ಬೀದರ್‌ | ಡಾ.ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತರಲ್ಲ‌, ಅವರು ದೇಶದ ಆಸ್ತಿ : ಸಚಿವ ಸಂತೋಷ ಲಾಡ್

Date:

ಡಾ.ಬಿ.ಆರ್.‌ಅಂಬೇಡ್ಕರ್ ಅವರು ಸಂವಿಧಾನದ ಮುಖಾಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮಾತ್ರ ಅಲ್ಲ. ಇಡೀ ಹಿಂದೂ ಸಮಾಜಕ್ಕೆ ಹಕ್ಕುಗಳನ್ನು ನೀಡಿದ್ದಾರೆ. ಆದರೆ, ನಾವು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

- Advertisement -

ಬೀದರ್ ನಗರದ‌ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ ಬೀದರ ಜಿಲ್ಲಾ ಸಕಲ ಮರಾಠಾ ಸಮಾಜದ ವತಿಯಿಂದ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಬಾಲ್ಯದಿಂದಲೇ ಅನೇಕ ನೋವು, ಅಪಮಾನಗಳನ್ನು ಎದುರಿಸಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ವಿದೇಶಗಳಿಗೆ ತೆರಳಿ ಉನ್ನತ ವ್ಯಾಸಂಗ ಮಾಡಿದರು. ಆದರೂ ಅವರನ್ನು ಈ ಸಮಾಜ ಅಸ್ಪ್ರಶ್ಯತೆ ಬಿಡಲಿಲ್ಲ. ಶಿಕ್ಷಣ ಎಂಬ ಅಸ್ತ್ರದಿಂದಲೇ ಭಾರತದ ಕಾನೂನು ಸುವ್ಯವಸ್ಥೆಯನ್ನು ಸಂವಿಧಾನದ ಚೌಕಟ್ಟನ್ನು ಹಾಕಿಕೊಟ್ಟ ಅಖಂಡ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಅಂಬೇಡ್ಕರ್ ಅವರು ಬುನಾದಿ ಹಾಕಿದರು. ಪರಿಶಿಷ್ಟರಿಗೆ ಮಾತ್ರ ಅಲ್ಲದೆ ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡಿದ್ದು ಅಂಬೇಡ್ಕರ್‌ ಎಂಬುದು ಮರೆಯಬಾರದು. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ದೇಶದಲ್ಲಿ ಉಚಿತ ಶಿಕ್ಷಣದ ಕಾಯ್ದೆಯನ್ನು ಜಾರಿಗೊಳಿಸಿದರುʼ ಎಂದರು.

ʼಗೌತಮ್ ಬುದ್ಧರು ಜಗತ್ತಿಗೆ ವೈಚಾರಿಕ ಸಂದೇಶ ನೀಡಿದ್ದಾರೆ. ಶಾಂತಿ, ಸಮಾನತೆ, ಮಾನವೀಯತೆ ಹೊಸ ಮಾರ್ಗ ತೋರಿದರು. ಬಸವಣ್ಣನವರು ಸಮಾನತೆ, ಸ್ತ್ರೀ ಸಮಾನತೆ ಕಲ್ಪಿಸಿ ʼಕಲ್ಲುದೇವರು ದೇವರಲ್ಲ, ತನ್ನ ತಾ ಅರಿದಡೆ ತಾನೇ ದೇವರುʼ ಎಂದು ಅರಿವು ಮೂಡಿದರು. ಎಷ್ಟೇ ಹಣವಿದ್ದರೂ ದೇಶದಲ್ಲಿ ಸಮಾನತೆ, ವೈಚಾರಿಕೆ ತತ್ವದಿಂದಲೇ ದೇಶ ಕಟ್ಟಬಹುದು, ಉತ್ತಮ ಮಾರ್ಗದಿಂದಲೇ ಮಾತ್ರ ಸಮಾಜ ಬದಲಾವಣೆ ಸಾಧ್ಯʼ ಎಂದು ತಿಳಿಸಿದರು.

