ಬಸ್ಸಿನಲ್ಲಿನ ಪ್ರಯಾಣಿಕನೊಬ್ಬ ಕುಡಿದ ನಶೆಯಲ್ಲಿ ಡ್ರೈವರ್ ಬಳಿ ತೆರಳಿ ಬಸ್ಸಿನ ಸ್ಟೇರಿಂಗ್ ಜೋರಾಗಿ ಹಿಡಿದ ಪರಿಣಾಮ ಬಸ್ ಮರಕ್ಕೆ ಡಿಕ್ಕಿಯಾಗಿ 11 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬೀದರ್ ಹೊರವಲಯದ ಶಹಾಪೂರ ರೈಲ್ವೆ ಗೇಟ್ ಬಳಿ ಸೋಮವಾರ ಸಂಜೆ ಐದು ಗಂಟೆ ಸುಮಾರಿಗೆ ನಡೆದಿದೆ. ಮಹಾರಾಷ್ಟ್ರದ ಸಾರಿಗೆ ಇಲಾಖೆಗೆ ಸೇರಿದ ಕೆಂಪು ಬಸ್ ತೆಲಂಗಾಣದ ಹೈದರಾಬಾದ್‌ದಿಂದ ಉದಗೀರ ಕಡೆಗೆ ತೆರಳುತ್ತಿತ್ತು. ಬಸ್ ಶಹಾಪುರ ಗೇಟ್ ಬಳಿ ಬರುತ್ತಿದ್ದಂತೆ ಕಂಠ ಪೂರ್ತಿ ಕುಡಿದು ಬಂದಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ ಸ್ಟೇರಿಂಗ್‌ನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.

ಅಪಘಾತದಲ್ಲಿ ಬಸ್ ಚಾಲಕ ವಿಕಾಸ್, ಉದ್ಗೀರ್ ಮೂಲದ ಬಾಲಾಜಿ, ಪವನ್, ನೂರ್ ಅಹ್ಮದ್, ನರಸಿಂಗ್, ಪೂಜಾ, ಸುರೇಖಾ, ಸೃಷ್ಠಿ ಸೇರಿ 11 ಜನರಿಗೆ ಗಂಭೀರ ಗಾಯಗಳಾಗಿವೆ. ಕುಟುಂಬ ಸಮೇತ ತಿರುಪತಿಗೆ ಹೋಗಿ ವಾಪಸ್ ತೆರಳುತ್ತಿದ್ದ ಒಂದೇ ಕುಟುಂಬದ 8 ಜನರಿಗೆ ಗಾಯಗಳಾಗಿವೆ.
ಇದನ್ನೂ ಓದಿ : ಬೀದರ್ | ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಲಿ : ರಾಷ್ಟ್ರಪತಿಗೆ ಮನವಿ
ಗಾಯಾಳುಗಳಿಗೆ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.




