ಔಷಧ ಮಾರಾಟದಲ್ಲಿ ಲೂಟಿ! MRP-ಮಾರಾಟ ದರದ ನಡುವೆ ಇಷ್ಟೊಂದು ಅಂತರವೇಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

Date:

ಭಾರತದಲ್ಲಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮತ್ತು ಚಿಲ್ಲರೆ ವ್ಯಾಪಾರಿಗಳು (Retailers) ಅವುಗಳನ್ನು ಖರೀದಿಸುವ ದರದ ನಡುವೆ ಇರುವ ಭಾರಿ ವ್ಯತ್ಯಾಸದ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಔಷಧಿ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡುವುದಕ್ಕಾಗಿಯೇ ಸಂಪೂರ್ಣ ವ್ಯವಸ್ಥೆಯು ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಔಷಧ ಮಾರಾಟದಲ್ಲಿ ನಡೆಯುತ್ತಿರುವ ಲೂಟಿಯ ಕುರಿತು ಮೌನವಾಗಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ದೇಶದಲ್ಲಿ ಔಷಧಿ ಬೆಲೆ ನಿಗದಿಗೆ ಸಂಬಂಧಿಸಿದ ಎರಡು ಪ್ರಮುಖ ಅರ್ಜಿಗಳ ವಿಚಾರಣೆ ನಡೆಸಿ ಈ ಪ್ರಶ್ನೆಗಳನ್ನು ಎತ್ತಿದೆ. ಎಂಆರ್‌ಪಿ ಮತ್ತು ಚಿಲ್ಲರೆ ವ್ಯಾಪಾರಿಗಳ ದರದ ನಡುವಿನ ಬೃಹತ್ ವ್ಯತ್ಯಾಸವನ್ನು ಉಲ್ಲೇಖಿಸಿದ ಪೀಠವು, ಸರ್ಕಾರವೇ ತನ್ನ ಕಣ್ಣೆದುರೇ ಇಂತಹ ಅನ್ಯಾಯ ನಡೆಯಲು ಅವಕಾಶ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿತು. ಇದೇ ವೇಳೆ, ಇಡೀ ವ್ಯವಸ್ಥೆಯನ್ನು ಯಾವುದೇ ನಿಯಂತ್ರಣವಿಲ್ಲದೆ ಮನಬಂದಂತೆ ನಡೆಯಲು ಬಿಡಬೇಕೇ ಎಂದು ಪ್ರಶ್ನಿಸಿದ ಕೋರ್ಟ್, ರಾಷ್ಟ್ರೀಯ ಔಷಧೀಯ ಬೆಲೆ ನಿಗದಿ ಪ್ರಾಧಿಕಾರವು (NPPA) ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಸಂಸ್ಥೆಯಂತೆ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಪ್ರಸ್ತುತ ಚೌಕಟ್ಟನ್ನು ಸಮರ್ಥಿಸಿಕೊಂಡರು. ಭಾರತದಲ್ಲಿ ಔಷಧಿ ಬೆಲೆಗಳು ಜಗತ್ತಿನಲ್ಲೇ ಅತ್ಯಂತ ಕಡಿಮೆಯಿರುವ ಪೈಕಿ ಒಂದಾಗಿವೆ ಎಂದು ತಿಳಿಸಿದ ಅವರು, ಇಡೀ ಔಷಧೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಾರದು ಎಂಬುದು ಸರ್ಕಾರದ ಧೋರಣೆಯಾಗಿದ್ದು, ಅತಿಯಾದ ಬೆಲೆ ನಿಯಂತ್ರಣವು ಈ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಆವಿಷ್ಕಾರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಿವರಿಸಿದರು.

ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಮೆಹ್ತಾ, “ಕಳೆದ 30 ವರ್ಷಗಳಲ್ಲಿ ಭಾರತೀಯ ಔಷಧೀಯ ಉದ್ಯಮವು ಕಂಡುಹಿಡಿದ 5 ಹೊಸ ಅಣುಗಳನ್ನು (Molecules) ಹೆಸರಿಸಿ ನೋಡೋಣ” ಎಂದು ಕೇಂದ್ರ ಸರ್ಕಾರಕ್ಕೆ ನೇರ ಸವಾಲೆಸೆದರು.

