ಬೆಂಗಳೂರಿನಲ್ಲೊಂದು ‘ಬ್ಯಾರೀಸ್ ಸೌಹಾರ್ದ ಭವನ’: ಸೆ. 30ರಂದು ಉದ್ಘಾಟನೆ

Date:

ಶಿಕ್ಷಣ, ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿ, ಇಲ್ಲೇ ಉದ್ಯಮ ನಡೆಸಿಕೊಂಡು ಬರುತ್ತಿರುವ ಶ್ರಮಜೀವಿಗಳಾದ ಕರಾವಳಿ ಮತ್ತಿತರ ಕಡೆಯ ಬ್ಯಾರಿ ಮುಸ್ಲಿಮರ ಬಹುದೊಡ್ಡ ಕನಸೊಂದು ಬೆಂಗಳೂರಿನಲ್ಲಿ ನನಸಾಗುತ್ತಿದೆ.

ಅದಕ್ಕೆ ಕಾರಣ ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಮೂಲಕ ನಿರ್ಮಿಸಲಾಗಿರುವ ಬ್ಯಾರೀಸ್ ಸೌಹಾರ್ದ ಭವನ.

ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿ ಬ್ಯಾರೀಸ್ ಸೌಹಾರ್ದ ಭವನ – ಬ್ಯಾರೀಸ್ ಎಮಿಟಿ ಎಂಬ ಕಟ್ಟಡ ಸಿದ್ಧಗೊಂಡಿದ್ದು, ಸೆ.30ರ ಶನಿವಾರದಂದು ಉದ್ಘಾಟನೆಯಾಗಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿ ಕಾರ್ಪೊರೇಟ್ ಮಾದರಿಯ ಬ್ಯಾರೀಸ್ ಭವನದ ಕಟ್ಟಡವನ್ನು ಅತ್ಯಂತ ಆಕರ್ಷಕ ಮತ್ತು ಅಷ್ಟೇ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಸಮಗ್ರ ಅಭಿವೃದ್ಧಿ ಹಾಗೂ ಸೌಹಾರ್ದದ ಕೇಂದ್ರವಾಗಿ ಮೂಡಿ ಬರಲಿರುವ ‘ಬ್ಯಾರೀಸ್ ಸೌಹಾರ್ದ ಭವನ’ವನ್ನು ಸುಮಾರು ಒಟ್ಟು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸರ್ಕಾರವು ಕೂಡ ಸಮುದಾಯ ಅಭಿವೃದ್ಧಿಯ ಭಾಗವಾಗಿ ಆರು ಕೋಟಿಯ ನೆರವು ನೀಡಿದ್ದರೆ, ಉಳಿದ ಮೊತ್ತವನ್ನು ಬ್ಯಾರಿ ಸಮುದಾಯದ ಗಣ್ಯರು ಹಾಗೂ ಉದ್ಯಮಿಗಳು ಭರಿಸಿದ್ದಾರೆ.

ಸಿದ್ದರಾಮಯ್ಯನವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2015ರ ನವೆಂಬರ್‌ನಲ್ಲಿ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ್ದರು. ಅಂದು ಅಡಿಗಲ್ಲು ಹಾಕಿದ್ದ ಕಟ್ಟಡ ಸುಮಾರು 8 ವರ್ಷಗಳ ಬಳಿಕ ಇಂದು ತಲೆ ಎತ್ತಿ ನಿಂತಿದ್ದು ಸೆ.30ರಂದು ಖುದ್ದು ಸಿದ್ದರಾಮಯ್ಯನವರೇ ಇದನ್ನು ಉದ್ಘಾಟಿಸಲಿದ್ದಾರೆ.

ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರ ಮುಂದಾಳತ್ವದಲ್ಲಿ ಬ್ಯಾರೀಸ್ ಗ್ರೂಪ್‌ನ ಸೈಯ್ಯದ್ ಮೊಹಮ್ಮದ್ ಬ್ಯಾರಿ ಅವರ ಉಸ್ತುವಾರಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

ಆಕರ್ಷಕ ಕಟ್ಟಡ
ಕಾರ್ಪೊರೇಟ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಬ್ಯಾರೀಸ್ ಭವನದ ಕಟ್ಟಡದ ಸ್ವಲ್ಪ ಜಾಗದಲ್ಲೂ ಹಸಿರು ಗಿಡಗಳನ್ನು ನೆಡಲಾಗಿದೆ. ಹಸಿರು ಕಟ್ಟಡ(Green Building) ಮಾದರಿಯಲ್ಲಿ ನೈಸರ್ಗಿಕ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲೂ ಕಂಬಗಳು ಅಡ್ಡ ಬಾರದಂತೆ ಸಭಾಂಗಣದ ವಿನ್ಯಾಸ, ಗೋಡೆ, ನೆಲ, ಸೀಲಿಂಗ್, ಲೈಟಿಂಗ್ ಎಲ್ಲವೂ ಗಮನ ಸೆಳೆಯುತ್ತಿವೆ.

