ಬೀದರ್‌ | ಮೇ 23, 24ರಂದು ಬಸವಗಿರಿಯಲ್ಲಿ ʼಬಸವೋತ್ಸವʼ : ಪ್ರಭುದೇವ ಸ್ವಾಮೀಜಿ

Date:

ಅಕ್ಕ ಅನ್ನಪೂರ್ಣ ತಾಯಿಯವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾಮಠದ ವತಿಯಿಂದ ಬೀದರ್‌ ಹೊರವಲಯದ ಬಸವಗಿರಿಯಲ್ಲಿ ಮೇ 23 ಮತ್ತು 24 ರಂದು ‘ಬಸವೋತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

- Advertisement -

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಬಸವಣ್ಣನವರಿಗೆ ಜಂಗಮ ಪ್ರಾಣವಾಗಿದ್ದರೆ, ಅಕ್ಕ ಅನ್ನಪೂರ್ಣತಾಯಿ ಅವರಿಗೆ ಬಸವಣ್ಣನವರೇ ಪ್ರಾಣವಾಗಿದ್ದರು. ಹೀಗಾಗಿ ಅವರು ಬಸವಣ್ಣನವರ ತತ್ವ ಹಾಗೂ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ತಮ್ಮ ಬದುಕು ಸಮರ್ಪಿಸಿಕೊಂಡಿದ್ದರು. ಅದಕ್ಕಾಗಿ ಅಕ್ಕನವರ ಸ್ಮರಣೋತ್ಸವವನ್ನು ಬಸವೋತ್ಸವ ಆಗಿ ಆಚರಿಸಲಾಗುತ್ತಿದೆʼ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ʼಬಸವೋತ್ಸವ ಅಂಗವಾಗಿ ಮೂರು ತಿಂಗಳಲ್ಲಿ ಜಿಲ್ಲೆಯ ನೂರು ಗ್ರಾಮಗಳಲ್ಲಿ ಬಸವತತ್ವ ಪ್ರಚಾರ ಕೈಗೊಳ್ಳಲಾಗಿದೆ. ಈ ಸಮಾರಂಭದಲ್ಲಿ ಬೀದರ್ ಸೇರಿದಂತೆ ನೆರೆಯ ಜಿಲ್ಲೆ, ರಾಜ್ಯಗಳ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಗೌರವ ಸಮರ್ಪಿಸಲಿದ್ದಾರೆʼ ಎಂದು ತಿಳಿಸಿದರು.

ಮೇ 23ರಂದು ಬೆಳಿಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅವರು ಬಸವೋತ್ಸವವನ್ನು ಉದ್ಘಾಟಿಸಲಿದ್ದಾರೆ. ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ, ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಕಲಬುರಗಿಯ ಅಕ್ಕ ಮಹಾದೇವಿ ಆಶ್ರಮದ ಮಾತೆ ಪ್ರಭುಶ್ರೀ ನೇತೃತ್ವ ಹಾಗೂ ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಜಾಗೃತ ಕರ್ನಾಟಕದ ಡಾ.ವಾಸು ಎಚ್.ವಿ. ಮುಖ್ಯ ಅನುಭಾವ ಮಂಡಿಸಲಿದ್ದಾರೆ, ವಿವಿಧ ಗಣ್ಯರು ಉಪಸ್ಥಿತರಿರುವರು.

ಇದಕ್ಕೂ ಮುನ್ನ ಬೆಳಿಗ್ಗೆ 7:30ಕ್ಕೆ ಸಾಮೂಹಿಕ ವಚನ ಪಾರಾಯಣ ಜರುಗಲಿದೆ. ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ, ಬಸವಕಲ್ಯಾಣದ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ, ಕಲಖೋರಾದ ಅನಿಲ್ ಮಹಾರಾಜ, ಬಸವಕಲ್ಯಾಣದ ಬಸವ ದೇವರು, ಸಿದ್ರಾಮಪ್ಪ ಕಪಲಾಪುರ ದಿವ್ಯ ಸಾನಿಧ್ಯ, ಲಿಂಗಾಯತ ಮಹಾ ಮಠದ ಪರುಷಕಟ್ಟೆ ಚನ್ನಬಸವಣ್ಣ ನೇತೃತ್ವ, ನೀಲಮ್ಮ ಬಳಗದ ಶಾಮಲಾ ಎಲಿ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ವೀರಭದ್ರಪ್ಪ ನಂದ್ಯಾಳ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಗೋರ್ಟಾ(ಬಿ)ದ ಗೋದಾವರಿ ತಾಯಿ, ಸಂಗೀತಾ ಚ. ಗಣಾಚಾರಿ, ಜಗದೇವಿ, ಚಿಮಕೋಡೆ, ಸಂಗೀತಾ ಕಾಡಾದಿ, ನಮ್ರತಾ ಪಾಟೀಲ, ಸುಪ್ರಿಯಾ ಭೂರೆ ಗೌರವ ಉಪಸ್ಥಿತಿ ವಹಿಸುವರು ಎಂದು ತಿಳಿಸಿದರು.

