ಚಾಮರಾಜನಗರ | ಗೌರವಯುತವಾಗಿ ಬದುಕುವ ಹಕ್ಕು ಎಲ್ಲರಿಗಿದೆ: ನ್ಯಾ. ಈಶ್ವರ

Date:

ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಸಿವಿಲ್‌ ನ್ಯಾಯಾಧೀಶ ಈಶ್ವರ ಹೇಳಿದರು.

- Advertisement -

ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜೀತಪದ್ದತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು.
ಬಡತನವನ್ನೇ ಬಂಡವಾಳವಾಗಿಸಿಕೊಂಡು ಬಡವರನ್ನು ಜೀವನಪೂರ್ತಿ ದುಡಿಸಿಕೊಳ್ಳಬಾರದು. ಅದು ವ್ಯಕ್ತಿಯ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗಲಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಜೀತಪದ್ದತಿ ನಿರ್ಮೂಲನಾ ಕಾಯ್ದೆಯನ್ನು ಸರ್ಕಾರ 1976ರಲ್ಲಿ ಜಾರಿಗೊಳಿಸಿದೆ. ದೇಶದ ಪ್ರತಿಯೊಬ್ಬರೂ ಗೌರವದಿಂದ ಬದುಕಲು ಡಾ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಕುರಿತ ಹಲವಾರು ಅನುಚ್ಛೇದಗಳನ್ನು ಅಡಕಗೊಳಿಸಿದ್ದಾರೆ. ಎಲ್ಲಿಯೇ ಆಗಲಿ ಜೀತಪದ್ದತಿ ಕಂಡುಬಂದರೆ ಅಂತಹವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವಾಗಬೇಕು ಎಂದರು.

ಜೀತಪದ್ದತಿ ನಿರ್ಮೂಲನೆಯ ಅರಿವು ಮೂಡಿಸುವ ಧ್ಯೇಯ ವಾಕ್ಯಗಳನ್ನು ಮರದ ಪ್ರತಿಕೃತಿಗೆ ಅಳವಡಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, “ಕನಿಷ್ಠ ಬಡವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಜೀತ ಪದ್ದತಿಗೆ ಸಿಲುಕಿರುವುದನ್ನು ನೋಡಿದ್ದೇವೆ. ಕನಿಷ್ಠ ವೇತನ ನೀಡದೇ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳವುದು ತಪ್ಪಾಗಲಿದೆ. ಜೀತಪದ್ದತಿಯನ್ನು ತೊಲಗಿಸಲು ಜೀತ ವ್ಯಕ್ತಿಗಳನ್ನು ಗುರುತಿಸಿ, ಪರಿಹಾರ ನೀಡಿ ಸಂಪೂರ್ಣವಾಗಿ ಅವಶ್ಯ ಪುನರ್ವಸತಿ ಕಲ್ಪಿಸುವುದು ಜಿಲ್ಲಾಮಟ್ಟದ ಅಧಿಕಾರಿಗಳ ಜವಾಬ್ದಾರಿಯೂ ಆಗಿದೆ” ಎಂದು ತಿಳಿಸಿದರು.

“ಜಿಲ್ಲೆಯಲ್ಲಿ 2015-16, 2017ರಲ್ಲಿ ಜೀತಪದ್ದತಿ ಸಮೀಕ್ಷೆ ನಡೆಸಿ 45-52 ಜನರನ್ನು ಗುರುತಿಸಲಾಗಿತ್ತು. ಜೀತದಾಳುಗಳ ಪುನರ್ವಸತಿ ಕಾರ್ಯ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಸರ್ಕಾರದ ನೀತಿ, ನಿಯಮಗಳನ್ವಯ ಅವರಿಗೆ ಸಹಾಯಹಸ್ತ ಚಾಚಬೇಕಿದೆ. ಅದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಜೀತಪದ್ದತಿ ನಿರ್ಮೂಲನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಚಾಮರಾಜನಗರವನ್ನು ಜೀತ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣ ತೊಡೋಣ” ಎಂದು ಕರೆ ನೀಡಿದರು.

ಜೀತಪದ್ದತಿ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ, “ಜೀತ ಸಾಮಾಜಿಕ ಅನಿಷ್ಠ ಪದ್ದತಿ. ಯಾವುದೋ ಕಾರಣಕ್ಕಾಗಿ ವ್ಯಕ್ತಿಯ ಹಕ್ಕುಗಳನ್ನು, ವೈಯಕ್ತಿಕ ಬದುಕನ್ನು ಬಲವಂತವಾಗಿ ಕಸಿಯುವುದೇ ಜೀತಪದ್ದತಿ. ಜೀತ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಿ ನಾಗರಿಕ ಸಮಾಜದಿಂದ ಜೀತಪದ್ದತಿಯನ್ನು ಸಂಪೂರ್ಣವಾಗಿ ತೊಲಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, “ಜೀತಪದ್ದತಿ ನಿರ್ಮೂಲನೆ ಕಾರ್ಯದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಖ್ಯವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀತಪದ್ದತಿಯನ್ನು ಗುರುತಿಸಿ ಜೀತ ವಿಮುಕ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಅಧಿಕಾರಿಗಳ ತಂಡ ಮುಂದಾಗಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ರಾಜ್ಯ ರೈತ ಸಂಘ ಗುಡುಗು

ಕಾರ್ಯಕ್ರಮದಲ್ಲಿ ವಕೀಲೆ ರೂಪಶ್ರೀ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ ಲಕ್ಷ್ಮಿ, ಜೀತ ವಿಮುಕ್ತ ಸಂಘಟನೆಯ ಆರ್ ಎಫ್ ಓ, ಜಿಲ್ಲಾ ಸಂಚಾಲಕ ಜಿ ಕೆ ಕುನ್ನ ಹೊಳಿಯಯ್ಯ ಸೇರಿದಂತೆ ಹಲವರು ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ದ.ಕ. ಜಿಲ್ಲಾ ಬ್ಯಾರಿ ಮಹಿಳಾ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ನವೆಂಬರ್‌ 18ರಂದು ಮಂಗಳೂರಿನ ಶ್ರೀ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಕರ್ನಾಟಕ ಸಾಹಿತ್ಯ...

ಉಡುಪಿ | ಕೋಟದಲ್ಲಿ ಶಿಕ್ಷಕರಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಸಮಾರೋಪ

ರಿಷಬ್ ಶೆಟ್ಟಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಾಗೂ ವಿ-ಶೈನ್ ಕೋಚಿಂಗ್ ಸೆಂಟರ್ ಸಹಭಾಗಿತ್ವದಲ್ಲಿ...

ದಕ್ಷಿಣ ಕನ್ನಡ | ನವೆಂಬರ್‌ 22ರಿಂದ ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ನವೆಂಬರ್ 22ರಂದು...

ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಮೇಳದ ಸಡಗರ

ಬೆಂಗಳೂರಿನ ಜಿಕೆವಿಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ 2026ರ ಕೃಷಿ ಮೇಳಕ್ಕೆ ಚಾಲನೆ...