ಬೆಳಗಾವಿ : ಬಸವರಾಜ ಕಟ್ಟಿಮನಿಯವರು ಮಲಾಮರಡಿ ಕ್ರಾಂತಿಯ ಕಿಡಿ : ಡಾ. ಯಲ್ಲಪ್ಪ ಹಿಮ್ಮಡಿ

Date:

ಒಂದು ಹಳ್ಳಿ ಅಥವಾ ಪಟ್ಟಣವು ತನ್ನ ಸಾಂಸ್ಕೃತಿಕ ಸಾಧನೆಯಿಂದ ಸುತ್ತಲಿನ ನಾಡಿಗೆ, ದೇಶಕ್ಕೆ ಪ್ರಖ್ಯಾತಿಯಾಗಿರುತ್ತದೆ. ಹಾಗೆಯೇ ಪ್ರಗತಿಶೀಲ ಚಳುವಳಿಯ ನಾಯಕರಾದ ಬಸವರಾಜ ಕಟ್ಟೀಮನಿಯವರು ತಮ್ಮ ಪರಿಶುದ್ಧ ಬದುಕು ಮತ್ತು ಕ್ರಾಂತಿಕಾರಿ ಬರಹಗಳಿಂದ ಪ್ರಸಿದ್ಧರಾದರಲ್ಲದೇ, ತಮ್ಮ ಹುಟ್ಟೂರಾದ ಮಲಾಮರಡಿಯಲ್ಲಿ ನೆಲೆ ನಿಂತು “ಹಳ್ಳಿ ಕೂಡ ಕ್ರಾಂತಿಯ ಕಿಡಿಯಾಗಬಹುದು” ಎಂಬುದನ್ನು ದೇಶಕ್ಕೆ ತೋರಿಸಿದ್ದಾರೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.

- Advertisement -

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮರಡಿಯಲ್ಲಿ ಗುರುವಾರ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾದ ಬಸವರಾಜ ಕಟ್ಟೀಮನಿ ಪುಣ್ಯಸ್ಮರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ ಎಂಡಿಆರ್‌ವರೆಗೆ...

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’ (Retailers Association of India - RAI) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆ ಡಿಜಿಟಲ್ ಆರ್ಥಿಕತೆಯನ್ನು ನುಚ್ಚುನೂರು...

“ಬಾಲ್ಯದಿಂದಲೇ ಹೋರಾಟದ ಗುಣಗಳನ್ನು ಬೆಳೆಸಿಕೊಂಡ ಕಟ್ಟೀಮನಿಯವರಿಗೆ ಪ್ರಗತಿಶೀಲ ಸಾಹಿತ್ಯ ಚಳುವಳಿ ಬರವಣಿಗೆಯ ಶಕ್ತಿ ನೀಡಿತು. ತಮ್ಮ ತವರಿನಲ್ಲೇ ನೆಲೆಸಿಕೊಂಡು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಅಸಮಾನತೆಗಳ ವಿರುದ್ಧ ಹೋರಾಡುತ್ತಲೇ ಅವರು 42 ಕಾದಂಬರಿ, 10 ಕಥಾ ಸಂಕಲನ ಸೇರಿ 66ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಸತ್ವ ಮತ್ತು ಶಕ್ತಿ ತುಂಬಿದರು,” ಎಂದು ಡಾ. ಹಿಮ್ಮಡಿ ಹೇಳಿದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಅಂಕಲಗಿ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಎನ್. ಮಾವಿನಕಟ್ಟಿ ಹೇಳಿದರು, “ಬಡತನವನ್ನೇ ಸಾಧನವಾಗಿಸಿಕೊಂಡ ಕಟ್ಟೀಮನಿಯವರು ಸ್ವಾಭಿಮಾನದಿಂದ ಬದುಕಿ ಬರಹ ಬರೆದವರು. ಅವರ ಸಾಹಿತ್ಯವನ್ನು ಯುವ ಸಮುದಾಯದ ಕಡೆಗೆ ಕೊಂಡೊಯ್ಯುವ ಪ್ರತಿಷ್ಠಾನದ ಪ್ರಯತ್ನ ಶ್ಲಾಘನೀಯ,” ಎಂದರು.