ವಿಚಾರಣೆ ವೇಳೆ, ಡೀಲರ್‌ಗೆ ಕೇವಲ ₹11,000 ಕ್ಕೆ ಸಿಗುವ ಕ್ಯಾನ್ಸರ್ ಇಂಜೆಕ್ಷನ್‌ ಅನ್ನು ಪ್ರಸಿದ್ಧ ಆಸ್ಪತ್ರೆಯೊಂದು ₹1.30 ಲಕ್ಷಕ್ಕೆ ಮಾರಾಟ ಮಾಡುತ್ತಿದೆ. ರೋಗಿ ತಾನೇ ಹೊರಗಡೆಯಿಂದ ತಂದುಕೊಡುತ್ತೇನೆ ಎಂದರೂ ಆಸ್ಪತ್ರೆ ಒಪ್ಪಲಿಲ್ಲ. “ಇದನ್ನು ದರೋಡೆ ಎನ್ನದೆ ಇನ್ನೇನನ್ನಬೇಕು?” ಎಂದು ಕೋರ್ಟ್ ಪ್ರಶ್ನಿಸಿತು. ಚಿಲ್ಲರೆ ದರದಲ್ಲಿ ಕೇವಲ ₹15 ಕ್ಕೆ ಸಿಗುವ ಸಲ್ಯೂನ್/ಡ್ರಿಪ್ ಲೈನ್‌ ಅನ್ನು ರೋಗಿಗಳಿಗೆ ₹250 ಕ್ಕೆ ಮಾರಾಟ ಮಾಡಲಾಗುತ್ತಿದೆ. ದೇಶದಲ್ಲಿ ಶೇ. 90 ರಷ್ಟು ಔಷಧಿಗಳು ‘ರಾಷ್ಟ್ರೀಯ ಅಗತ್ಯ ನಿಯಂತ್ರಿತ ಔಷಧಿಗಳ ಪಟ್ಟಿ’ಯಿಂದ (NLEM / DPCO) ಹೊರಗುಳಿದಿವೆ. ನಿಯಂತ್ರಣದಲ್ಲಿರುವ ಶೇ. 10 ರಷ್ಟು ಔಷಧಗಳಿಗೆ ಸರ್ಕಾರ ದರ ನಿಗದಿ ಮಾಡುತ್ತದೆ. ಆದರೆ ಉಳಿದ ಶೇ. 90 ರಷ್ಟು ಬ್ರಾಂಡೆಡ್ ಔಷಧಿಗಳ ಮೇಲೆ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ತಮಗಿಷ್ಟ ಬಂದಷ್ಟು (ಶೇ. 100 ರಿಂದ ಶೇ. 1000 ರಷ್ಟು) ಮಾರ್ಜಿನ್ ಇಟ್ಟುಕೊಂಡು ಎಂಆರ್‌ಪಿ ಮುದ್ರಿಸುತ್ತಿವೆ. ‘ಆಯುಷ್ಮಾನ್ ಭಾರತ್’ ನಂತಹ ಸರ್ಕಾರಿ ಆರೋಗ್ಯ ಯೋಜನೆಗಳಡಿ ಸರ್ಕಾರವೇ ಈ ಅತಿಯಾದ ದರದ ಬಿಲ್‌ಗಳನ್ನು ಆಸ್ಪತ್ರೆಗಳಿಗೆ ಮರುಪಾವತಿಸುತ್ತದೆ (Reimbursement). ಆಸ್ಪತ್ರೆಗಳು ನಕಲಿ/ಅತಿಯಾದ ಎಂಆರ್‌ಪಿ ಹಾಕಿ ಬಿಲ್ ಮಾಡುವುದರಿಂದ ಅಂತಿಮವಾಗಿ ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ತೆರಿಗೆ ಹಣ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತು.

ಭಾರತದಲ್ಲಿ ಒಬ್ಬ ಸಾಧಾರಣ ವ್ಯಕ್ತಿಯ ಒಟ್ಟು ವೈದ್ಯಕೀಯ ವೆಚ್ಚದ ಶೇ. 15 ರಿಂದ 19 ರಷ್ಟು ಹಣ ಕೇವಲ ಔಷಧಿಗಳನ್ನು ಖರೀದಿಸುವುದಕ್ಕೇ ವೆಚ್ಚವಾಗುತ್ತದೆ. ಸರ್ಕಾರ ಜಾರಿಗೊಳಿಸುವ ಜೆನೆರಿಕ್ ಔಷಧಿ ನೀತಿಗಳು ಮತ್ತು NPPA ಬೆಲೆ ಪ್ರಾಧಿಕಾರಗಳು ಕಾಗದದ ಮೇಲಷ್ಟೇ ಇದ್ದು, ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿವೆ ಎಂಬ ಅಂಶ ಈ ವಿಚಾರಣೆಯಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: 137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು ಇಳಿಕೆ: ಯಾವೆಲ್ಲ ಔಷಧಿ ಅಗ್ಗ? ಪಡೆಯುವ ವಿಧಾನ ಹೇಗೆ?

ಕೇಂದ್ರದ ವಾದಗಳಿಂದ ಸಮಾಧಾನಗೊಳ್ಳದ ನ್ಯಾಯಾಲಯವು ವಿಚಾರಣೆ ಪೂರ್ಣಗೊಳಿಸಿ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ಈ ವಿಚಾರಣೆಯು ನ್ಯಾಯಾಲಯದ ನಿರಂತರ ಪರಿಶೀಲನೆಯ ಭಾಗವಾಗಿದ್ದು, ಈ ಹಿಂದೆ ಅಕ್ಟೋಬರ್ 12 ರಂದು ನಡೆದ ವಿಚಾರಣೆಯಲ್ಲೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಕ್ಯಾನ್ಸರ್ ನಿರೋಧಕ ಔಷಧಿಗಳ ಮಾರ್ಜಿನ್ ಅನ್ನು ಎಂಆರ್‌ಪಿಯ ಶೇ. 30 ಕ್ಕೆ ಮಿತಿಗೊಳಿಸಿರುವ ಕೇಂದ್ರದ ನಿರ್ಧಾರವು ಖುಷಿಪಡುವಂತಹ ವಿಷಯವೇನಲ್ಲ ಎಂದಿದ್ದ ಪೀಠ, ಕ್ಯಾನ್ಸರ್ ಔಷಧಿಗಳಂತೆಯೇ ಇತರ ಜೀವ ರಕ್ಷಕ ಔಷಧಿಗಳ ಮೇಲೆಯೂ ಸರ್ಕಾರ ವ್ಯಾಪಾರ ಮಿತಿಯನ್ನು ಏಕೆ ವಿಧಿಸುತ್ತಿಲ್ಲ ಎಂದು ಪ್ರಶ್ನಿಸಿತ್ತು.

ಕ್ಯಾನ್ಸರ್ ಔಷಧಿಗಳ ಮೇಲೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿದ್ದ ಭಾರಿ ಬೆಲೆ ಏರಿಕೆಯ ಕುರಿತು ಈ ಮುಂಚೆಯೂ ಸುಪ್ರೀಂ ಕೋರ್ಟ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ, ಕ್ಯಾನ್ಸರ್ ನಿರೋಧಕ ಔಷಧಿಗಳ ಟ್ರೇಡ್ ಮಾರ್ಜಿನ್ ಅನ್ನು ಶೇ. 30 ಕ್ಕೆ ಮಿತಿಗೊಳಿಸಿ ಪ್ರಮುಖ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿತ್ತು. ಈ ಕ್ರಮದಿಂದ ರೋಗಿಗಳಿಗೆ ವಾರ್ಷಿಕವಾಗಿ ಸುಮಾರು ₹2,500 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಅರಿಕೆ ಮಾಡಿತ್ತು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...

ಬೀದರ್‌ | ಹಸ್ತಪ್ರತಿ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ: ನಾ.ಗೀತಾಚಾರ್ಯ

ರಾಜ್ಯದ ಅಮೂಲ್ಯ ಜ್ಞಾನಸಂಪತ್ತಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಮಗ್ರ ನೀತಿ...

ಕುಡಚಿ ರೈಲು ಮಾರ್ಗ ಕಾಮಗಾರಿಗೆ ವೇಗ ನೀಡಿ; ರೈಲ್ವೆ ಹೋರಾಟಕ್ಕೆ ರೈತರೂ ಕೈಜೋಡಿಸಿ: ಕುತ್ಬುದ್ದೀನ್ ಖಾಜಿ

ದಶಕಗಳಿಂದ ಕುಂಟುತ್ತ ಸಾಗುತ್ತಿರುವ ಕುಡಚಿ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತಗೊಳಿಸಿ, ಯೋಜನೆಯನ್ನು...