ಬೆಳಗಾವಿ | ಬೈಕ್ EMI ಹಣ ಕೊಡದಿದ್ದಕ್ಕೆ ಪ್ರಿಯಕರನಿಂದ ಗೃಹಿಣಿ ಕೊಲೆ

Date:

ಕಳೆದ ಎರಡು ತಿಂಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದ ಗೃಹಿಣಿಯೊಬ್ಬರ ನಾಪತ್ತೆ ಪ್ರಕರಣ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಬೈಕ್ EMI ಪಾವತಿಸಲು ಹಣ ನೀಡಲು ನಿರಾಕರಿಸಿದ್ದಕ್ಕೆ ಪ್ರಿಯಕರನೇ ಆಕೆಯನ್ನು ಕಬ್ಬಿನ ಗದ್ದೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

- Advertisement -

ಕೌಜಲಗಿ ಗ್ರಾಮದ ಅನ್ನಪೂರ್ಣ ಹತ್ಯೆಯಾದ ದುರ್ದೈವಿ. ಗೋಕಾಕ್ ತಾಲೂಕಿನ ಶಿಂಗಳಾಪುರ ಮೂಲದ ದಿಲೀಪ್‌ ಗಡಕರಿ ಕೊಲೆ ಆರೋಪಿ. ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಅನ್ನಪೂರ್ಣ ಹಾಗೂ ಸಿದ್ದಪ್ಪ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೃಷಿ ಮಾಡಿಕೊಂಡು ಅನ್ನೋನ್ಯವಾಗಿ ಜೀವನ ನಡೆಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ಮನೆ ನಿರ್ಮಾಣದ ಕೆಲಸಕ್ಕೆ ಬಂದಿದ್ದ ನಾಲ್ಕು ಮಕ್ಕಳ ತಂದೆ ದಿಲೀಪ್‌ನೊಂದಿಗೆ ಅನ್ನಪೂರ್ಣಳಿಗೆ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.

ಇತ್ತೀಚೆಗೆ ದಿಲೀಪ್‌ ಕಂತಿನ ಆಧಾರದಲ್ಲಿ ಹೊಸ ಬೈಕ್‌ ಖರೀದಿಸಿದ್ದ. ಅದರ EMI ಕಟ್ಟಲು ಹಣ ನೀಡುವಂತೆ ಅನ್ನಪೂರ್ಣಳಿಗೆ ನಿರಂತರವಾಗಿ ಒತ್ತಾಯಿಸುತ್ತಿದ್ದ.

ಆದರೆ ಹಣ ನೀಡಲು ಆಕೆ ವಿರೋಧ ವ್ಯಕ್ತಪಡಿಸುತ್ತಿದ್ದಳು.

ಜುಲೈ 23ರಂದು ಹಣದ ವಿಚಾರವಾಗಿ ಮಾತನಾಡಲೆಂದು ಅನ್ನಪೂರ್ಣಳನ್ನು ಊರ ಹೊರಗಿನ ನಿರ್ಜನ ಪ್ರದೇಶಕ್ಕೆ ದಿಲೀಪ್ ಕರೆಸಿಕೊಂಡಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿದಾಗ ಕಬ್ಬಿನ ಗದ್ದೆಯೊಳಗೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಸರ, ಓಲೆ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾನೆ.

ಇತ್ತ ಅನ್ನಪೂರ್ಣ ನಾಪತ್ತೆಯಾಗಿರುವ ಕುರಿತು ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಕರೆ ವಿವರಗಳನ್ನು (CDR) ಪರಿಶೀಲಿಸಿದಾಗ ಅನ್ನಪೂರ್ಣ ಕೊನೆಯದಾಗಿ ದಿಲೀಪ್‌ ಜೊತೆ ಮಾತನಾಡಿರುವುದು ಪೊಲೀಸರಿಗೆ ಸುಳಿವು ನೀಡಿತು.

