ಬೆಂಗಳೂರು | ಗುತ್ತಿಗೆ ಧೋರಣೆ ಕೈಬಿಟ್ಟು ಸಿಎಚ್‌ಒ ನೌಕರರನ್ನು ಖಾಯಂ ಮಾಡಿ: ಆರ್ ಮಾನಸಯ್ಯ

Date:

ಆರೋಗ್ಯ ನೌಕರರ ಬಗ್ಗೆ ಇರುವ ಗುತ್ತಿಗೆ ಧೋರಣೆಯನ್ನು ಕೈಬಿಟ್ಟು ಸಿಎಚ್‌ಒ ನೌಕರರನ್ನು ಖಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟಿಯುಸಿಐನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸಮುದಾಯ ಆರೋಗ್ಯ ನೌಕರರ ಮುಷ್ಕರ ನಡೆಯಿತು.

ಪ್ರಧಾನ ಕಾರ್ಯದರ್ಶಿ ಹಾಗೂ ನೌಕರರ ಸಂಘದ ಗೌರವಾಧ್ಯಕ್ಷ ಆರ್ ಮಾನಸಯ್ಯ ಮಾತನಾಡಿ, “ರಾಜ್ಯ ಸರ್ಕಾರ ಸಂಧಾನ ಧೋರಣೆ ಕೈಬಿಟ್ಟು 6,192 ಸಿಎಚ್‌ಒ ನೌಕರರನ್ನು ಖಾಯಂಗೊಳಿಸಬೇಕು” ಎಂದು ಒತ್ತಾಯಿಸಿದರು.

ಸಿಎಚ್‌ಒ ಮುಷ್ಕರ 1

“ಆರೋಗ್ಯ ಇಲಾಖೆ ಇತರೆ ಸಿಬ್ಬಂದಿಗೆ ಚಿಕ್ಕ ವೇತನ ಹೆಚ್ಚಳ ಸಿಎಚ್ಒಗಳಿಗೆ ಸಿಗದಾಗಿದೆ. ಶೇ.15ರಷ್ಟು ವೇತನ ಹೆಚ್ಚಳ ಮಾಡಬೇಕು. ಸುಪ್ರೀಂ ಕೋರ್ಟ್ ತೀರ್ಮಾನ ಉಲ್ಲಂಘಿಸಿ ಗುತ್ತಿಗೆ ಪದ್ಧತಿಯನ್ನು ಸರ್ಕಾರವೇ ಮುಂದುವರಿಸಿರುವುದು ಘೋರ ಅನ್ಯಾಯ.‌ ಜೀವರಕ್ಷಣೆ ಕರ್ತವ್ಯದಲ್ಲಿರುವ ನಮ್ಮ ನೌಕರರ ಜೀವನದ ಬಗ್ಗೆ ಕನಿಷ್ಟ ಕಾಳಜಿ ತೋರದ ಸರ್ಕಾರಕ್ಕೆ ಧಿಕ್ಕಾರ”‌ ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸರಣಿ ಸಂಧಾನಗಳು ವಿಫಲಗೊಂಡ ಪರಿಣಾಮವಾಗಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ಕಾಯ್ದೆ ಪ್ರಕಾರ ಮುಂಗಡ ನೋಟಿಸ್ ನೀಡಿಯೇ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿರುವುದರಿಂದ ರಾಜ್ಯದ 6,192 ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳು ಸ್ಥಗಿತಗೊಂಡಿವೆ. ಮುಖ್ಯವಾದ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಮುಷ್ಕರ ಮುಂದುವರಿಸುವ ನಿರ್ಧಾರ ಮೊಳಗಿಸಲಾಗಿದೆ. ಇಲಾಖೆಯಲ್ಲಿ ನೌಕರರ ಮೇಲೆ ನಡೆಯುತ್ತಿರುವ ಚಿತ್ರ ಹಿಂಸೆ ಕಿರುಕುಳ ಲಂಚಗುಳಿತನ ಮುಂತಾದ ವಿಷಯಗಳು ಮುಷ್ಕರದಲ್ಲಿ ಪ್ರಸ್ತಾಪವಾಗಿವೆ. ಈ ಮುಷ್ಕರ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ನಾಳೆಯೂ ಮುಷ್ಕರ ಮುಂದುವರೆಯಲಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಸರ್ಕಾರದಲ್ಲಿ 190 ಔಷಧಿಗಳ ದಾಸ್ತಾನು ಇಲ್ಲ: ಆರೋಗ್ಯ ಸಚಿವ

ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ ಗಂಗಾಧರ, ಸಂಘದ ಅಧ್ಯಕ್ಷ ಮಮಿತ್ ಗಾಯಕ್ವಾಡ, ಉಪಾಧ್ಯಕ್ಷ ಬಸವಾನಂದ, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ, ರಾಜ್ಯ ಮುಖಂಡ ಸಂಜೀವ್ ಗಾಂಧಿ, 28 ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕಾಲಮಿತಿಯೊಳಗೆ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ

"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ರಸ್ತೆಗುಂಡಿಗಳನ್ನು...

ರಾಜ್ಯದಲ್ಲಿ ಮೇ 31ರಿಂದ ಮುಂಗಾರು ಮಳೆ ಆರಂಭ

ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು ವಾತಾವರಣ ತಂಪಾಗಿದೆ. ರಾಜ್ಯದಲ್ಲಿ ಮುಂದಿನ ಒಂದು ವಾರ...

ಕಲಬುರಗಿ | ಬೈಕ್‌ಗೆ ಸಾರಿಗೆ ಬಸ್ ಢಿಕ್ಕಿ; ಒಂದೇ ಊರಿನ ಮೂವರು ಯುವಕರು ದುರ್ಮರಣ

ಸಾರಿಗೆ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಮೇಲೆ...

ಬೆಳಗಾವಿ | ಕರ್ನಾಟಕಕ್ಕೆ ಹರಿದುಬರುತ್ತಿದ್ದ ನೀರು ತಡೆದ ಮಹಾರಾಷ್ಟ್ರ; ಬ್ಯಾರೇಜ್‌ ಸುತ್ತ ಪೊಲೀಸ್‌ ನಿಯೋಜನೆ

ಮಹಾರಾಷ್ಟ್ರದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಂಬಿರುವ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ...