ಬೀದರ್‌ | ಜಲ್ಲಿ ಕಲ್ಲಿನ ರಸ್ತೆ ಮೇಲೆ ಜನರ ಸರ್ಕಸ್;‌ ಮುಗ್ಗರಿಸಿ ಬಿದ್ದರೂ ಕದಲದ ಆಡಳಿತ!

Date:

ಹದಗೆಟ್ಟ ರಸ್ತೆಗಳು, ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ, ಮುಗ್ಗರಿಸಿ ಬಿದ್ದರೂ ಕೇಳುವವರಿಲ್ಲ, ಸವಾರರ ಪಾಲಿಗೆ ಮೃತ್ಯುಕೂಪವಾಗಿ ಮಾರ್ಪಟ್ಟಿರುವ ಹಳ್ಳ-ಕೊಳ್ಳಗಳು! ಇದು ಔರಾದ್ ತಾಲೂಕಿನ ಕೌಠಾ(ಕೆ)-ವಡಗಾಂವ(ದೇ) ಸಂಪರ್ಕ ರಸ್ತೆಯ ಇಂದಿನ ದುಸ್ಥಿತಿ. ಹಲವು ವರ್ಷಗಳಿಂದ ದುರಸ್ತಿ ಕಾಣದ ಈ ರಸ್ತೆಯಲ್ಲಿ ಸರ್ಕಸ್‌ ಮಾಡಿಕೊಂಡೇ ಸಂಚರಿಸುವ ಸಾರ್ವಜನಿಕರು ಈಗ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

- Advertisement -

ಹೌದು, ಔರಾದ್‌ ತಾಲೂಕಿನ ಕೌಠಾ(ಕೆ)-ವಡಗಾಂವ(ದೇ) ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಂಚಾರ ದುಸ್ತರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ವಡಗಾಂವ(ದೇ) ಗ್ರಾಮದಿಂದ ಆಲೂರ(ಕೆ), ಆಲೂರ(ಬಿ), ಬೇಲೂರ(ಎನ್)‌, ಪಾಶಾಪುರ, ಗಡಿಕುಶನೂರು ಸೇರಿದಂತೆ ಇತರ ಹಳ್ಳಿಗಳ ಜನರು ಈ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಾರೆ. ಹಲವು ಗ್ರಾಮಗಳಿಗೆ ಬೈಕ್, ಬಸ್, ಆಟೊ ಸೇರಿದಂತೆ ಅನೇಕ ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆಯುದ್ದಕ್ಕೂ ಹಾಸುಹೊಕ್ಕಾಗಿರುವ ಗುಂಡಿಗಳಿಗೆ ಲೆಕ್ಕವೇ ಇಲ್ಲ. ರಸ್ತೆಯ ಟಾರು ಕಿತ್ತು ಬಂದು, ಜಲ್ಲಿಕಲ್ಲುಗಳ ರಸ್ತೆ ನಿರ್ಮಾಣವಾಗಿದೆ. ಅದರಲ್ಲಿ ವಾಹನಗಳು ಕುಲಕುತ್ತಾ ಸಾಗುತ್ತವೆ. ಹದಗೆಟ್ಟಿರುವ ರಸ್ತೆ ಮೂಲಕ ಹೋಗುವಾಗ ಗುಂಡಿಯಲ್ಲಿ ಆಯ ತಪ್ಪಿ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡ ಪ್ರಸಂಗಗಳೂ ಇವೆ. ಆದರೂ ಸಹ ರಸ್ತೆ ದುರಸ್ತಿಗೆ ರಾಜಕಾರಣಿಗಳು ಅಧಿಕಾರಿಗಳು ಹಾಗೂ ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಸುಮಾರು 11 ಕಿ.ಮೀ. ಇರುವ ಈ ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಮಯ ರಸ್ತೆಯ ಮೇಲೆ ಸವಾರರು ಸರ್ಕಸ್ ಮಾಡುತ್ತ ಸಾಗಬೇಕಿದೆ. ಒಮ್ಮೊಮ್ಮೆ ರಸ್ತೆಯೊಳಗೇ ಗುಂಡಿಗಳೋ, ಗುಂಡಿಗಳೊಳಗೆ ರಸ್ತೆಗಳೋ ಎನ್ನುವ ಅನುಮಾನ ಬರುವಷ್ಟು ರಸ್ತೆ ಕಿತ್ತು ಗಬ್ಬೆದ್ದೋಗಿದೆ. ಡಾಂಬರ್‌ ಕಾಣದೆ ರಸ್ತೆ ಧೂಳುಮಯವಾಗಿದೆ. ಮಳೆಗಾಲದಲ್ಲಿ ತಗ್ಗುಗಳು ರಾಡಿಯಾದರೆ, ಬೇಸಿಗೆಯಲ್ಲಿ ಧೂಳುಮಯವಾಗುತ್ತದೆ. ಸ್ವಲ್ಪ ಆಯತಪ್ಪಿದರೂ ಅನಾಹುತ ತಪ್ಪಿದ್ದಲ್ಲ.‌

