ಬಸವಕಲ್ಯಾಣ | ಹೊಸ ಓದುಗರ ಅರಿವಿಗೆ ಬೇಕು ಕುವೆಂಪು ವೈಚಾರಿಕತೆ : ಭೀಮಾಶಂಕರ ಬಿರಾದರ್

Date:

ಹೊಸ ಓದುಗರಿಗೆ, ಯುವ ಪೀಳಿಗೆಗೆ ಕುವೆಂಪು ಅವರ ವೈಚಾರಿಕ ನಿಲುವು ತುಂಬಾ ಅಗತ್ಯವಿದೆ. ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳಾಗಿ ಎಂದು ಯುವಕರಿಗೆ ಕರೆ ಕೊಟ್ಟ ಕುವೆಂಪು ಶತಮಾನದ ಬಹುದೊಡ್ಡ ವಿಚಾರವಾದಿ ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

- Advertisement -

ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಜನ್ಮದಿನ ಮತ್ತು ಕುವೆಂಪು ಸಾಹಿತ್ಯದ ತಾತ್ವಿಕತೆ ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ʼಕುವೆಂಪು ಕನ್ನಡ ನುಡಿ ಪ್ರೇಮದ ಬಗೆಗೆ ಎಷ್ಟು ಕವಿತೆ ಬರೆದಿದ್ದಾರೆಯೋ ಅಷ್ಟೇ ಮಹತ್ವ ನೀಡಿದ್ದು ಪ್ರಕೃತಿ ಮತ್ತು ಪರಿಸರದ ವಿಸ್ಮಯಕ್ಕೆ. ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಬರುವ ಕಾಡಿನ ಕಥನ ಹಾಗೂ ವಿಶ್ಲೇಷಣೆ ಓದುಗರಿಗೆ ಕಾಡಿನ ಪಯಣದ ಅನುಭವ ನೀಡುತ್ತದೆʼ ಎಂದು ಹೇಳಿದರು.

ʼಕುವೆಂಪು ಅವರ ಸಾಹಿತ್ಯ ಕಳೆದ ಐವತ್ತು ವರ್ಷಗಳಲ್ಲಿ ಹಲವು ನೆಲೆಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಅನುಸಂಧಾನಕ್ಕೆ ಒಳಪಡುತ್ತಲಿವೆ. ʼಕುವೆಂಪು ಬರಹ ಆರಂಭಿಸಿದ ಕಾಲದಿಂದಲೇ ಟೀಕೆ, ಟಿಪ್ಪಣಿ, ಪ್ರತಿಕ್ರಿಯೆ ರೂಪದಲ್ಲಿ ಅವರ ಬರಹದ ಕುರಿತು ಕನ್ನಡದಲ್ಲಿ ವಿಮರ್ಶೆ ಪ್ರಾರಂಭವಾಗಿದೆʼ ಎಂದರು.

ʼಕಾಡು, ಕಾಡುಪ್ರಾಣಿಗಳು, ನಾಯಿ, ಮನುಷ್ಯ ಸಂಬಂಧಗಳ ಬಗ್ಗೆ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಹೆಗ್ಗಡತಿ’ ಕಾದಂಬರಿಗಳಲ್ಲಿ ಕಟ್ಟಿಕೊಟ್ಟ ಬಗ್ಗೆ ಅಚ್ಚರಿ ಮೂಡಿಸುತ್ತದೆ. ಈ ಕಾದಂಬರಿಗಳಲ್ಲಿ ಬರುವ ಮಲೆನಾಡಿನ ತಳಸಮುದಾಯದ ಬದುಕು, ಶೂದ್ರ ತಪಸ್ವಿ ನಾಟಕಗಳು ಸಬಾಲ್ಟರ್ನ್ ಓದಿಗೆ ಒಡ್ಡುತ್ತವೆʼ ಎಂದರು.

WhatsApp Image 2025 12 29 at 6.54.57 PM

ಕಲಬುರಗಿಯ ನಾಗಾಂಬಿಕಾ ಮಹಿಳಾ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಜಗದೀಶ್ ಬಡಿಗೇರ ಮಾತನಾಡಿ, ʼಕುವೆಂಪು ಈ ಶತಮಾನದ ಬಹುದೊಡ್ಡ ಲೇಖಕರು. ಮಕ್ಕಳ ಸಾಹಿತ್ಯ, ವಿಚಾರ, ವಿಮರ್ಶೆ, ನಾಟಕ, ಕತೆ, ಕಾದಂಬರಿ, ಮಹಾಕಾವ್ಯ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದಿದ್ದಾರೆ. ರಾಷ್ಟ್ರೀಯತೆ, ನುಡಿ ಪ್ರೇಮ ಕುವೆಂಪು ಸಾಹಿತ್ಯದ ಸತ್ವವಾಗಿದೆʼ ಎಂದರು.