ಸ್ಥಳೀಯ ಮುಖಂಡ ಈರಪ್ಪ ಮಾಳಗಿ ಅವರು, “ಮಲಾಮರಡಿಯ ರುದ್ರಭೂಮಿಯ ಸಮೀಪ ಕಟ್ಟೀಮನಿಯವರ ಸ್ಮಾರಕ ಹಾಗೂ ಊರಿನ ದ್ವಾರದಲ್ಲಿ ಅವರ ಹೆಸರಿನ ಕಮಾನು ನಿರ್ಮಿಸಲು ಪ್ರತಿಷ್ಠಾನ ಮುಂದಾಗಬೇಕು,” ಎಂದು ಸಲಹೆ ನೀಡಿದರು.

ಆರಂಭದಲ್ಲಿ ಸಮುದಾಯ ಭವನದಲ್ಲಿರುವ ಬಸವರಾಜ ಕಟ್ಟೀಮನಿಯವರ ಪ್ರತಿಮೆಗೆ ಧಾರವಾಡದ ಪ್ರೊ. ಬಿ.ಸಿ. ಬಿರಾದಾರ್ ಹಾಗೂ ಪ್ರತಿಷ್ಠಾನದ ಸದಸ್ಯ ಎಸ್‌.ಜಿ. ಚಿಕ್ಕನರಗುಂದ ಮಾಲಾರ್ಪಣೆ ಮಾಡಿದರು. ಕಟ್ಟೀಮನಿಯವರ ಪುತ್ರಿಯರಾದ ಶ್ರೀಮತಿ ಮಂಜುಳಾ ಬಿರಾದಾರ್ ಮತ್ತು ಶ್ರೀಮತಿ ನೀಲಾ ಮಾಳಗಿ ದೀಪ ಬೆಳಗಿದರು.

ಕಾರ್ಯಕ್ರಮದಲ್ಲಿ ಡಾ. ಕೆ.ಆರ್. ಸಿದ್ದಗಂಗಮ್ಮ, ಶ್ರೀಮತಿ ಹಮೀದಾ ಬೇಗಂ ದೇಸಾಯಿ, ಪ್ರೊ. ಪ್ರಕಾಶ್ ಕುರಪಿ, ಬಸವರಾಜ ಮಾಳಗಿ, ಗಂಗಪ್ಪ ಮಾಳಗಿ, ನಾಗರಾಜ ಮಾಳಗಿ, ಅಪ್ಪಣ್ಣ ಕುಸ್ತಿ, ಬಸವರಾಜ ನಾವಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕವಿ ಸುರೇಶ್ ಮುದ್ದಾರ ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯ ವಿಠ್ಠಲ ದಳವಾಯಿ ವಂದಿಸಿದರು.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಬಸ್‌ಗೆ ಬೈಕ್ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಸವದತ್ತಿ ನಗರದ ಹೊರವಲಯದ ಧಾರವಾಡ ರಸ್ತೆಯಲ್ಲಿ ಸೋಮವಾರ ರಾತ್ರಿ...

ಬೆಳಗಾವಿ | ಭೀಕರ ಅಗ್ನಿ ದುರಂತ:ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು,...

ಬೆಳಗಾವಿ | ಕಾಲುವೆಗೆ ನೀರು ಹರಿಸದ ಆಕ್ರೋಶ: ಟವ‌ರ್ ಏರಿ ರೈತನ ಪ್ರತಿಭಟನೆ

ಕಾಲುವೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರೊಬ್ಬರು ಟವರ್ ಏರಿ ಪ್ರತಿಭಟನೆ...

ಬೆಳಗಾವಿ | ಕಾರಿಗೂ ಹೆಲ್ಮೆಟ್ ಕಡ್ಡಾಯವೇ? ಎ ಐ ಕ್ಯಾಮೆರಾ ಹೊಸ ನಿಯಮ

ಇಷ್ಟು ದಿನ ಬೈಕ್‌ ಸವಾರರಿಗೆ ಮಾತ್ರ ಹೆಲ್ಮೆಟ್ ಕಡ್ಡಾಯ ಎಂದುಕೊಂಡಿದ್ದವರಿಗೆ ಇದೀಗ...