ಬೀದರ್ | ಸಾಹಿತ್ಯದಿಂದ ವೈಚಾರಿಕತೆ ಬೋಧಿಸಿದ ದಾಸರು

Date:

ದಾಸರು ಅಜ್ಞಾನ ಮತ್ತು ಅಂಧಕಾರದಿಂದ ಬಳಲುತ್ತಿದ್ದ ಜನಸಾಮಾನ್ಯರನ್ನು ಅವರ ಆಡುಭಾಷೆಯಲ್ಲೇ ಭಕ್ತಿ ಮಾರ್ಗದ ಮೂಲಕ ಜಾಗೃತಿಗೊಳಿಸಿದರು ಎಂದು ಅಹಿಲ್ಯಾಬಾಯಿ ಹೊಳ್ಕರ ಪ್ರೌಢ ಶಾಲೆಯ ಮುಖ್ಯಗುರು
ಸೈಯದ್ ಸಲಾವೋದ್ದೀನ್ ಹೇಳಿದರು.

- Advertisement -

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ, ವತಿಯಿಂದ ಶಿವರಾತ್ರಿ ಪ್ರಯುಕ್ತ ಬೀದರ್ ನಗರದ ಅಹಿಲ್ಯಾಬಾಯಿ ಹೊಳ್ಕರ ಪ್ರೌಢ ಶಾಲೆಯ ಆವರಣದಲ್ಲಿ “ಹರಿದಾಸರ ಶಿವಸ್ತುತಿ” ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

‘ದಾಸರು ಸಾತ್ವಿಕ ವಿಚಾರಗಳ ಮೂಲಕ ಸಮಾಜದ ಡೊಂಕನ್ನು ತಿದ್ದಿ, ವೈಚಾರಿಕತೆಯನ್ನು ಬೋಧಿಸಿದ ಮಹಾನ್ ಸಂತರು’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಡಾ.ಸುನೀತಾ ಕುಡ್ಲಿಕರ್ ಅವರು ಹರಿದಾಸರ ಶಿವಸ್ತುತಿ ಕುರಿತು ಉಪನ್ಯಾಸ ನೀಡಿ, ‘ವಿಷ್ಣುಭಕ್ತರಾಗಿದ್ದ ಹರಿದಾಸರು ಶಿವಭಕ್ತಿಯ ಪಾರಮ್ಯ ಮೆರೆದಿರುವುದು ವಿಶಿಷ್ಟ. ಹರಿದಾಸರ ಸಂದೇಶದಂತೆ ಶಿವಧ್ಯಾನದಿಂದ ಮನದಲ್ಲಿನ ಅಜ್ಞಾನವನ್ನು ದೂರ ಮಾಡಿ ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು’ ಎಂದರು.

‘ಹರಿದಾಸರು ಶಿವ, ಮಹಾದೇವ, ಮಹಾರುದ್ರರನ್ನು ಆಪ್ತ ದೇವರಾಗಿ ಸ್ತುತಿಸಿದ್ದಾರೆ. “ಚಂದ್ರಚೂಡ ಶಿವಶಂಕರ ಪಾರ್ವತಿರಮಣ ನಿನಗೆ ನಮೋ ನಮೋ”, “ಶಿವ ಶಿವ ಶಿವ ಎನ್ನಿರೊ-ಮೂಜಗದವರೆಲ್ಲ”, “ಕೈಲಾಸವಾಸ ಗೌರೀಶ ಈಶ” ಮೊದಲಾದ ಕೀರ್ತನೆಗಳ ಮೂಲಕ ಶಿವಧ್ಯಾನ ಮಾಡಿ ಮನಸ್ಸಿನ ಶಾಂತಿ, ಏಕಾಗ್ರತೆ ಮತ್ತು ಆಂತರಿಕ ಅರಿವು ವೃದ್ಧಿಸಿಕೊಳ್ಳಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ರವೀಂದ್ರ ಲಂಜವಾಡಕರ ಮಾತನಾಡಿ, ‘ಹರಿದಾಸರು ಕನ್ನಡ ಸಾಹಿತ್ಯ ಭಂಡಾರಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಅವರ ಸಂದೇಶಗಳು ಸಮಾಜದಲ್ಲಿ ಸದಾ ಪ್ರಚಾರವಾಗಬೇಕು’ ಎಂದು ಹೇಳಿದರು.

ಇದನ್ನೂ ಓದಿ : ಬೀದರ್ | ಡೆತ್ ನೋಟ್ ಬರೆದಿಟ್ಟು 10ನೇ ವಿದ್ಯಾರ್ಥಿ ನೇಣಿಗೆ ಶರಣು

ಕಾರ್ಯಕ್ರಮದಲ್ಲಿ ವೈಜಿನಾಥ ಬಿರಾದಾರ, ಬಾಲಮ್ಮಾ, ರೋಹಿಣಿ, ಪಲ್ಲವಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಮನಾಬಾದ್‌ | ಒಗ್ಗಟ್ಟಿನಿಂದ ಹೂಗಾರ ಸಮಾಜದ ಸರ್ವಾಂಗೀಣ ಅಭಿವೃದ್ಧಿ: ಶಾಸಕ ಸಿದ್ದಲಿಂಗಪ್ಪ ಪಾಟೀಲ

ಹೂಗಾರ ಸಮಾಜವು ಸಂಘಟನೆ, ಪ್ರೀತಿ ಮತ್ತು ಸೌಹಾರ್ದತೆಯ ಮೂಲಕ ಶೈಕ್ಷಣಿಕ, ಸಾಮಾಜಿಕ...

ಬೀದರ್‌ | ರೈತರ ಸಾಲಮನ್ನಾ, ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಕಿಸಾನ್ ಸಭಾ ಒತ್ತಾಯ

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಲ್ಪಿಸಬೇಕು. ರೈತರ...

ಬೀದರ್‌ | ʼಕರೇಜ್‌ʼ ದೇಶದ ಜಲಸಂರಕ್ಷಣೆಗೆ ಮಾದರಿ : ಕೇಂದ್ರದ ಅಧಿಕಾರಿಗಳ ಮೆಚ್ಚುಗೆ

ಬೀದರ್‌ನ ಐತಿಹಾಸಿಕ ʼಕರೇಜ್‌ʼ ಜಲವ್ಯವಸ್ಥೆ ದೇಶದ ಜಲಸಂರಕ್ಷಣೆಗೆ ಮಾದರಿಯಾಗಬಲ್ಲದು ಎಂದು ಕೇಂದ್ರ...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...