ʼಬುದ್ಧ ಹಾಗೂ ಬಸವಣ್ಣನವರ ವಿಚಾರಧಾರೆಗಳನ್ನು ಕಾನೂನಾತ್ಮಕವಾಗಿ ಸಂವಿಧಾನ ಮುಖಾಂತರ ಜನರಿಗೆ ಹಕ್ಕು ಕೊಡುವುದರಲ್ಲಿ ಅಂಬೇಡ್ಕರ್‌ ಯಶಸ್ವಿಯಾಗಿದ್ದಾರೆ. ಆದರೂ ದೇಶದ ಜನ ಇಂದಿಗೂ ಜಾತಿ ವ್ಯವಸ್ಥೆಯಿಂದ ಹೊರಬರಲಿಲ್ಲ, ಅಂಬೇಡ್ಕರ್‌ ಅವರ ದಲಿತರ ಆಸ್ತಿಯಲ್ಲ. ಇಡೀ ದೇಶದ ಆಸ್ತಿಯಾಗಿದ್ದಾರೆ. ಜಗತ್ತಿನಲ್ಲಿ ಮಹಿಳೆಯರಿಗೆ ಅತೀ ಹೆಚ್ಚು ತೊಂದರೆ ಕೊಟ್ಟಿದ್ದ ದೇಶ ಭಾರತವಾಗಿತ್ತು. ಅಂತಹ ಅಮಾನವೀಯ ವ್ಯವಸ್ಥೆ ವಿರುದ್ಧ ಹಿಂದೂ ಕೋಡ್‌ ಬಿಲ್‌ ಜಾರಿಗಾಗಿ ಅಂಬೇಡ್ಕರ್‌ ಅವರು ಧ್ವನಿಯೆತ್ತಿದ್ದರು. ಸ್ತ್ರೀಯರ ಹಕ್ಕಿಗಾಗಿ ಅಂಬೇಡ್ಕರ್‌ ಅವರು ಹೋರಾಡಿದರುʼ ಎಂದರು.

92084

ʼಸಯ್ಯಾಜಿರಾವ ಗಾಯಕವಾಡ ಮತ್ತು ಶಾಹು ಮಹಾರಾಜ್ ಇವರಿಬ್ಬರು ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಲು ವಿದೇಶಕ್ಕೆ ಕಳುಹಿಸಿದ್ದರು. ಅಂಬೇಡ್ಕರ್‌ ಅವರು ಮೂಕನಾಯಕ ಪತ್ರಿಕೆಗೆ ಶಾಹು ಮಹಾರಾಜ್‌ ಅವರು ಸಹಕಾರ ನೀಡಿದ್ದರು. ಹೀಗಾಗಿ ಈ ಮೂವರ ಮಧ್ಯೆ ಅವಿನಾಭಾವ ಸಂಬಂಧವಿತ್ತುʼ ಎಂದರು.

ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ʼಡಾ.ಬಿ.ಆರ್.ಅಂಬೇಡ್ಕರ‌ ಅವರ ಜಯಂತಿಯನ್ನು ಸಕಲ ಮರಾಠಾ ಹಾಗೂ ದಲಿತ ಸಮುದಾಯದವರು ಒಗ್ಗೂಡಿ ಆಚರಿಸುತ್ತಿರುವುದು ಶ್ಲಾಘನೀಯ. ಎಲ್ಲಾ ಜಾತಿ, ಧರ್ಮದವರು ಒಗ್ಗೂಡಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆ ನೆಲೆಸುತ್ತದೆʼ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೂಜ್ಯ ದಾದಾ ಮಹಾರಾಜ್ ನಗರಕರ್ ಮಾತನಾಡಿ, ʼಮರಾಠಾ ಸಮಾಜ ಹಾಗೂ ದಲಿತ ಸಮುದಾಯ ನಡುವೆ ಯಾವುದೇ ಭಿನ್ನತೆ ಇರಲಾರದೆ ಒಗ್ಗೂಡಿ ಇರಬೇಕು. ಐಕ್ಯತೆಯಿಂದ ಸಾಗಿದರೆ ಸಹೋದರತ್ವ ಮೂಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದಂತೆ ಎಲ್ಲಾ ಸಮಾಜದ ಮಹಾತ್ಮರ ಜಯಂತಿ ಮುಂದಿನ ದಿನಗಳಲ್ಲಿ ಆಚರಣೆ ಮಾಡಲಾಗುವುದು‌ʼ ಎಂದರು.