ಮತ್ತೊಂದೆಡೆ, ಅನ್ನಪೂರ್ಣಳ ಮೊಬೈಲ್‌ಗೆ ಬೇರೊಂದು ಸಿಮ್ ಕಾರ್ಡ್ ಹಾಕಿ ಮಧ್ಯಪ್ರದೇಶದಲ್ಲಿ ಬಳಸಲಾಗುತ್ತಿತ್ತು. ಆ ನಂಬ‌ರ್ ಬೆನ್ನತ್ತಿದ ಪೊಲೀಸರು, ಮೊಬೈಲ್‌ ಕೊಲ್ಲಾಪುರದ ಸತ್ಯಪ್ಪ ಎಂಬಾತನ ಕೈ ಸೇರಿರುವುದನ್ನು ಪತ್ತೆಹಚ್ಚಿದರು. ವಿಚಾರಣೆ ವೇಳೆ ದಿಲೀಪ್‌ ತನಗೆ ಮೊಬೈಲ್ ನೀಡಿದ್ದಾಗಿ ಸತ್ಯಪ್ಪ ಬಾಯ್ದಿಟ್ಟಿದ್ದಾನೆ ಎನ್ನಲಾಗಿದೆ.

ಕೂಡಲೇ ದಿಲೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬೈಕ್ EMI ಹಣಕ್ಕಾಗಿ ಅನ್ನಪೂರ್ಣಳನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಶವ ಕೊಳೆತು ಕೇವಲ ಅಸ್ಥಿಪಂಜರದ ರೂಪದಲ್ಲಿತ್ತು ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಅನ್ನಪೂರ್ಣಳ ಮೊಬೈಲ್‌ಗೆ ಬೇರೊಂದು ಸಿಮ್ ಕಾರ್ಡ್ ಹಾಕಿ ಮಧ್ಯಪ್ರದೇಶದಲ್ಲಿ ಬಳಸಲಾಗುತ್ತಿತ್ತು. ಆ ನಂಬರ್ ಬೆನ್ನತ್ತಿದ ಪೊಲೀಸರು, ಮೊಬೈಲ್‌ ಕೊಲ್ಲಾಪುರದ ಸತ್ಯಪ್ಪ ಎಂಬಾತನ ಕೈ ಸೇರಿರುವುದನ್ನು ಪತ್ತೆಹಚ್ಚಿದರು. ವಿಚಾರಣೆ ವೇಳೆ ದಿಲೀಪ್‌ ತನಗೆ ಮೊಬೈಲ್‌ ನೀಡಿದ್ದಾಗಿ ಸತ್ಯಪ್ಪ ಬಾಯ್ದಿಟ್ಟಿದ್ದಾನೆ ಎನ್ನಲಾಗಿದೆ.

ಕೂಡಲೇ ದಿಲೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬೈಕ್ EMI ಹಣಕ್ಕಾಗಿ ಅನ್ನಪೂರ್ಣಳನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಶವ ಕೊಳೆತು ಕೇವಲ ಅಸ್ಥಿಪಂಜರದ ರೂಪದಲ್ಲಿತ್ತು ಎಂದು ತಿಳಿದುಬಂದಿದೆ.

ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ. ಕ್ಷುಲ್ಲಕ ಹಣದಾಸೆ ಹಾಗೂ ಅಕ್ರಮ ಸಂಬಂಧದ ಪರಿಣಾಮ ಎರಡು ಕುಟುಂಬಗಳ ಮುಗ್ಧ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗುವಂತಾಗಿದೆ.

ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಭೀಕರ ಅಪಘಾತ: ದಂಪತಿ ಸೇರಿ ಮೂವರ ಸಾವು ಟಾಟಾ ಏಸ್‌ ಡಿಕ್ಕಿಯಾಗಿ ದುರಂತ

ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ದೇಮಟ್ಟಿ-ಮಲ್ಲಾಪುರ ಬಳಿ ಸೋಮವಾರ ಮಧ್ಯರಾತ್ರಿ...