ಇಸ್ಲಾಂ ಧರ್ಮ ಹಿಂಸೆಯನ್ನು ಬಿತ್ತುತ್ತದೆ ಎನ್ನುವುದೇ ಶುದ್ಧ ಸುಳ್ಳು: ಚಿರಂಜೀವಿ ಸಿಂಘ್

Date:

  • ಯೋಗೇಶ್ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
  • ಬೆಂಗಳೂರಿನ ಬಿಫ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಭಿಪ್ರಾಯ

ಇಸ್ಲಾಂ ಎಂದರೆ ಹಿಂಸೆ ಬಿತ್ತುವ ಧರ್ಮ ಎನ್ನುವುದು ಜಗತ್ತಿನಾದ್ಯಂತ ಇರುವ ಶುದ್ಧ ಸುಳ್ಳು. ಅದನ್ನು ಹೋಗಲಾಡಿಸಿ, ಶಾಂತಿಯ ಧರ್ಮ ಎನ್ನುವ ಸತ್ಯದ ದರ್ಶನವನ್ನು ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಮಾಡಿಸುತ್ತದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್ ಹೇಳಿದರು.

ಮಂಗಳೂರಿನ ಶಾಂತಿ ಪ್ರಕಾಶನ ಗುರುವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗೀಶ್‌ ಮಾಸ್ಟರ್‌ ಅವರ ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಸವ ತತ್ವಕ್ಕೂ ಕುರಾನಿಗೂ ಸಾಕಷ್ಟು ಹೋಲಿಕೆ ಇದೆ. ಎರಡೂ ಧರ್ಮಗಳ ಸಾರವೂ ಒಂದೇ ಆಗಿದೆ. ಯೋಗೀಶ್‌ ಮಾಸ್ಟರ್‌ ಅವರ ಪುಸ್ತಕ ಪೈಗಂಬರ್‌ ಅವರ ಅನುಭವದ ಕಥನವಾಗಿದೆ. ಎಲ್ಲ ಧರ್ಮಗಳನ್ನೂ ಗೌರವಿಸುವ, ಸ್ಮರಿಸುವ ಧ್ಯೇಯಗಳನ್ನು ಒಳಗೊಂಡಿದೆ. ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆ ಕಟ್ಟಿಕೊಟ್ಟಿದೆ. ಓದುವ ಅಭ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಪುಸ್ತಕವನ್ನು ಡಿಜಿಟಲ್‌ ಆವೃತ್ತಿಗಳ ಮೂಲಕವೂ ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಲೇಖಕಿ ವಸುಂಧರಾ ಭೂಪತಿ ಮಾತನಾಡಿ, ಉತ್ತಮ ನಡೆಯ ಮೂಲಕ ಅಪ್ಪಂದಿರು ಮಕ್ಕಳನ್ನು ತಿದ್ದಬೇಕು. ಸ್ನೇಹಿತರಂತೆ ಕಾಣಬೇಕು. ತ್ಯಾಗ ಸೌಹಾರ್ದ ಕಲಿಸಬೇಕು. ಮಕ್ಕಳ ಸುಳ್ಳುಗಳನ್ನು ಕ್ಷಮಿಸಬೇಕು. ಅಂತಹ ಮಕ್ಕಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ ಎಂಬ ವಿವರಗಳನ್ನೂ ಪುಸ್ತಕ ದಾಖಲಿಸಿದೆ ಎಂದರು.

ಕೃತಿ ಕುರಿತು ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮಾತನಾಡಿದರು.

ಜಮಾತೆ ಇಸ್ಲಾಮೀ ಹಿಂದ್‌ ಕಾರ್ಯದರ್ಶಿ, ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಲೇಖಕ ಯೋಗೀಶ್‌ ಮಾಸ್ಟರ್‌ ಉಪಸ್ಥಿತರಿದ್ದರು.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್‌ ಸಾದ್ ಬೆಳಗಾಮಿ ಅಧ್ಯಕ್ಷತೆ ವಹಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅವಹೇಳನಕಾರಿ ಭಾಷಣ; ನಗರಸಭೆ ಸದಸ್ಯ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಹಿಂದೂ ಪರ...

‘ಬಾಂಡ್ ಭ್ರಷ್ಟಾಚಾರದ ಸಮರ್ಥನೆಗೆ ಮೋದಿ ಇಳಿದದ್ದು ದುರಂತದ ಸಂಗತಿ’

ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ನಡೆಸಿದ ಹೋರಾಟಗಾರ್ತಿ ಅಂಜಲಿ...

ಎಲೆಕ್ಟೋರಲ್‌ ಬಾಂಡ್ ಸಮಗ್ರ ತನಿಖೆಗೆ ಎಸ್‌ಐಟಿ ನೇಮಕ ಅಗತ್ಯ: ಪ್ರಶಾಂತ್ ಭೂಷಣ್

ಬಿಜೆಪಿ ಸರ್ಕಾರ ಜಾರಿಗೆ ತಂದ ಎಲೆಕ್ಟೋರಲ್ ಬಾಂಡ್‌ಗಳ ರದ್ದತಿಗಾಗಿ ಹೋರಾಡಿ ಯಶಸ್ವಿಯಾಗಿರುವ...