ಬೀದರ್‌ | ಬಿರುಗಾಳಿ ಸಹಿತ ಮಳೆ : ಮನೆಗೋಡೆ ಕುಸಿದು ಅಲೆಮಾರಿ ಮಕ್ಕಳಿಗೆ ಗಾಯ; ಎತ್ತು ಸಾವು

Date:

ಬೀದರ್‌ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾದ ಪರಿಣಾಮ ನಾನಾ ಅವಾಂತರಗಳು ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

- Advertisement -

ಬೀದರ್‌, ಔರಾದ್‌, ಭಾಲ್ಕಿ, ಕಮಲನಗರ ಸೇರಿದಂತೆ ವಿವಿಧೆಡೆ ಮಂಗಳವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಿರುಗಾಳಿಗೆ ಮನೆಯ ಮೇಲಿನ ತಗಡಿನ ಶೀಟುಗಳು ಹಾರಿ ಹೋಗಿ ಗೋಡೆಗಳು ಜಖಂಗೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಔರಾದ್‌ ತಾಲೂಕಿನ ಗಡಿಕುಶನೂರ ಗ್ರಾಮದಲ್ಲಿ ಬಿರುಗಾಳಿಗೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ ಪರಿಣಾಮ ಹುಸೇನ್ ಸಾಬ್ ಚಾಂದಸಬ್ ಎಂಬುವವರಿಗೆ ಸೇರಿದ ಒಂದು ಎತ್ತು ಮೃತಪಟ್ಟಿದೆ. ಕೌಠಾ(ಬಿ), ಮರಖಲ್‌, ಭಾಲ್ಕಿಯಲ್ಲಿ ಮನೆಗಳ ಮೇಲಿನ ತಗಡಿನ ಶೀಟುಗಳು ಹಾರಿಹೋಗಿ ಮಳೆ ನೀರಿನಿಂದ ಮನೆಯಲ್ಲಿರುವ ದವಸ ಧಾನ್ಯ ಸೇರಿದಂತೆ ಮನೆಯಲ್ಲಿರುವ ವಸ್ತುಗಳು ಹಾನಿಯಾದವು.

WhatsApp Image 2026 05 19 at 9.09.41 PM
ಕೌಠಾ(ಬಿ) ಗ್ರಾಮದಲ್ಲಿ ಸರುಬಾಯಿ ಎಂಬುವವರ ಮನೆಯ ತಗಡಿನ ಶೀಟುಗಳು ಹಾರಿ ಹೋಗಿವೆ

ಬೇಸಿಗೆ ಬಿಸಿಲಿನ ಧಗೆಯಿಂದ ವಾಹನ ಸವಾರರಿಗೆ ರಕ್ಷಣೆಗಾಗಿ ಬೀದರ್‌ ನಗರದ ಅಂಬೇಡ್ಕರ್‌ ವೃತ್ತದ ಸಮೀಪದ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಈಚೆಗೆ ಅಳವಡಿಸಲಾದ ಹಸಿರು ನೆರಳಿನ ಪರದೆಯೊಂದು ಬಿರುಗಾಳಿಗೆ ಹಾರಿದ್ದು, ನೆಲದಲ್ಲಿ ಹೂಳಲಾದ ಕಬ್ಬಿಣದ ಪೈಪ್‌ಗಳು ಕಿತ್ತುಬಂದಿವೆ.

ಬೀದರ್-ಹುಮನಾಬಾದ್‌ ಹೆದ್ದಾರಿಯಲ್ಲಿ ಕೋಳಾರ ಸಮೀಪದಲ್ಲಿ ಅಳವಡಿಸಲಾದ ಸ್ವಾಗತ ಕಮಾನ್‌ ನೆಲಕ್ಕುರುಳಿದೆ. ಅಣದೂರ ರಸ್ತೆಯಲ್ಲಿ ವಿದ್ಯುತ್‌ ಟಿಸಿಯೊಂದಿಗೆ ಗಾಳಿಯ ರಭಸಕ್ಕೆ ನೆಲಕ್ಕುರುಳಿತು, ಬೃಹತ್‌ ಆಕಾರದ ಮರಗಳು ರಸ್ತೆ ಮೇಲೆ ಉರುಳಿದಕ್ಕೆ ಕೆಲವೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

WhatsApp Image 2026 05 19 at 7.55.59 PM
ನೆಲಕ್ಕುರುಳಿದ ನೆರಳಿನ ಪರದೆ

ಮನೆ ಗೋಡೆ ಕುಸಿತ : ಮಕ್ಕಳಿಗೆ ಗಂಭೀರ ಗಾಯ

ಬೀದರ್‌ ತಾಲೂಕಿನ ಕಮಠಣಾ ಗ್ರಾಮದ ಮಾಂಗ್‌ ಗಾರುಡಿ (ಅಲೆಮಾರಿ) ಸಮುದಾಯದ ಕಾಲೋನಿಯಲ್ಲಿ ಭಾರಿ ಮಳೆ, ಬಿರುಗಾಳಿಗೆ ಮನೆಯ ಗೋಡೆ ಕುಸಿದು ಮೂರು ಕುಟುಂಬಗಳ ನಾಲ್ಕೈದು ಪುಟ್ಟಮಕ್ಕಳಿಗೆ, ಪೋಷಕರಿಗೆ, ವೃದ್ಧರಿಗೆ ಗಾಯಗಳಾಗಿವೆ. ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮೀ ಬಾವಗೆ ಹಾಗೂ ಸ್ಥಳೀಯರು ಕೂಡಲೇ ಅಂಬುಲೆನ್ಸ್‌ ಮುಖಾಂತರ ಬೀದರ್ ಬ್ರಿಮ್ಸ್‌ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

WhatsApp Image 2026 05 19 at 9.05.33 PM
ಮಾಂಗ್‌ ಗಾರುಡಿ ಕುಟುಂಬದ ವ್ಯಕ್ತಿಯೊಬ್ಬರಿಗೆ ಗೋಡೆ ಕುಸಿತು ಗಾಯಗೊಂಡರು.

ಬೀದರ್ ತಹಸೀಲ್ದಾರ್‌ ರವೀಂದ್ರ ದಾಮಾ ಅವರು ಕಮಠಣಾದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಪುಟ್ಟ ಮಕ್ಕಳ ಹಾಗೂ ಅವರ ಪೋಷಕರ ತಲೆ, ಕೈಕಾಲಿಗೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಬೀದರ್‌ | ಬಿಸಿಲಿನ ಧಗೆಯ ನಡುವೆ ಮಳೆಯ ಸಿಂಚನ

ಕ್ರಿಕೆಟ್ ಆಡುವಾಗ ಬಿರುಗಾಳಿ, ಮಳೆ ಆರಂಭವಾದ ಹಿನ್ನೆಲೆ ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಸಿಡಿಲು ಅಪ್ಪಳಿಸಿದ ಪರಿಣಾಮ ದೂರದಲ್ಲಿದ್ದ ಯುವಕನೊಬ್ಬ ಹಾರಿ ಬಿದ್ದು, ಗಂಭೀರ ಗಾಯಗೊಂಡ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿರುವುದು ತಿಳಿದುಬಂದಿದೆ, ಸದ್ಯ ಬ್ರಿಮ್ಸ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

WhatsApp Image 2026 05 19 at 7.57.11 PM
ಹೆದ್ದಾರಿಯಲ್ಲಿ ಅಳವಡಿಸಲಾದ ಸ್ವಾಗತ ಕಮಾನ್ ಬಿರುಗಾಳಿಗೆ ನೆಲದ ಮೇಲೆ ಮಲಗಿತು.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...