ಅಂದು ಸಂಜೆ 5ಕ್ಕೆ ಅಕ್ಕ ಅನ್ನಪೂರ್ಣನವರ ಸ್ಮರಣೋತ್ಸವ ನಡೆಯಲಿದೆ. ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನೇತೃತ್ವ, ಕೌಠಾ(ಬಿ) ಬಸವ ಯೋಗಾಶ್ರಮದ ಡಾ.ಸಿದ್ಧರಾಮೇಶ್ವರ ಶರಣರು ಬೆಲ್ದಾಳ, ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ಧರಾಮ ಸ್ವಾಮೀಜಿ, ಕೊಪ್ಪಳದ ಯಳವಂತ ಶರಣರು ದಿವ್ಯ ಸಾನಿಧ್ಯ ವಹಿಸುವರು, ವಿವಿಧ ಗಣ್ಯರು ಭಾಗವಹಿಸುತ್ತಾರೆ ಎಂದು ಹೇಳಿದರು.

ಮೇ 24 ರಂದು ಬೆಳಿಗ್ಗೆ 8:30ಕ್ಕೆ ಶಿವನಗರ ಉತ್ತರದ ಬಸವ ಉದ್ಯಾನ ಶಿವ ಮಂದಿರದಿಂದ ಬಸವಗಿರಿವರೆಗೆ ವಚನ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ವಿಶೇಷ ಅಲಂಕೃತ ವಾಹನದಲ್ಲಿ ಬಸವಣ್ಣನವರು, ಅಕ್ಕ ಅನ್ನಪೂರ್ಣತಾಯಿ ಅವರ ಭಾವಚಿತ್ರ ಹಾಗೂ ಲಿಂಗಾಯತ ಧರ್ಮಗ್ರಂಥ ಗುರು ವಚನ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ. ಸಹಸ್ರಾರು ಶರಣ-ಶರಣೆಯರು ವಚನ ಸಾಹಿತ್ಯ ತಲೆ ಮೇಲೆ ಇಟ್ಟುಕೊಂಡು ಭಕ್ತಿ ಭಾವದಿಂದ ಹೆಜ್ಜೆ ಹಾಕಲಿದ್ದಾರೆ. ಷಟಸ್ಥಲ ಧ್ವಜಗಳು, ಛತ್ರಿ- ಚಾಮರಗಳು ರಾರಾಜಿಸಲಿವೆ. ಬೆಳಿಗ್ಗೆ 11ಕ್ಕೆ ಬಸವೋತ್ಸವ, ಸಮವಸ್ತ್ರಧಾರಿ 770 ಶರಣ ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಜರುಗಲಿದೆ ಎಂದು ಹೇಳಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಕಾಳಗಿಯ ಗುರುನಂಜೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ, ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನೇತೃತ್ವ ವಹಿಸುವರು. ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ಉದ್ಘಾಟಿಸುವರು, ಧಾರವಾಡದ ಖ್ಯಾತ ಚಿಂತಕ ಡಾ.ಸಿದ್ಧನಗೌಡ ಪಾಟೀಲ ಮುಖ್ಯ ಅನುಭಾವ ಮಂಡಿಸುವರು. ಹಾರೂರಗೇರಿಯ ಆರ್.ಆರ್. ಮಠಪತಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಅಂದು ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಆಳಂದದ ಕೋರಣೇಶ್ವರ ಸ್ವಾಮೀಜಿ, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ, ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಕಲಬುರಗಿಯ ಡಾ.ಕಿರಣ ಗಾಜನೂರು ಮುಖ್ಯ ಅನುಭಾವ ಮಂಡಿಸುವರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ಹೈದರಾಬಾದ್‌ನ ನಾಗರಾಜ ಸೋರಳ್ಳಿ, ಜಹೀರಾಬಾದ್‌ನ ಡಾ. ಬಸವರಾಜ ಮಠಪತಿ, ಡಾ.ದೇವಕಿ ನಾಗೂರೆ, ಜಗನ್ನಾಥ ಇದಲಾಯಿ, ಜಗನ್ನಾಥ ಶೇರಿಕಾರ್, ಮಲ್ಲಿಕಾರ್ಜುನ ಸಂಗಮಕರ್, ಎಸ್.ಎಸ್.ಪಾರಾ, ಹಲಸಿಯ ಸಂತೋಷ್ ಪಾಟೀಲ, ಮಲ್ಲಮ್ಮ ಹೆಬ್ಬಾಳೆ, ಅನಿತಾ ಆರ್. ಪಾಟೀಲ, ವಿಜಯಲಕ್ಷ್ಮಿ ರಾಜೋಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೀರೇಶ್ವರ ಸೌಹಾರ್ದ ಸಹಕಾರಿಯ ಸಲಹಾ ಸಮಿತಿ ಸದಸ್ಯೆ ಜಗದೇವಿ ಪನಸಾಲೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.‌