ಏನೆಲ್ಲಾ ಸೌಲಭ್ಯ?
ಐದು ಮಹಡಿಗಳ ಪೈಕಿ ನೆಲಮಹಡಿಯಲ್ಲಿ ರಿಸೆಪ್ಶನ್, ವಿಶಾಲವಾದ ಕಚೇರಿ, ಬೋರ್ಡ್ ರೂಂ, ವಾಶ್ ರೂಂ, ಮೊದಲ ಮಹಡಿಯಲ್ಲಿ ಸಭಾಂಗಣ ಮತ್ತು ವೇದಿಕೆ, ಎರಡನೇ ಮಹಡಿಯಲ್ಲಿ ಮಹಿಳಾ ಸಭಾಂಗಣ, ಪಕ್ಕದಲ್ಲಿ ಪ್ರಾರ್ಥನಾ ಕೊಠಡಿ, ನಂತರ ಎರಡು ಅಂತಸ್ತಿನಲ್ಲಿ ಹಾಸ್ಟೆಲ್ ಅಥವಾ ಪಿ ಜಿ ವ್ಯವಸ್ಥೆ ಹಾಗೂ ಟೆರೇಸಿನಲ್ಲಿ ಕ್ಯಾಂಟೀನ್ ಮತ್ತು ಮಹಿಳೆಯರ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಳ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಈ ದಿನ.ಕಾಮ್ ಜೊತೆಗೆ ಮಾತನಾಡಿದ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಯೂಸುಫ್ ಕೊಡಾಜೆ, “ಕಲಿಯಲೆಂದು ದೂರದ ಊರಿನಿಂದ ಬರುವ ವಿದ್ಯಾರ್ಥಿನಿಯರಿಗೆ ಪಿಜಿ ವ್ಯವಸ್ಥೆ ಇರಲಿದ್ದು, ಎರಡು ಮಹಡಿಗಳಲ್ಲಿ ಸುಮಾರು 30 ಕೊಠಡಿಗಳಿವೆ. ಉದ್ಘಾಟನೆಯಾದ ಬಳಿಕ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಿದ್ದೇವೆ” ಎಂದರು.

2015ರಲ್ಲಿ ನಡೆದ ಶಂಕುಸ್ಥಾಪನೆಯ ಸಂದರ್ಭ

ಕಟ್ಟಡದಲ್ಲಿರುವ ವಾಣಿಜ್ಯ ಅಂಗಡಿಗಳಿಂದ ಬರುವ ಆದಾಯವನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮಾಜ ಸೇವೆಗೆ ಬಳಸುವ ಉದ್ದೇಶವನ್ನು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್‌ ಹೊಂದಿದೆ.

ಇಂಥದ್ದೊಂದು ಕಟ್ಟಡ ಬೆಂಗಳೂರಿನಲ್ಲಿ ನಿರ್ಮಿಸುವುದು ಮಾಜಿ ಸಚಿವ, ದಿವಂಗತ ಬಿ ಎ ಮೊಹಿದ್ದೀನ್ ಅವರ ಸಹಿತ ಹಲವು ಮಂದಿ ಬ್ಯಾರಿ ಸಮುದಾಯದ ಗಣ್ಯರ ಕನಸಾಗಿತ್ತು. ಅದು ಈಡೇರುವ ದಿನಗಳು ಹತ್ತಿರವಾಗಿದೆ.

ಸೆ.30ರಂದು ಮುಖ್ಯಮಂತ್ರಿಯಿಂದ ಉದ್ಘಾಟನೆ
ಬ್ಯಾರೀಸ್ ಸೌಹಾರ್ದ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಬಿ ಎ ಮೊಹಿದ್ದೀನ್ ಸ್ಮಾರಕ ಸಭಾಂಗಣವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು ಟಿ ಖಾದರ್, ಮಾಜಿ ಸಿಎಂಗಳಾದ ಹೆಚ್‌ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ ಎಂ ಫಾರೂಕ್ ವಹಿಸಲಿದ್ದಾರೆ. ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಫೋಟೋ ಕೃಪೆ: ಆರಿಫ್ ಪಡುಬಿದ್ರಿ

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಕಾಣೆಯಾಗಿದ್ದ ಏಳು ವರ್ಷದ ಬಾಲಕಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕಿ...

ಕಾಂಗ್ರೆಸ್‌ ಗ್ಯಾರಂಟಿಗಳಿಂದ ಮಹಿಳೆಯರ ಸಬಲೀಕರಣ ಆಗಲ್ಲ: ಸುಮಲತಾ

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಸಮರ್ಥನೀಯವಲ್ಲ. ಅವುಗಳು ಮಹಿಳೆಯರನ್ನು ಸಬಲೀಕರಣ ಮಾಡುವುದಿಲ್ಲ ಎಂದು...

ದಾಂಡೇಲಿ | ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನರ‌ ಸಾವು

ಉತ್ತರ ಕನ್ನಡದ ದಾಂಡೇಲಿ ಬಳಿ ಬರಿಯಂಪೈಲಿ ಗ್ರಾಮದ ಸನಿಹ ಅಕೋಡಾ ಮಜಿರೆ...

ಜಪ್ತಿಯಾದ 2 ಕೋಟಿ ರೂ. ಬಿಜೆಪಿಗೆ ವಾಪಸ್‌; ಅಧಿಕಾರಿಗಳ ಮೇಲೆ ಕೃಷ್ಣ ಬೈರೇಗೌಡ ಗರಂ

"ನಾವೂ ಹೀಗೆ ಹಣದ ಮೂಲಕ ವಹಿವಾಟು ನಡೆಸಿದರೆ ನಮ್ಮ ಎಲ್ಲಾ ವಹಿವಾಟನ್ನು...