ವಡಗಾಂವ(ದೇ) ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ‌ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಬೀದರ್ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಾರೆ. ತಗ್ಗುಗುಂಡಿಗಳ ಹದಗೆಟ್ಟ ರಸ್ತೆಯಲ್ಲಿಯೇ ಜನರು ಹರಸಾಹಟಪಟ್ಟು ಓಡಾಟ ಮಾಡುವುದು ಅನಿವಾರ್ಯವಾಗಿದೆ. ನಾಲ್ಕು ಬಾರಿ ಗೆದ್ದಿರುವ ಕ್ಷೇತ್ರದ ಶಾಸಕರೂ ಸಹ ರಸ್ತೆ ದುರಸ್ತಿ ವಿಚಾರದಲ್ಲಿ ಮೌನವಹಿಸಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು.

ಈ ಕುರಿತು ಪಿಡಬ್ಲ್ಯುಡಿ ಎಇಇ ಪ್ರೇಮಸಾಗರ ಹಮೀಲಾಪುರೆ ʼಈದಿನʼದೊಂದಿಗೆ ಮಾತನಾಡಿ, “ವಡಗಾಂವ(ದೇ)-ಕೌಠಾ(ಕೆ) ಮಾರ್ಗಮಧ್ಯದ ರಸ್ತೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಗಮನಕ್ಕಿದೆ. ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ರಸ್ತೆ ಅಭಿವೃದ್ಧಿ ಸಂಬಂಧ 10 ಕೋಟಿ ಅನುದಾನ ಮಂಜೂರಾತಿಗಾಗಿ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಕಳಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು” ಎಂದು ಹೇಳಿದರು.

“ಔರಾದ್‌ ತಾಲೂಕಿನ ಆಲೂರ(ಬಿ), ಆಲೂರು(ಕೆ), ಗಡಿಕುಶನೂರು, ಪಾಶಾಪೂರ ಸೇರಿದಂತೆ ಅನೇಕ ಗ್ರಾಮಗಳ ಜನರು ನಿತ್ಯ ಜಿಲ್ಲಾ, ತಾಲೂಕು ಕೇಂದ್ರಕ್ಕೆ ಶಾಲಾ-ಕಾಲೇಜು, ವ್ಯಾಪಾರ ವಹಿವಾಟಿಗೆ ತೆರಳುತ್ತಾರೆ. ಹದಗೆಟ್ಟ ರಸ್ತೆಯಿಂದಾಗಿ ಈ ಭಾಗದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು” ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ್‌ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಬೀದರ್‌ | ಏ.11, 12ರಂದು ಪತ್ರಕರ್ತರ ರಾಜ್ಯ ಸಮ್ಮೇಳನ : 5 ಸಾವಿರ ಪತ್ರಕರ್ತರು ಭಾಗಿ

ಕೌಠಾ(ಕೆ)-ವಡಗಾಂವ(ದೇ) ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಳಾಗಿ ಹಲವು ವರ್ಷಗಳಾಗಿವೆ. ರಸ್ತೆಯುದ್ದಕ್ಕೂ ಆಳುದ್ದದ ತಗ್ಗು-ಗುಂಡಿಗಳಿವೆ. ಇಂತಹ ರಸ್ತೆಯಲ್ಲಿ ಸಂಚರಿಸುವ ಅನೇಕರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಆದರೂ ರಸ್ತೆ ಸುಧಾರಣೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಲಾದರೂ ಎಚ್ಚೆತು ರಸ್ತೆ ರಿಪೇರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕುʼ ಎಂದು ಬೇಲೂರ(ಎನ್)‌ ಗ್ರಾಮಸ್ಥ ಸಂಜುಕುಮಾರ ಒತ್ತಾಯಿಸಿದ್ದಾರೆ.

ಪಿಡಬ್ಲ್ಯುಡಿ ಅಧಿಕಾರಿಗಳು 10 ಕೋಟಿ ರೂ.ಗಳ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳುತ್ತಿದ್ದರೆ, ಇತ್ತ ಗ್ರಾಮಸ್ಥರು ಪ್ರತಿ ದಿನವೂ ಜೀವವನ್ನು ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳ ಭವಿಷ್ಯ ಮತ್ತು ರೋಗಿಗಳ ತುರ್ತು ಚಿಕಿತ್ಸೆಗೆ ಈ ರಸ್ತೆಯೇ ದೊಡ್ಡ ಅಡ್ಡಿಯಾಗಿದೆ. ಮತ ಕೇಳಲು ಬರುವ ಜನಪ್ರತಿನಿಧಿಗಳು, ಜನರ ಈ ಮೂಲಭೂತ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲರಾದರೆ ಮುಂದಿನ ದಿನಗಳಲ್ಲಿ ʼಚುನಾವಣಾ ಬಹಿಷ್ಕಾರʼ ಅಥವಾ ʼಉಗ್ರ ಹೋರಾಟʼದಂತಹ ನಿರ್ಧಾರಗಳಿಗೆ ಹಳ್ಳಿಗಳ ಜನ ಮುಂದಾಗುವುದರಲ್ಲಿ ಸಂಶಯವಿಲ್ಲ.

ಇನ್ನಾದರೂ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಅನುದಾನ ಬಿಡುಗಡೆಗೆ ವೇಗ ನೀಡಿ, ಈ ʼಮೃತ್ಯುಕೂಪʼಕ್ಕೆ ಮುಕ್ತಿ ಹಾಡಬೇಕಿದೆ. ಇಲ್ಲದಿದ್ದರೆ, ಮುಂದಾಗುವ ಅನಾಹುತಗಳಿಗೆ ಆಡಳಿತ ವ್ಯವಸ್ಥೆಯೇ ನೇರ ಹೊಣೆಯಾಗಲಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಡಿ.6ರಂದು ದಲಿತ–ಶೋಷಿತರ ಜನಜಾಗೃತಿ ಬೃಹತ್ ಬಹಿರಂಗ ಸಭೆ : ಉಮೇಶಕುಮಾರ ಸ್ವಾರಳ್ಳಿಕರ್

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್...

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ! ದೆಹಲಿಯ ಬೀದಿಯಲ್ಲಿ ಕಂಡ ಯುವಶಕ್ತಿ

ಮೋದಿ ಸರ್ಕಾರ ಬ್ರಿಟಿಷರಂತೆ ಪೊಲೀಸ್‌ ಮತ್ತು ಪೊಲೀಸ್‌ ವೇಷದ ಆರ್‌ ಎಸ್‌...

ಕೋಲ್ಕತ್ತಾ: SFI ಪುಸ್ತಕ ಮಳಿಗೆ ಮೇಲೆ ದಾಳಿ; ABVP ಸಿಟ್ಟಿಗೆ ಕಾರಣವಾದ ಆ ಪುಸ್ತಕ ಯಾವುದು ಗೊತ್ತೇ?

ಬ್ರಿಟಿಷ್ ಆಡಳಿತದ ಪರವಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ನಿಲುವುಗಳು, ಸಂಘಪರಿವಾರದ...

ತಿರುಪತಿ ಕೇಶಮುಂಡನ : ಭಕ್ತರ ನಂಬಿಕೆಯೂ, ಕೋಟ್ಯಂತರ ರೂಪಾಯಿ ವ್ಯವಹಾರವೂ…

ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ...