ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ರೈತ ಸಂಘದಿಂದ ರಸ್ತೆ ತಡೆ

Date:

ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮೈಸೂರಿನ ಸಬರ್ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

- Advertisement -

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ತಕ್ಷಣ ಇಳಿಸುವಂತೆ ಒತ್ತಾಯಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಕೆವಿಎನ್ ಅವರು ಮಂಡಿಸುತ್ತಿರುವ ಮಾರುಕಟ್ಟೆ ಶಕ್ತಿಗಳ ಭಾಷೆಯೊಂದಿಗಿನ ಅನುಕೂಲಸಿಂಧು ಚಲನಶೀಲ ಸಂಬಂಧಗಳ ಕುರಿತ ಗ್ರಹಿಕೆಗಳು, 'ಸಾಮ್ರಾಜ್ಯಶಾಹಿಗಳು ಮತ್ತು ದೇಶೀಯ ಆಳುವ ವರ್ಗಗಳು ಭಾಷೆಯನ್ನು ರಾಜಕಾರಣದ ಅಸ್ತ್ರವನ್ನಾಗಿ ಬಳಸುತ್ತಿವೆ' ಎನ್ನುವ ಕನ್ನಡ ವಿಚಾರ ಸಾಹಿತ್ಯದಲ್ಲಿನ...

ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್...

ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಭತ್ತದ ಉತ್ಪಾದನೆ ಕುಸಿತದ ಪರಿಣಾಮ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ ಅಕ್ಕಿ ಬಹುತೇಕ ಹಿಂದಿನ ಬೆಳೆ ವರ್ಷಗಳಲ್ಲಿ ಉತ್ಪಾದನೆಯಾಗಿ ಸಂಗ್ರಹಿಸಲ್ಪಟ್ಟಿರುವ ಅಕ್ಕಿ. ಪ್ರಸಕ್ತ...

ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು...

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ ಸಮುದ್ರ ತೀರ ಇತ್ತೀಚಿನ ದಿನಗಳಲ್ಲಿ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವಿಭಿನ್ನ ಶೈಲಿಯ ಮನರಂಜನೆಗೆ ಹೆಸರುವಾಸಿಯಾಗಿರುವ ತಣ್ಣೀರುಬಾವಿ ಬೀಚ್...

ಪ್ರತಿಭಟನೆಯಲ್ಲಿ ಮಾತನಾಡಿದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರಂಟಿಗಳ ಭರವಸೆ ನೀಡಿ ಮತದಾರರಿಂದ ಮತ ಪಡೆದಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಖಜಾನೆಯ ಮೇಲೆ ಆರ್ಥಿಕ ಹೊರೆ ಉಂಟಾಗಿದೆ ಎಂಬ ಕಾರಣ ನೀಡಿ ಈಗ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಸಾರಿಗೆ ಇಲಾಖೆಗೆ ಸುಮಾರು 24 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಹಾಕುವುದು ಸರಿಯಲ್ಲ. ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರವೇ ಈಗ ಬೆಲೆ ಏರಿಕೆಯ ಮೂಲಕ ಜನರಿಗೆ ದ್ರೋಹ ಮಾಡುತ್ತಿದೆ. ಇದು ಬಂಡೆ ಸರ್ಕಾರವಲ್ಲ, ಕತ್ತರಿ ಸರ್ಕಾರ ಎಂದು ಟೀಕಿಸಿದರು.

ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದು ಕಷ್ಟವಾಗಿದ್ದರೆ ಚುನಾಯಿತ ಶಾಸಕರು, ಸಚಿವರು ಹಾಗೂ ಸಂಸದರು ತಮ್ಮ ಸಂಬಳದಲ್ಲಿ ಹೆಚ್ಚುವರಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಲಿ. ಅದನ್ನು ಬಿಟ್ಟು ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್ ಮಾರುಕಟ್ಟೆಯ ಕರಾಮತ್ತು!

ರೈತರು ಹಾಗೂ ಸಾರ್ವಜನಿಕರು ಜಾಗೃತರಾಗಿ ಹೆಚ್ಚುವರಿ ಬಸ್ ಪ್ರಯಾಣ ದರ ಪಾವತಿಸದೆ ಕರ ನಿರಾಕರಣೆಯ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.

ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ, ಆಹಾರ ಭದ್ರತೆಗೆ ಎದುರಾಗಿದೆ ಸವಾಲು!

ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ, ಕರ್ನಾಟಕ ಹಸಿರು ರೈತ ಸಂಘದ ಅಧ್ಯಕ್ಷ ವಳಗೆರೆ ಗಣೇಶ್, ಪಾಂಡವಪುರದ ನವೀದ್, ಬಸವರಾಜ್, ಮಲಿಯೂರು ಮಹೇಂದ್ರ, ಕಸುವಿನಹಳ್ಳಿ ಮಂಜೇಶ್, ದೇವಿರಮ್ಮನಹಳ್ಳಿ ಹುಂಡಿ ಮಹೇಶ್, ರೇವಣ್ಣ, ಇಸ್ರಾ ಖಾನ್, ಮಹೇಶ್, ಮುದ್ದಳ್ಳಿ ಮಧು, ಗೌಡಿಕೆ ಶಿವಣ್ಣ, ಬಿ. ಸೀಹಳ್ಳಿ ರವಿ, ಗುರುವಿನಪುರ ಚಂದ್ರು, ದೇವಿರಮ್ಮನಹಳ್ಳಿ ಪ್ರಭುಸ್ವಾಮಿ, ಮಾದ್ನಳ್ಳಿ ಶಿವಣ್ಣ, ಸುರುಪತಿ ನಾಗಣ್ಣ, ಕಡಕೋಳ ಪ್ರಭು, ಜೆಸಿಬಿ ಚಿದಂಬರ ಸೇರಿದಂತೆ ನೂರಾರು ರೈತರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿಯಲ್ಲಿ ನವೆಂಬರ್ 7ರಂದು ಪ್ರಜಾಸೇವೆ ಆಂದೋಲನ

ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ...

ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಉದ್ಘಾಟನೆ: ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್

ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ...

ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು ಕಳೆದುಕೊಳ್ಳುವ ಭೀತಿಯಲ್ಲಿ ಬಡ ಕುಟುಂಬಗಳು!

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ...

ಡಿಸೆಂಬರ್ 12ರಂದು ಕೊಡಗು ಜಿಲ್ಲಾದ್ಯಂತ ರಾಷ್ಟ್ರೀಯ ಲೋಕ ಅದಾಲತ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ...