ಬೀದರ್‌ | ನೀರಿನ ಸಮಸ್ಯೆ ಪರಿಹರಿಸಿದ್ದ ಬೊಮ್ಮಗೊಂಡೇಶ್ವರ

Date:

ಹಿಂದೆ ಈ ಭಾಗದಲ್ಲಿ ತೀವ್ರ ಬರಗಾಲ ಉಂಟಾದಾಗ ಮಹಾತ್ಮ ಬೊಮ್ಮಗೊಂಡೇಶ್ವರರು ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ್ದರು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹುಮನಾಬಾದ್ ತಾಲ್ಲೂಕು ವಿಸ್ತರಣಾಧಿಕಾರಿ ಶಿವಕುಮಾರ ಕುಪ್ಪೆ ಹೇಳಿದರು.

- Advertisement -

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ನಗರದ ಗಾಂಧಿಗಂಜ್‍ನ ಕನಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೊಮ್ಮಗೊಂಡೇಶ್ವರ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಬೇಟೆಯಾಡಲು ಹೋಗಿದ್ದಾಗ ಬಹಮನಿ ಅರಸರು ಹಾಗೂ ಸೈನಿಕರಿಗೆ ನೀರಡಿಕೆಯಾಗಿತ್ತು. ಹುಡುಕಾಡಿದರೂ ಅವರಿಗೆ ನೀರು ಸಿಕ್ಕಿರಲಿಲ್ಲ. ಆಗ, ಬೊಮ್ಮಗೊಂಡೇಶ್ವರರು ತಮ್ಮ ಕೋಲಿನಿಂದ ಬಂಡೆ ಸರಿಸಿದಾಗ ನೀರು ಹರಿಯಲಾರಂಭಿಸಿತು. ಅದರಿಂದ ಅವರು ಅರಸರು ಹಾಗೂ ಸೈನಿಕರ ಬಾಯಾರಿಕೆ ನೀಗಿಸಿದ್ದರು ಎಂದು ತಿಳಿಸಿದರು.

ಬೊಮ್ಮಗೊಂಡೇಶ್ವರರು ನೀರು ಕುಡಿಸಿದ್ದಕ್ಕೆ ಪ್ರತಿಯಾಗಿ ಬಹಮನಿ ಅರಸ ಕುರಿ ಮಾರಾಟ ಕರವನ್ನು ರದ್ದುಪಡಿಸಿದ್ದರು. ಇದರಿಂದ ಕುರಿಗಾಹಿಗಳಿಗೆ ಸಹಾಯವಾಗಿತ್ತು. ಚಿದ್ರಿಯ ಶಿವಗೊಂಡ ಹಾಗೂ ಗಂಗವ್ವ ಅವರ ಉದರದಲ್ಲಿ ಜನಿಸಿದ್ದ ಬೊಮ್ಮಗೊಂಡೇಶ್ವರ ಕುರಿ ಕಾಯುವ ಕುಲ ಕಸುಬು ಮುಂದುವರಿಸಿದರು. ಮುಂದೆ ಮಹಾ ಪುರುಷರಾದರು. ತಮ್ಮ ಪವಾಡಗಳ ಮೂಲಕ ಜನರ ಅನೇಕ ಸಂಕಷ್ಟಗಳನ್ನು ದೂರ ಮಾಡಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚಿಂತಕ ಕಲ್ಲಪ್ಪ ರಾಯಗೊಂಡ ಮಾತನಾಡಿ, ಬೊಮ್ಮಗೊಂಡೇಶ್ವರ ಜೀವನ ಹಾಗೂ ಸಾಧನೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ಸಾಹಿತಿ ಮುರಳಿನಾಥ ಮೇತ್ರೆ ಬೊಮ್ಮಗೊಂಡೇಶ್ವರ ಜೀವನ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

WhatsApp Image 2026 10 10 at 7.46.08 PM 24
ಜಾಹೀರಾತು

ಪೊಲೀಸ್ ಕಾನ್‍ಸ್ಟೆಬಲ್ ಸಂತೋಷ್ ಮೇತ್ರೆ, ವಿಠ್ಠಲರಾವ್ ಭಂಗೂರೆ, ಆತ್ಮಾನಂದ ಬಂಬಳಗಿ, ಸೂರ್ಯಕಾಂತ ನಿರ್ಣಾಕರ್, ಮಲ್ಲಿಕಾರ್ಜುನ ಸಾತೋಳಿ, ಎಂ.ಪಿ. ವೈಜಿನಾಥ, ಪಂಢರಿ ಜಮಾದಾರ್, ಮಾರುತಿ ಪೂಜಾರಿ, ಸುನೀಲ್ ಚಿಲ್ಲರ್ಗಿ ಮತ್ತಿತರರು ಇದ್ದರು. ಮಲ್ಲಿಕಾರ್ಜುನ ಮುರ್ಕೆ ಸ್ವಾಗತಿಸಿದರು. ವಿಜಯಕುಮಾರ ಪೀರಗೊಂಡ ಬ್ಯಾಲಹಳ್ಳಿ ನಿರೂಪಿಸಿದರು. ಗೋವಿಂದ ದುರ್ಗೆ ವಂದಿಸಿದರು.

ಇದನ್ನೂ ಓದಿ : ಬೀದರ್‌ | ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ʼಬೆಂಕಿʼ ಪಾಲು, ಆರ್ಥಿಕ ಸಂಕಷ್ಟದಲ್ಲಿ ರೈತರು

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಮಹರ್ಷಿ ವಾಲ್ಮೀಕಿ: ಶಾಸಕ ವಿಠ್ಠಲ ಕಟಕಧೊಂಡ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ...

ಬಾಗಲಕೋಟೆ | ಸಾರ್ವಜನಿಕ ಸೇವೆಗಳಲ್ಲಿ ಲೋಪ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒ ಗಜಾನನ ಬಾಲೆ ಸೂಚನೆ

ಬಡವರು, ರೋಗಿಗಳು, ವಿದ್ಯಾರ್ಥಿನಿಯರು ಹಾಗೂ ವೃದ್ಧರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕಾದ ಸರ್ಕಾರಿ...

ಗ್ಯಾನೇಶ್ ಕುಮಾರ್ ವಜಾಗೊಂಡರೆ, 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ: ರಾಹುಲ್‌ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಪ್ರಧಾನಿ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...