ಬೀದರ್‌ | ವಾಲ್ಮೀಕಿ ರಾಮಾಯಣ ಮಾನವ ಸಂಬಂಧಗಳ ಮೌಲ್ಯ ಸಾರುತ್ತದೆ: ನಾ.ಗೀತಾಚಾರ್ಯ

Date:

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಮಾನವ ಸಂಬಂಧಗಳ ಮಹತ್ವ, ಕುಟುಂಬದ ಜವಾಬ್ದಾರಿ, ಧರ್ಮನಿಷ್ಠೆ ಹಾಗೂ ಜೀವನ ಮೌಲ್ಯಗಳನ್ನು ಸಾರುವ ಮಹಾಕಾವ್ಯವಾಗಿದೆ ಎಂದು ಹಿರಿಯ ದಾಸ ಸಾಹಿತ್ಯ ವಿದ್ವಾಂಸ ನಾ.ಗೀತಾಚಾರ್ಯ ಹೇಳಿದರು.

- Advertisement -

ನಗರದ ಕುಂಬಾರವಾಡದ ರಸ್ತೆಯಲ್ಲಿರುವ ಅತಿವಾಳೆ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ದಾಸ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಮನುಷ್ಯನ ಬದುಕಿಗೆ ಸರಿಯಾದ ದಾರಿ ತೋರಿಸುವ ಶಕ್ತಿ ಸಾಹಿತ್ಯಕ್ಕಿದೆ. ದಾಸ ಸಾಹಿತ್ಯ ಹಾಗೂ ವಾಲ್ಮೀಕಿ ರಾಮಾಯಣದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳು ಮಹನೀಯರ ಜೀವನ ಸಾಧನೆಯನ್ನು ಜನರಿಗೆ ತಿಳಿಸುವುದರ ಜತೆಗೆ ಯುವಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಸಹಕಾರಿಯಾಗುತ್ತವೆ” ಎಂದರು.

WhatsApp Image 2026 10 10 at 7.46.08 PM 26
ಜಾಹೀರಾತು

ವಾಲ್ಮೀಕಿ ಸಮಾಜದ ಮುಖಂಡ ಸುನೀಲ ಭಾವಿಕಟ್ಟಿ ಮಾತನಾಡಿ, “ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ವೇದಿಕೆಗಳನ್ನಾಗಿ ರೂಪಿಸಬೇಕು. ವಾಲ್ಮೀಕಿ ಅವರ ಆದರ್ಶಗಳು ಹಾಗೂ ದಾಸ ಸಾಹಿತ್ಯದ ಸಂದೇಶಗಳು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ” ಎಂದು ತಿಳಿಸಿದರು.

‘ದಾಸ ಸಾಹಿತ್ಯದಲ್ಲಿ ಜೀವನ ಮೌಲ್ಯ’ ವಿಷಯದ ಕುರಿತು ಉಪನ್ಯಾಸ ನೀಡಿದ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಬೀದರ್‌ ಅಧ್ಯಕ್ಷ ರವೀಂದ್ರ ಲಂಜವಾಡಕರ್, “ದಾಸ ಸಾಹಿತ್ಯವು ಕೇವಲ ಭಕ್ತಿಗೆ ಸೀಮಿತವಾಗಿಲ್ಲ. ಅದು ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ದಾಸರು ತಮ್ಮ ಕೀರ್ತನೆಗಳ ಮೂಲಕ ಅಹಂಕಾರ, ದುರಾಸೆ ಹಾಗೂ ದುರ್ಗುಣಗಳನ್ನು ತೊರೆದು ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವ ಸಂದೇಶ ನೀಡಿದ್ದಾರೆ” ಎಂದರು.

‘ಮಹರ್ಷಿ ವಾಲ್ಮೀಕಿ ಅವರ ಜೀವನ ಸಾಧನೆ’ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಚಂದ್ರಕಾಂತ ಹಳ್ಳಿಖೇಡಕರ್, “ವಾಲ್ಮೀಕಿ ಅವರ ಜೀವನವು ಪರಿವರ್ತನೆ, ಪರಿಶ್ರಮ ಮತ್ತು ಸಾಧನೆಯ ಮಹತ್ವವನ್ನು ಸಾರುತ್ತದೆ. ಅವರ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ರಾಮಾಯಣ ಭಾರತೀಯ ಸಾಹಿತ್ಯ ಪರಂಪರೆಯ ಅಮೂಲ್ಯ ಕೃತಿಯಾಗಿದೆ. ಶ್ರೀರಾಮನ ಆದರ್ಶ, ಸೀತೆಯ ಸಹನೆ, ಲಕ್ಷ್ಮಣನ ಕರ್ತವ್ಯನಿಷ್ಠೆ, ಭರತನ ತ್ಯಾಗ ಹಾಗೂ ಹನುಮಂತನ ಭಕ್ತಿಯ ಮೂಲಕ ರಾಮಾಯಣವು ಜೀವನದ ಹಲವು ಮೌಲ್ಯಗಳನ್ನು ಪರಿಚಯಿಸುತ್ತದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತ ದೇವದಾಸ್ ಚಿಮಕೋಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೂರ್ಯಕಾಂತ ವಿಶ್ವಕರ್ಮ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಶಿಲ್ಪಾ ಪಾಟೀಲ್ ಜಾನಪದ ಗೀತೆ ಹಾಡಿದರು. ಅಜೀತ್ ಎನ್. ಸ್ವಾಗತಿಸಿದರು. ಬಸವರಾಜ ಮುಗಟಾಪುರೆ ನಿರೂಪಿಸಿದರು. ಅವಿನಾಶ್ ಸೋನಿ ವಂದಿಸಿದರು.

WhatsApp Image 2026 10 10 at 6.59.42 PM 13

ಇದನ್ನೂ ಓದಿ : SIR | ಬೀದರ್ ಜಿಲ್ಲೆಯ 2.15 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ!

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...

ಬೀದರ್‌ | ಹಸ್ತಪ್ರತಿ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ: ನಾ.ಗೀತಾಚಾರ್ಯ

ರಾಜ್ಯದ ಅಮೂಲ್ಯ ಜ್ಞಾನಸಂಪತ್ತಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಮಗ್ರ ನೀತಿ...

ಕುಡಚಿ ರೈಲು ಮಾರ್ಗ ಕಾಮಗಾರಿಗೆ ವೇಗ ನೀಡಿ; ರೈಲ್ವೆ ಹೋರಾಟಕ್ಕೆ ರೈತರೂ ಕೈಜೋಡಿಸಿ: ಕುತ್ಬುದ್ದೀನ್ ಖಾಜಿ

ದಶಕಗಳಿಂದ ಕುಂಟುತ್ತ ಸಾಗುತ್ತಿರುವ ಕುಡಚಿ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತಗೊಳಿಸಿ, ಯೋಜನೆಯನ್ನು...