ಸಮಾರಂಭದಲ್ಲಿ ರಾಜಶೇಖರ ಶಿವಾಚಾರ್ಯ ಮೆಹಕರ್‌, ಪೂಜ್ಯ ಭಂತೆ ವರಜ್ಯೋತಿ, ಬೆಲ್ದಾಳ ಸಿದ್ಧರಾಮ ಶರಣರು, ಫಾದರ್ ಕ್ಲೇರಿ ಡಿಸೋಜಾ, ರಾಜಗುರು ಮಹಾರಾಜ್ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ : ಬೀದರ್‌ | ಮೈಸುಡುವ ಕೆಂಡದಂತಹ ಬಿಸಿಲಿಗೆ ತತ್ತರಿಸಿದ ಜನ : ಪಾರಾಗುವುದು ಹೇಗೆ?

ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಕರ್ನಾಟಕ ಲಿಡ್ಕರ್ ಅಧ್ಯಕ್ಷ ನಾಗರಾಜ್ ಮುಂಡರಗಿ, ಸಕಲ ಮರಾಠಾ ಸಮಾಜ ಸಂಯೋಜಕ ಪ್ರದೀಪ ಬಿರಾದಾರ, ಡಾ.ಭೀಮಸೇನರಾವ ಶಿಂಧೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಠಲದಾಸ ಪ್ಯಾಗೆ, ಮಾರುತಿ ಬೌದ್ಧೆ, ತರುಣ ನಾಗಮಾರಪಳ್ಳಿ ದಿಗಂಬರರಾವ ಮಾನಕಾರಿ, ಜನಾರ್ಧನ ಬಿರಾದಾರ, ವೆಂಕಟರಾವ ಮೆಂದೆ, ಅನೀಲ ಕಾಳೆ, ನಾರಾಯಣ ಗಣೇಶ, ಕೊಂಡಿಬಾ ಸಾಹುಕಾರ್, ಶಿವಾಜಿ ಕಾಳೆ, ಸತೀಶ ಮೂಳೆ, ತಾತ್ಯಾರಾವ ಪಾಟೀಲ, ರಘುನಾಥರಾವ ಜಾಧವ, ಶಿವಕುಮಾರ ನೀಲಿಕಟ್ಟಿ, ಅರುಣ ಪಟೇಲ್, ರಾಜಶೇಖರ ಸೇಡಂಕರ್, ಯಶಪಾಲ್ ಬೋರೆ, ವಿಜಯಕುಮಾರ ಸೋನಾರೆ, ಲುಂಬಿಣಿ ಗೌತಮ್, ಮೀನಾಕ್ಷಿ ಕಾಳೆ, ಅನೀತಾ ಭೋಸ್ಲೆ, ಕವಿತಾರೆಡ್ಡಿ, ಬಾಬು ಪಾಸ್ವಾನ್, ಮಹೇಶ ಗೋರನಾಳಕರ್, ರಮೇಶ ಡಾಕುಳಗಿ, ವಿಜಯಕುಮಾರ ಫರ್ನಾಂಡಿಸ್ ಹಿಪ್ಪಳಗಾಂವ, ಚಂದ್ರಕಾಂತ ಹಿಪ್ಪಳಗಾಂವ, ಕಾಶಿನಾಥ ಚಲವಾ, ಅರುಣ ಪಟೇಲ್, ಕಲ್ಯಾಣರಾವ ಭೋಸ್ಲೆ, ಅಂಬರೀಶ ಕುದರೆ ಸೇರಿದಂತೆ ಹಲವರಿದ್ದರು. ಶಿವಾಜಿರಾವ ಪಾಟೀಲ ಮುಂಗನಾಳ ಸ್ವಾಗತಿಸಿದರು. ವಿನೋದ ನಿರೂಪಿಸಿದರು. ವಿದ್ಯಾಸಾಗರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...