ಇದನ್ನೂ ಓದಿ : ಬೀದರ್‌ | ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸಂಸದ ಸಾಗರ್‌ ಖಂಡ್ರೆ

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ ಮಠಪತಿ, ಮಾಣಿಕಪ್ಪ ಗೋರನಾಳೆ, ಚಂದ್ರಶೇಖರ ಹೆಬ್ಬಾಳೆ, ಅಶೋಕ ಎಲಿ, ರಾಜಕುಮಾರ ಪಾಟೀಲ, ವಿ.ಎಸ್ ಬಿರಾದಾರ, ಆರ್.ಕೆ. ಪಾಟೀಲ, ಶಿವಕುಮಾರ ಪಾಖಾಲ್, ಪ್ರಕಾಶ ಮಠಪತಿ, ಚನ್ನಬಸಪ್ಪ ಹಂಗರಗಿ, ಸಿ.ಎಸ್.ಗಣಾಚಾರಿ, ಅಣುವೀರ ಕೊಡಂಬಲ್, ಅಭಿಷೇಕ ಮಠಪತಿ ಮತ್ತಿತರರಿದ್ದರು.

ಬಸವ ತತ್ವ ಬೆಳೆಸಿದ್ದ ಅಕ್ಕ

ಅಕ್ಕ ಅನ್ನಪೂರ್ಣತಾಯಿ ಅವರು ನಾಡಿನಲ್ಲಿ ಬಸವ ತತ್ವವನ್ನು ಬೆಳೆಸಿದ್ದರು. ಅಪೂರ್ವ ಪ್ರವಚನಕಾರರಾಗಿದ್ದರು. ಬಸವ ತತ್ವ ಜನಮನದಲ್ಲಿ ನೆಲೆಗೊಳಿಸಲು ವಾರದ ಅನುಭವ ಮಂಟಪ, ಮಾಸಿಕ ಬಸವ ಜ್ಯೋತಿ, ಶರಣ ಸಂಗಮ, ವಚನ ವಿಜಯೋತ್ಸವ, ಸಾಮೂಹಿಕ ವಚನ ಪಾರಾಯಣ ಪರಂಪರೆ ಹುಟ್ಟು ಹಾಕಿದರು ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.

‘ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯಲು ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾ ಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾ ದಳ ಸಂಸ್ಥೆಗಳನ್ನು ಕಟ್ಟಿದರು. ಬಸವಗಿರಿಯಲ್ಲಿ ಗುರುವಚನ ಪರುಷ ಕಟ್ಟೆ ಸ್ಥಾಪಿಸಿದರು. ನಾಲ್ಕು ದಶಕಗಳ ವರೆಗೆ ಬಸವತತ್ವ ಪ್ರಸಾರಕ್ಕೆ ಬಿಡುವಿಲ್ಲದೆ ಪರಿಶ್ರಮಿಸಿದ್ದರು. 21ನೇ ಶತಮಾನದ ಆಧ್ಯಾತ್ಮ ಲೋಕದ ಮರೆಯಲಾಗದ ಮಾಣಿಕ್ಯವಾಗಿದ್ದರು. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕಾಗಿದೆʼ ಎಂದರು.

ಹಸಿದವರಿಗೆ ಅನ್ನ – ವರ್ಷದ ಸಂಭ್ರಮ

ಬೀದರನ ಲಿಂಗಾಯತ ಮಹಾ ಮಠದಿಂದ ಅಕ್ಕ ಅನ್ನಪೂರ್ಣತಾಯಿಯವರ ಸ್ಮರಣಾರ್ಥವಾಗಿ ‘ಹಸಿದವರಿಗೆ ಅನ್ನ-ಅನ್ನಪೂರ್ಣ ಯೋಜನೆ’ 2025ರ ಮೇ 24ರಂದು ಆರಂಭಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚೂರಿ ಸಂಸ್ಥೆಯವರು ಶರಣ ಶಿವಕುಮಾರ ಪಾಖಾಲ ಅವರ ಅಧ್ಯಕ್ಷತೆಯಲ್ಲಿ ವಿದ್ಯುತ್ ಚಾಲಿತ ವಾಹನ ನೀಡುವ ಮೂಲಕ ಕೈಜೋಡಿಸಿದ್ದು ಸ್ಮರಣಾರ್ಹ ಎಂದು ರಮೇಶ ಮಠಪತಿ ಹೇಳಿದರು.

