ಚಾಮರಾಜನಗರ | ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ ಜಾರಿಗಾಗಿ ವಕೀಲರ ಸಂಘ ಆಗ್ರಹ

Date:

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕರ್ನಾಟಕ ನ್ಯಾಯವಾದಿಗಳ ಸಂರಕ್ಷಣಾ-2023 ಪ್ರಸ್ತಾವನೆಯನ್ನು ಅನುಮೋದಿಸಬೇಕು. ನ್ಯಾಯವಾದಿಗಳ ಸಂರಕ್ಷಣಾ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ವಕೀಲರ ಸಂಘವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರ ಸಂಘದ ಕೆ ವೆಂಕಟೇಶ್, “ಗುರುವಾರ ಅಧಿವೇಶನದಲ್ಲಿ ಕರ್ನಾಟಕ ನ್ಯಾಯವಾದಿಗಳ ಸಂರಕ್ಷಣಾ-2023 ಪ್ರಸ್ತಾವನೆಯನ್ನು ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್, ಶಾಸಕ ಎಎಸ್‌ ಪೊನ್ನಣ್ಣ, ಶಾಸಕ ಮಹಾಂತೇರ್ಶ ಕೌಜಲಗಿ ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ಅನುಮೋದಿಸಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.

ಮತ್ತೊಬ್ಬ ವಕೀಲ ರವಿಕಾಂತ್ ಮಾತನಾಡಿ, “ಈ ಪ್ರಸ್ತಾವನೆಯು ವಿಶೇಷ ಕಾಯ್ದೆಯಾಗಿ ಜಾರಿಯಾಗಬೇಕು. ರೈತಾಪಿ, ಕಾರ್ಮಿಕ ವರ್ಗ ಮತ್ತು ದಮಣಿತರ ಪರ ಹಾಗೂ ಶೋಷಣೆಗೆ ಒಳಗಾದವರ ಪರ ಧ್ವನಿ ಎತ್ತಿದರೆ ನಮಗೆ ಬೆದರಿಕೆ ಬರುವಂತ ಸನ್ನಿವೇಶಗಳು ಹೆಚ್ಚಾಗಿವೆ. ವಕೀಲರ ಮೇಲಿನ ಹಲ್ಲೆಗೆ ಈಗಿರುವ ಆರು ತಿಂಗಳಿಂದ ಮೂರು ವರ್ಷಗಳ ಜೈಲು ಶಿಕ್ಷೆ ಸಾಲದು. ಶಿಕ್ಷೆಯ ಪ್ರಮಾಣವನ್ನು 7 ವರ್ಷಕ್ಕೆ ಹೆಚ್ಚಿಸಬೇಕು. ವಕೀಲರು ಯಾವುದೇ ಭಯವಿಲ್ಲದೆ ಕೆಲಸ ಮಾಡುವಂತಾಗಬೇಕು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಕೀಲರ ಹೋರಾಟಕ್ಕೆ ರೈತ ಸಂಘವು ಬೆಂಬಲ ನೀಡಿದೆ. ಪ್ರತಿಭಟನೆಯಲ್ಲಿ ತಾಲೂಕು ವಕೀಲ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ವಕೀಲ ಶಿವಣ್ಣ ಸತ್ಯನಾರಾಯಣ ಸಂಪತ್ ಎಂ ಎನ್ ರಾಜೇಶ್ ಕೆಂಪರಾಜ್ ಮಾದು ಶ್ರೀನಿವಾಸ್ ನಂದೀಶ್ ಕಿರಣ್ ಅನಿಲ್ ಪ್ರಭುಸ್ವಾಮಿ ಹಾಗೂ ಮನು ಶಾನ್ಬೋಗ್ ರೈತ ಸಂಘದ ಮಹದೇವಪ್ಪ ಕುಂದ್ಕೇರೆ ಸಂಪತ್ತು ಹಾಲಹಳ್ಳಿ ಮಲ್ಲೇಶ್ ಇನ್ನಿತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ನೀಟ್ ಅವ್ಯವಹಾರ: ನ್ಯಾಯಾಂಗ ತನಿಕೆಗೆ ಡಿವಿಪಿ ಆಗ್ರಹ

ನೀಟ್‌ ಪರೀಕ್ಷೆಯಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು....

ದರ್ಶನ್ ಪ್ರಕರಣ | ವಿಶೇಷ ಪ್ರಾಸಿಕ್ಯೂಟ‌ರ್ ಆಗಿ ಪಿ ಪ್ರಸನ್ನ ಕುಮಾರ್‌ ನೇಮಕ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಆರೋಪಿಗಳು...