ಬೀದರ್‌ | ಕಲಾಪ್ರತಿಭೋತ್ಸವ: ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

Date:

ಮಕ್ಕಳು ಹಾಗೂ ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ಕಲಾಪ್ರತಿಭೋತ್ಸವ’ ಆಯೋಜಿಸಲಾಗುತ್ತಿದ್ದು, ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ತಿಳಿಸಿದ್ದಾರೆ.

- Advertisement -

ಜಿಲ್ಲಾ ಮಟ್ಟದ ಬಾಲಪ್ರತಿಭೆ ಮತ್ತು ಕಿಶೋರ ಪ್ರತಿಭೆ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ಥಾನಿ/ಕರ್ನಾಟಕ ವಾದ್ಯ ಸಂಗೀತ ಹಾಗೂ ಹಿಂದೂಸ್ಥಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳು ನಡೆಯಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಯುವ ಪ್ರತಿಭೆ ವಿಭಾಗದಲ್ಲಿ ‘ನನ್ನ ಮೆಚ್ಚಿನ ಸಾಹಿತಿ’ ಆಶುಭಾಷಣ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಹಿಂದೂಸ್ಥಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿತ್ರಕಲೆ ಹಾಗೂ ವಾದ್ಯ ಸಂಗೀತ ಸ್ಪರ್ಧೆಗಳು ನಡೆಯಲಿವೆ. ಸಮೂಹ ವಿಭಾಗದಲ್ಲಿ ನಾಟಕ ಸ್ಪರ್ಧೆ ಇರಲಿದೆ.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ಕಲಬುರಗಿ ವಲಯ ಮಟ್ಟಕ್ಕೆ ಕಳುಹಿಸಲಾಗುತ್ತದೆ. ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹರಾಗುತ್ತಾರೆ.

ಬಾಲಪ್ರತಿಭೆ ವಿಭಾಗಕ್ಕೆ 8ರಿಂದ 14 ವರ್ಷ, ಕಿಶೋರ ಪ್ರತಿಭೆ ವಿಭಾಗಕ್ಕೆ 14ರಿಂದ 18 ವರ್ಷ ಹಾಗೂ ಯುವ ಪ್ರತಿಭೆ ವಿಭಾಗಕ್ಕೆ 18ರಿಂದ 30 ವರ್ಷದೊಳಗಿನವರು ಭಾಗವಹಿಸಬಹುದು.

ಏಕವ್ಯಕ್ತಿ ಸ್ಪರ್ಧೆಗಳಲ್ಲಿ ಶಾಸ್ತ್ರೀಯ ನೃತ್ಯಕ್ಕೆ 10 ನಿಮಿಷ, ಸುಗಮ ಸಂಗೀತ, ಜಾನಪದ ಗೀತೆ ಹಾಗೂ ಶಾಸ್ತ್ರೀಯ/ವಾದ್ಯ ಸಂಗೀತಕ್ಕೆ 7 ನಿಮಿಷ ಮತ್ತು ಚಿತ್ರಕಲೆಗೆ 120 ನಿಮಿಷ ಸಮಯ ನಿಗದಿಪಡಿಸಲಾಗಿದೆ. ಯುವ ಪ್ರತಿಭೆ ವಿಭಾಗದ ‘ನನ್ನ ಮೆಚ್ಚಿನ ಸಾಹಿತಿ’ ಆಶುಭಾಷಣಕ್ಕೆ 7 ನಿಮಿಷ ಹಾಗೂ ನಾಟಕಕ್ಕೆ 45 ನಿಮಿಷ ಸಮಯ ನಿಗದಿಯಾಗಿದೆ. ನಾಟಕ ಸ್ಪರ್ಧೆಯ ತಂಡದಲ್ಲಿ ಕನಿಷ್ಠ 10 ಹಾಗೂ ಗರಿಷ್ಠ 15 ಮಂದಿ ಸದಸ್ಯರು ಇರಬೇಕು. ಒಬ್ಬ ಸ್ಪರ್ಧಿ ಒಂದಕ್ಕಿಂತ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಸ್ಪರ್ಧೆಯ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

ಅಭ್ಯರ್ಥಿಗಳು ಬಯೋಡೇಟಾ, ವಯಸ್ಸಿನ ಪ್ರಮಾಣಪತ್ರ ಹಾಗೂ ಭಾಗವಹಿಸುವ ಕಲಾಪ್ರಕಾರದ ವಿವರವನ್ನು ನಮೂದಿಸಿ 2026ರ ಅಕ್ಟೋಬರ್ 30 ರಂದು ಸಂಜೆ 5 ಗಂಟೆಯೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ, ಬೀದರ್ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ : ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ

ಶಾಲೆಗೆ ಹೋಗದ ಅಭ್ಯರ್ಥಿಗಳು ಪಂಚಾಯಿತಿ, ನಗರಸಭೆ, ಪುರಸಭೆ ಅಥವಾ ಪಾಲಿಕೆ ಕಚೇರಿಯಿಂದ ವಯಸ್ಸಿನ ದೃಢೀಕರಣ ಪತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...

‘ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸಮಾಜಘಾತುಕರಲ್ಲ, ಅವರಿಗೆ ಹೋರಾಡುವ ಹಕ್ಕಿದೆ’: ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್‌ಸಿ) ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ...

ಗುಜರಾತ್ | ʼಶುದ್ಧೀಕರಣʼ ಹೆಸರಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅತ್ಯಾಚಾರ; 9 ಮಂದಿ ವಶಕ್ಕೆ

ಶುದ್ಧೀಕರಣ ವಿಧಿ (Purification Ritual) ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ, ಮನಬಂದಂತೆ...

ಪ್ರೀಮಿಯಂ ಲೇಖನ | ಉರ್ದು- ವಿಧಾನಸೌಧದ ಮೆಟ್ಟಿಲುಗಳ ವಿವಾದದಾಚೆ ಭಾರತದ ಭಾಷಾ–ಸಾಂಸ್ಕೃತಿಕ ಪರಂಪರೆಯ ಪ್ರಶ್ನೆ

ವಿಧಾನಸೌಧದ ಮೆಟ್ಟಿಲುಗಳು ಉರ್ದು ಹಬ್ಬಕ್ಕೆ ಸಿಗುತ್ತವೆಯೇ ಇಲ್ಲವೇ ಎಂಬುದು ಆಡಳಿತಾತ್ಮಕ ನಿರ್ಧಾರ....