ಕನ್ನಡ ಅಧ್ಯಾಪಕ ಚನ್ನಬಸಪ್ಪ ಗೌರ ಮಾತನಾಡಿ, ʼಕುವೆಂಪು ಅವರು ಕನ್ನಡ ಭಾಷೆ ಮತ್ತು ಕನ್ನಡಿಗರ ಅಭಿಮಾನದ ಬಗೆಗೆ ಹೆಚ್ಚು ಕವಿತೆಗಳು ಬರೆದಿದ್ದಾರೆ. ಅವರು ಸಾರಿದ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಡೀ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಹೋಲಿಸಿದ್ದಾರೆ. ಭಾರತದ ಅಖಂಡತೆ, ಅನನ್ಯತೆ ಸೂಚಿಸುವ ಕಾವ್ಯ ರಚಿಸಿದ್ದಾರೆʼ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕುವೆಂಪು ವಿರಚಿತರ ‘ಬಾ ಇಲ್ಲಿ ಸಂಭವಿಸು ಸತ್ಯಾವತಾರ’ ಮತ್ತು ‘ಅನಿಕೇತನ’ ಕವಿತೆಗಳು ವಾಚಿಸಿದರು.

ಇದನ್ನೂ ಓದಿ : ಕುವೆಂಪು ಪಂಚ ಮಂತ್ರಗಳಲ್ಲಿದೆ ಪ್ರಜಾಸತ್ತೆ ಕ್ರಾಂತಿ

ಕಾರ್ಯಕ್ರಮದಲ್ಲಿ ಪ್ರವೀಣ್ ಬಿರಾದಾರ, ಸಂಗೀತಾ ಮಹಾಗಾಂವೆ, ಶೃತಿ ನೀಲಮಠ, ರೋಷನ್ ಬೀ, ಗುರುದೇವಿ ಕಿಚಡೆ, ಸನತ್ ರೆಡ್ಡಿ, ಶಿತಲ್ ರೆಡ್ಡಿ, ಪ್ರೀಯಾ ಚೌಹಾಣ್, ಕೃಷ್ಣಪ್ಪ ಸದಲಾಪುರ, ನಾಗರಾಜ ನಾಸೆ, ಕೃಷ್ಣ ಗೌಳಿ, ವೀರೇಶ ಮಠಪತಿ, ಎಂ.ಡಿ.ಜಬಿ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಗಿರೀಶ್ ಪಾಟೀಲ ಅನೇಕರಿದ್ದರು. ಐಕ್ಯುಎಸಿ ಸಂಯೋಜಕ ಪವನ ಪಾಟೀಲ ಸ್ವಾಗತಿಸಿದರು .ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಜಾವಳಗೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಪೀಳಿಗೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲಿ: ಮುಬಾಶಿರ್ ಸಿಂಧೆ

ಯುವ ಪೀಳಿಗೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು...

ಬೀದರ್‌ | ಐತಿಹಾಸಿಕ ಕರೇಜ್ ಅಭಿವೃದ್ಧಿಗೆ ಬುಡಾ ಕೈಜೋಡಿಸಲಿ

ಬೀದರ್‌ ನಗರದಲ್ಲಿರುವ ಐತಿಹಾಸಿಕ ಕರೇಜ್ ಜಲವ್ಯವಸ್ಥೆಯನ್ನು ಸಂರಕ್ಷಿಸಿ, ಅಂತರ್ಜಲ ಮರುಪೂರಣ ಹಾಗೂ...

ಬೀದರ್‌ | ʼಯುವ ಸೌರಭʼ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭೆ ಅನಾವರಣ

ವಿದ್ಯಾರ್ಥಿಗಳಲ್ಲಿರುವ  ಪ್ರತಿಭೆಯನ್ನು ಅನಾವರಣಗೊಳಿಸಲು ‘ಯುವ ಸೌರಭ’ದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿವೆ....

ಬಸವಕಲ್ಯಾಣ | ಕಿಟ್ಟಾ ಗ್ರಾಮದ 20 ಬಡ ಕುಟುಂಬಗಳಿಗೆ ನಿವೇಶನ ನೀಡಲು ಆಗ್ರಹ

ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾ ಗ್ರಾಮದ ಸರ್ವೆ ನಂ. 249ರಲ್ಲಿ ಸುಮಾರು 20...