಹಳೆ ಸರ್ವೆ ನಂಬರ್-67 ಹೊಸ ಸರ್ವೆ ನಂಬರ್ 81ರಿಂದ 86ರವರೆಗೆ ಮತ್ತು ಹಳೆ ನಂಬರ್‌ 67 ಪೈಕಿ ಬಡ ದಲಿತರಿಗೆ ಸಾಗುವಳಿ ಚೀಟಿ, ಪಹಣಿ ನೀಡಿದರು. ಅಂದಿನಿಂದ ದಲಿತರು ಉಳುಮೆ ಮಾಡುತ್ತಿದ್ದಾರೆ. ಈಚೆಗೆ ಈ ಭೂಮಿಗೂ ಸಂಬಂಧವೇ ಇಲ್ಲದ ಅರಣ್ಯ ಇಲಾಖೆಯವರು ಬಡ ದಲಿತರ ಮೇಲೆ ದೌರ್ಜನ್ಯ ಮಾಡಿ ಉಳುಮೆ ಮಾಡಲು ಹೋದ ಬಡವರಿಗೆ ತೊಂದರೆ ನೀಡಿ, ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ದಲಿತರ ಪರವಾಗಿ ನಿಲ್ಲಬೇಕಾದ ತಹಶೀಲ್ದಾರ್ ಉಳ್ಳವರ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಂದಿ ಹೋಬಳಿ ಸಿಂಗಾಟಕದಿರೇನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ಎಲ್ಲ ಅನುಮತಿಗಳನ್ನೂ ಪಡೆದುಕೊಂಡಿದ್ದೆವು. ಅಧಿಕಾರಿಗಳೇ ಸೂಚಿಸಿದ ಸ್ಥಳದಲ್ಲಿ ಟೆಂಟ್ ಹಾಕಲಾಗಿತ್ತು. ಆದರೆ ನಾವು ಪ್ರತಿಭಟನೆ ಸ್ಥಳಕ್ಕೆ ತಲುಪುವಷ್ಟರಲ್ಲಿ ಟೆಂಟ್ ಕಿತ್ತೆಸೆಯಲಾಗಿದೆ. ಇದು ದಲಿತರ ಮೇಲಿನ ದೌರ್ಜನ್ಯ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದರು.

ಪೈಪಾಳ್ಯ ರವಿ ಮಾತನಾಡಿ ಇದೇ ವೇಳೆ, ಸಂತ್ರಸ್ತ ದಲಿತರ ಬಳಿ ಸರ್ಕಾರ ನೀಡಿರುವ ಎಲ್ಲಾ ದಾಖಲೆಗಳಿದ್ದರೂ ಭೂಮಿಯಿಂದ ಹೊರಹಾಕಲು ಯತ್ನಿಸಲಾಗುತ್ತಿದೆ. ಈ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕೊಡ ಬೇಕಾದ ಚಿಕ್ಕಬಳ್ಳಾಪುರ ಎಂ.ಎಲ್.ಎ ಪ್ರದೀಪ್ ಈಶ್ವರ್ ಅವರಿಗೆ ಕಣ್ಣು ಕಾಣುತ್ತಿಲ್ಲವೆ ಎಂದು ದೂರಿದರು. ಅದೇ ರೀತಿ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ,ಪೈಪಾಳ್ಯ ಗ್ರಾಮದ ಸರ್ವೆ ನಂಬರ್‌ 10,17 ರಲ್ಲಿ ದಲಿತರ ಜಮೀನುಗಳನ್ನು ಅರಣ್ಯ ಇಲಾಖೆ ದಲಿತರ ಮೇಲೆ ದೌರ್ಜನ್ಯ ಬಿಡಬೇಕು ಹಾಗೂ ಅವರ ಭೂಮಿ ಅವರಿಗೆ ಬಿಟ್ಟಕೊಡಬೇಕು ಎಂದು ಹೇಳಿದರು.

ಇದನ್ನು ಓದಿದ್ದೀರಾ..? ಕೋಲಾರ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷರಾಗಿ ನಿಹಾಲ್ ತರೀನ್ ಆಯ್ಕೆ

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸತೀಶ್,ಪ್ರಕಾಶ್ ,ಮಂಜುನಾಥ್, ಸೂರ್ಯನಾರಾಯಣ, ಚೌಡಯ್ಯ, ಆಚೇಪಲ್ಲಿ ಶ್ರೀನಿವಾಸ್, ನಂಜುಂಡಪ್ಪ, ಶ್ರೀನಿವಾಸ್ ,ಬಾಬು,
ಭಾನುಪ್ರಕಾಶ್,ಗಂಗಧಾರ, ಅಂಜನಪ್ಪ,ನರಸಿಂಹಯ್ಯ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭೀಕರ ರಸ್ತೆ ಅಪಘಾತ: ಸವಾರ ಸ್ಥಳದಲ್ಲೇ ಸಾವು 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಕಸ್ಕೆಬೈಲ್‌ನಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ...

ಚಿಕ್ಕಮಗಳೂರು | ಮದ್ಯಪಾನಕ್ಕೆ 2 ಸಾವಿರ ಹಣಕ್ಕಾಗಿ ಪತ್ನಿಗೆ ಹಲ್ಲೆ, ಜೀವ ಬೆದರಿಕೆ 

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಸೋಮನಹಳ್ಳಿ ತಾಂಡ್ಯದಲ್ಲಿ ಮದ್ಯಪಾನ...

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...