ರಾಯಚೂರು | ಡಿಜಿಟಲ್ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಕನ್ನಡ ಸಾಹಿತ್ಯ, ಪರಿಸರ ಸಂರಕ್ಷಣೆ ಅರಿವು ಮೂಡಿಸಿ: ಈರಣ್ಣ ಬೆಂಗಾಲಿ

Date:

ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್‌ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕನ್ನಡ ಸಾಹಿತ್ಯ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ಯುವ ಕವಿ ಈರಣ್ಣ ಬೆಂಗಾಲಿ ಹೇಳಿದರು.

- Advertisement -

    ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುತ್ತಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ ವಿಷಯ ಕುರಿತು ಅವರು ಮಾತನಾಡಿದರು.

    ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

    ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

    ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

    ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

    ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

    25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

    ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

    ಮಕ್ಕಳ ಸಾಹಿತ್ಯದ ಪುಸ್ತಕಗಳ ಸಂಖ್ಯೆ ಕಡಿಮೆಯಿದೆ. ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳ ಮನಸ್ಸು, ಆಸಕ್ತಿ ಹಾಗೂ ಕಲ್ಪನಾಶಕ್ತಿಯನ್ನು ಅರ್ಥಮಾಡಿಕೊಂಡು ಸಾಹಿತ್ಯ ರಚಿಸಬೇಕಾಗುತ್ತದೆ. ದೊಡ್ಡ ಗ್ರಂಥಗಳನ್ನು ರಚಿಸುವುದಕ್ಕಿಂತ ಮಕ್ಕಳ ಮನೋಭಾವಕ್ಕೆ ತಕ್ಕಂತೆ ಸರಳ ಹಾಗೂ ಆಕರ್ಷಕ ಸಾಹಿತ್ಯ ಸೃಷ್ಟಿಸುವುದು ಹೆಚ್ಚು ಸವಾಲಿನ ಕೆಲಸವಾಗಿದೆ ಎಂದರು.

    ಕಥೆ, ಕವನಗಳ ಮೂಲಕ ಪರಿಸರ ಸಂರಕ್ಷಣೆ, ಜೀವವೈವಿಧ್ಯದ ಮಹತ್ವ ಹಾಗೂ ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬಹುದು. ಶಾಲೆಗಳಲ್ಲಿ ಪಾಠದ ಜತೆಗೆ ಪರಿಸರ ಆಧಾರಿತ ನಾಟಕ, ಕಥೆ, ಕವನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸಬೇಕು. ಸರಳ ಭಾಷೆಯ ಕಥೆ, ಕವನಗಳ ಮೂಲಕ ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.

    ಈ ಸುದ್ದಿ ಓದಿದ್ದೀರಾ? ರಾಯಚೂರು | ಮಕ್ಕಳಿಗೆ ಓದು–ಬರಹ ಬರುವುದಿಲ್ಲ ಎನ್ನುವ ಮೊದಲು ಶಿಕ್ಷಕರ ಕೊರತೆ ನೀಗಿಸಿ; ಹಫೀಜುಲ್ಲಾ

    ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿದರು. ಪ್ರಕಾಶ ಗುತ್ತಲ ನಿರೂಪಿಸಿದರು. ಯಲ್ಲಪ್ಪ ಸ್ವಾಗತಿಸಿದರು

    WhatsApp Image 2025 11 17 at 3.21.38 PM
    ಈ ದಿನ ಡೆಸ್ಕ್
    + posts

    <p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಚಿಕ್ಕಮಗಳೂರು | ಆಕಸ್ಮಿಕ ಅಗ್ನಿ ಅವಘಡ: ಉತ್ಪನ್ನಗಳು ಭಸ್ಮ 

    ಕಡೂರು ತಾಲೂಕಿನ ಬೀರೂರು ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಮಂಜುನಾಥ ಕಾಯರ್...

    ಉಡುಪಿ | ಕುಂದಾಪುರ ಕೋಡಿ ಹಿನ್ನೀರು ಪ್ರದೇಶದಲ್ಲಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕಾಂಡ್ಲಾ ವನ ವೀಕ್ಷಣೆ

    ಕುಂದಾಪುರ ನಗರದ ಕೋಡಿ-ಕುಂದಾಪುರ ಸೇತುವೆ ಬಳಿಯ ಕೋಡಿ ಹಿನ್ನೀರು ಪ್ರದೇಶಕ್ಕೆ ರವಿವಾರ...

    ಉಡುಪಿ | ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬೈಂದೂರಿನ ಯುವ ಇಂಜಿನಿಯರ್ ಅಪಘಾತದಲ್ಲಿ ಸಾವು

    ಉದ್ಯೋಗದ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ನಾಡ-ಪಡುಕೋಣೆ ಸಮೀಪದ...

    ಹಾವೇರಿ ವಿವಿ ಹಾಸ್ಟೆಲ್‌, ಅಪರಿಚಿತನ ಅನುಚಿತ ವರ್ತನೆ: ವಿದ್ಯಾರ್ಥಿನಿಯರು ಪ್ರತಿಭಟನೆ

    ಹಾವೇರಿ ವಿವಿ ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಪರಿಚಿತನ ಅನುಚಿತ ವರ್ತನೆಯಿಂದ ವಿದ್ಯಾರ್ಥಿನಿಯರು...