ಔರಾದ್ ತಾಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಯುವಕರ ತಂಡದ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.
ಯುವ ಮುಖಂಡ ಶ್ರೀಕಾಂತ ಮೂಲಗೆ ಮಾತನಾಡಿ, “ಆದರ್ಶಪೂರ್ಣ ಜೀವನ ನಡೆಸಲು ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಪ್ರೇರಣೆಯಾಗಿದೆ. ರಾಮಾಯಣವು ಸತ್ಯ, ಧರ್ಮ, ತ್ಯಾಗ, ಪ್ರೀತಿ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರುತ್ತದೆ. ಪ್ರತಿಯೊಬ್ಬರೂ ರಾಮಾಯಣದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ಸಮಾಜಕ್ಕೆ ಸದಾ ದಾರಿದೀಪವಾಗಿವೆ” ಎಂದು ಹೇಳಿದರು.
ಈ ವರ್ಷದ ಜಯಂತಿಯ ಅಂಗವಾಗಿ ಗ್ರಾಮದ ಯುವಕರ ತಂಡವು ಮಹರ್ಷಿ ವಾಲ್ಮೀಕಿ ಮೂರ್ತಿಯ ಭವ್ಯ ಮೆರವಣಿಗೆಯನ್ನು ಸಂಭ್ರಮದಿಂದ ಆಯೋಜಿಸಿತ್ತು. ಮೆರವಣಿಗೆಯಲ್ಲಿ ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಜಯಂತಿಯ ಸಂಭ್ರಮವನ್ನು ಹೆಚ್ಚಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರು ಮತ್ತು ಗ್ರಾಮಸ್ಥರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮಹರ್ಷಿ ವಾಲ್ಮೀಕಿಯವರ ಜೀವನ, ಸಾಹಿತ್ಯ ಹಾಗೂ ಆದರ್ಶಗಳನ್ನು ಸ್ಮರಿಸುವ ಮೂಲಕ ಅವರ ಸಂದೇಶಗಳನ್ನು ಸಮಾಜದಲ್ಲಿ ಪಸರಿಸುವ ಪ್ರಯತ್ನ ನಡೆಯಿತು. ಗ್ರಾಮದಲ್ಲಿ ಒಗ್ಗಟ್ಟು, ಭಕ್ತಿ ಮತ್ತು ಸೌಹಾರ್ದದ ವಾತಾವರಣದಲ್ಲಿ ಜಯಂತಿ ಆಚರಣೆ ನಡೆಯಿತು.
ಗ್ರಾಮಸ್ಥರಾದ ಮಹೇಶ ಮಾನಕೋಜಿ, ಶ್ರೀಮಂತ ಮಾನಕೋಜಿ, ಸತೀಶ ಕೋಳಿ, ಜಗನಾಥ ಮಾನಕೋಜಿ, ಬಾಲಾಜಿ ಮಾನಕೋಜಿ, ರಾಮಣ್ಣ ಮಾನಕೋಜಿ, ಪಂಡಿತ ಕೋಳಿ, ಗಣಪತಿ ಕೋಳಿ, ಅಣ್ಣಾರಾವ ಕೋಳಿ, ಪ್ರಭು ಕೋಳಿ, ನವನಾಥ ಕೋಳಿ, ದತ್ತಾತ್ರಿ ಕೋಳಿ, ಜ್ಞಾನೇಶ್ವರ ಕೋಳಿ, ಶಶಿಕಾಂತ ಮಾನಕೋಜಿ, ಮದಕರ್, ಮಹಾದೇವ ಮಾನಕೋಜಿ, ಸಂತೋಷ ಕೋಳಿ, ಹರಿ ಮಾನಕೋಜಿ, ಶಿವರಾಜ ಪಾಟೀಲ್, ಬಾಲಾಜಿ ಪಾಟೀಲ್, ದತ್ತಾತ್ರಿ ಮೇತ್ರೆ, ರಾಜಕುಮಾರ ರಕ್ಷಾಳ, ವಿನೋದ ಮಾನಕೋಜಿ, ಅರುಣ ಮಾನಕೋಜಿ, ಸಂದೀಪ್, ಶರದ ಕೋಳಿ, ನ್ಯಾನೋಬಾ, ಅನಿಲ್, ಉಮಾಕಾಂತ, ವಿಠಲ, ಗಣೇಶ, ಓಂಕಾರ, ಈಶ್ವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ : ಔರಾದ್ | ಸಾಲಬಾಧೆ : ರೈತ ಆತ್ಮಹತ್ಯೆ