ಸರ್ಕಾರಿ ಆಸ್ಪತ್ರೆ ಮತ್ತು ಆಹಾರ ಅಗತ್ಯವಿರುವ ಅನೇಕ ಕಡೆಗಳಲ್ಲಿ ನಿರಂತರ ಪ್ರಸಾದ ದಾಸೋಹಗೈದ ಸಾರ್ಥಕತೆ ಶ್ರೀಮಠ ಹಾಗೂ ರೋಟರಿ ಸಂಸ್ಥೆಯದು. ದಿನಾಲು ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ‘ಅನ್ನದೇವರ ಮುಂದೆ ಇನ್ನು ದೇವರಿಲ್ಲ’. ರೈತರ ಬೆವರಿನ ಫಲವಾದ ಆಹಾರ ವ್ಯರ್ಥವಾಗದೆ ಹಸಿದವರಿಗೆ ವಿತರಿಸಬೇಕೆಂಬುದು ಈ ಯೋಜನೆಯ ಇನ್ನೊಂದು ಉದ್ದೇಶವಾಗಿದೆ ಎಂದರು.

ಮದುವೆ, ಗೃಹ ಪ್ರವೇಶ, ತೊಟ್ಟಿಲು ಮುಂತಾದ ಸಮಾರಂಭಗಳಲ್ಲಿ ಹೆಚ್ಚಾದ ಆಹಾರವನ್ನು ಸಂಗ್ರಹಿಸಿ, ಹಸಿದವರಿಗೆ ಉಣಬಡಿಸಲಾಗುತ್ತಿದೆ. ಅನೇಕ ಸಲ ಸಾವಿರಾರು ಹಸಿದ ಹೊಟ್ಟೆಗಳಿಗೆ ಅನ್ನ ಉಣಿಸಿದ ದಾಖಲೆಗಳೂ ಇವೆ. ಇಂತಹ ಮಾನವೀಯ ಕಾರ್ಯಗೈಯ್ಯುತ್ತಿರುವ ‘ಅನ್ನಪೂರ್ಣ’ ಯೋಜನೆಗೆ ಇದೀಗ ವಾರ್ಷಿಕೋತ್ಸವದ ಸಂಭ್ರಮ. ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಿದ ಎಲ್ಲ ದಾಸೋಹಿಗಳಿಗೆ ಮತ್ತು ಪರಿಶ್ರಮಿಸಿದವರಿಗೆಲ್ಲ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಈ ಅನ್ನ ದಾಸೋಹ ನಿರಂತರವಾಗಿ ಮುಂದುವರೆಸಲು ತಮ್ಮೆಲ್ಲರ ಸಹಕಾರ ಮತ್ತು ದೇಣಿಗೆ ಅವಶ್ಯವಾಗಿದೆ. ಹುಟ್ಟುಹಬ್ಬ, ಮದುವೆ ವಾಷಿಕೋತ್ಸವ, ಹಿರಿಯರ ಸ್ಮರಣೋತ್ಸವ ಮುಂತಾದ ಸಂದರ್ಭಗಳಲ್ಲಿ ಪ್ರಸ್ತುತ ‘ರೋಟರಿ ಫುಡ್ ಆನ್ ವೀಲ್ಸ್ – ಅನ್ನಪೂರ್ಣ’ ಯೋಜನೆಗೆ ದಾಸೋಹಗೈದು ಆಚರಣೆಗಳನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು.

ಇದನ್ನೂ ಓದಿ : ಬೀದರ್‌ | KKRTC ಬಸ್‌ಗಳಲ್ಲಿ UPI ಕ್ರಾಂತಿ: ಚಿಲ್ಲರೆ ಸಮಸ್ಯೆಗೆ ಸಿಕ್ತು ಮುಕ್ತಿ!

ಇಚ್ಛೆಯುಳ್ಳವರು ಧನ-ಧಾನ್ಯ ಯಾವುದೇ ರೂಪದಲ್ಲಿ ದಾಸೋಹಗೈದು ಮಾನವೀಯ ಸೇವೆಗೆ ಕೈ ಜೋಡಿಸಲು ಮಠಪತಿ ಕರೆ ನೀಡಿದರು. ಹಸಿದ ಹೊಟ್ಟೆಗಳಿಗೆ ಉಣಿಸಲು ತಮ್ಮ ದಾಸೋಹದ ಸೇವೆಗಾಗಿ 9449139001, 9449647281, 7795309521, 9741996038, 9482123282, 8197494560 ಈ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...