ದಕ್ಷಿಣಾ ಏಷ್ಯಾದಲ್ಲಿ ಅತ್ಯಂತ ದೊಡ್ಡ ಎಪಿಎಂಸಿ ಎನಿಸಿಕೊಳ್ಳಲಿರುವ ಬಾಗೇಪಲ್ಲಿ ಎಪಿಎಂಸಿಗೆ 50 ಎಕರೆ ಜಮೀನನ್ನು ಮೀಸಲಿರಿಸುವಂತೆ ಎಪಿಎಂಸಿ ಮಾರುಕಟ್ಟೆಯ ರೈತರು,ವ್ಯಾಪಾರಸ್ಥರು,ಟೊಮ್ಯಾಟೊ ಮಂಡಿ ವರ್ತಕರು ಹಾಗೂ ಕೂಲಿ ಕಾರ್ಮಿಕರು ತಹಸೀಲ್ದಾರ್‌ಗೆ ಮನವಿ ಪತ್ರ ನೀಡಿ ಆಗ್ರಹಿಸಿದರು.
ಬಾಗೇಪಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಸ್ಥ ಸಂಘದ ಅಧ್ಯಕ್ಷ ಹೆಚ್.ಎಸ್.ನರೇಂದ್ರ ನಿಯೋಗವು ಶುಕ್ರವಾರ ತಾಲ್ಲೂಕು ಕಛೇರಿಯಲ್ಲಿ ತಹಸೀಲ್ದಾರ್ ಮನಿಷ್ ಎನ್.ಪತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಕೊಂಡರೆಡ್ಡಿಪಲ್ಲಿ ಗ್ರಾಮದ ಸರ್ವೇನಂಬರ್ 46ರಲ್ಲಿ 36ಎಕರೆ ಮತ್ತು ಬಾಗೇಪಲ್ಲಿ ಸರ್ವೇ ನಂಬರ್ 402ರಲ್ಲಿ ಒಟ್ಟು 50 ಎಕರೆಗಿಂತ ಹೆಚ್ಚಾಗಿ ಖರಾಬು ಜಮೀನು ಇರುತ್ತದೆ ಮಾರುಕಟ್ಟೆಯಲ್ಲಿ ರೈತರು,ಮಂಡಿ ಮಾಲೀಕರು ಹಾಗೂ ನೂರಾರು ಕಾರ್ಮಿಕರು ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.ಹಾಲಿ ಇರುವ ಮಾರುಕಟ್ಟೆಯು ತುಂಬ ಚಿಕ್ಕದಾಗಿದ್ದು ವ್ಯಾಪಾರ ವಹಿವಾಟುಗಳನ್ನು ನಡೆಸಲು ತುಂಬ ತೊಂದರೆಯಾಗಿದೆ.
ಮಾರುಕಟ್ಟೆಗೆ ಪ್ರತಿದಿನ ಆಂಧ್ರಪ್ರದೇಶ,ಕರ್ನಾಟಕದಿಂದ ಸುಮಾರು 3ಲಕ್ಷ ಬಾಕ್ಸ್ ಗಳ ಟೋಮೋಟಾವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತರುತ್ತಿದ್ದು ವ್ಯಾಪಾರ ವಹಿವಾಟು ನಡೆಸುವ ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಲಾರಿಗಳು ಸಂಚಾರ ಮಾಡುತ್ತಿವೆ ಆದ್ದರಿಂದ ಪಟ್ಟಣದ ಹೊಸ ಮಾರುಟ್ಟೆ ನಿರ್ಮಾಣ ಮಾಡಲು ತುಂಬ ಅಗತ್ಯವಾಗಿದೆ.
ಎಪಿಎಂಸಿ ಮಾರುಕಟ್ಟೆಗೆ ಕೊಂಡರೆಡ್ಡಿಪಲ್ಲಿ ಬಾಗೇಪಲ್ಲಿ ಪಟ್ಟಣವೂ ಅತಿ ಸಮಿಪಲ್ಲದೆ.ಇದೇ ಮಾರುಕಟ್ಟೆಗೆ ಸ್ಥಳ ನಿಗದಿ ಮಾಡಬೇಕೆಂದು ಈಗಾಗಲೇ ಎರಡು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ.
ಕೋಲಾರ-ಚಿಂತಾಮಣಿ ಬಿಟ್ಟರೆ ಬಾಗೇಪಲ್ಲಿ ದೊಡ್ಡ ಮಾರುಕಟ್ಟೆಯಾಗಲಿದೆ.ಈಗಾಗಲೇ ಚಿಂತಾಮಣಿಯಲ್ಲಿ 300ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಾಣವಾಗುತ್ತಿದೆ.ಈ ಸ್ಥಳವನ್ನು ಬೇರೆ ಇಲಾಖೆಗೆ ನೀಡಲು ತಾಲೂಕು ಕಚೇರಿ ಮುಂದಾಗಿದ್ದು ಒಂದು ವೇಳೆ ಎಪಿಎಂಸಿ ಮಾರುಕಟ್ಟೆಗೆ ಜಾಗವನ್ನು ಮೀಸಲು ಇರಿಸದೆ ನಿರ್ಲಕ್ಷ ತೋರಿದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘ, ರೈತರು, ವರ್ತಕರು, ಹಾಗೂ ಕೂಲಿ ಕಾರ್ಮಿಕರು ತಹಶಿಲ್ದಾರ್ ಕಛೇರಿಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಅವರು ಹಾಲಿ ಇರುವ ಚಿಕ್ಕ ಮಾರುಕಟ್ಟೆಯಿಂದ ವಾಹನಗಳು ಸಂಚಾರ ಮಾಡುವಾಗ ಅಪಘಾತಗಳು ನಡೆಯುತ್ತಿವೆ ಇದರಿಂದ ಮುಗ್ದ ಜನರು ಬಲಿಯಾಗುತ್ತಿದ್ದಾರೆ.
ದೊಡ್ಡ ವೀಸ್ತೀರ್ಣದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವುದರಿಂದ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಆಧುನಿಕ ಸೌಲಭ್ಯಗಳು ಸಿಗಲಿದೆ ಜತಗೆ ಕೊಂಡರೆಡ್ಡಿಪಲ್ಲಿ,ಬಾಗೇಪಲ್ಲಿ ಸರ್ವೇ ನಂಬರ್‌ಗಳ ಜಮೀನು ಬೆಂಗಳೂರು-ಹೈದ್ರಾಬಾದ್ ರಾಷ್ಟೀಯ ಹೆದ್ದಾರಿಯಲಿದ್ದು ಆಂಧ್ರಪ್ರದೇಶ,ಕರ್ನಾಟಕದ ವಿವಿಧ ಭಾಗಗಳಿಂದ ರೈತರು ಟೋಮೋಟೊವನ್ನು ಮಾರುಕಟ್ಟೆಗೆ ತರಲು ತುಂಬ ಅನುಕೂಲವಾಗಲಿದೆ.ಈ ಪ್ರದೇಶವು ಕೈಗಾರಿಕೆ ವಲಯ ಆಗುತ್ತಿದ್ದು ಕೈಗಾರಿಕೆಗಳು ಸ್ಥಾಪನೆಯಾದರೆ ಮಾರುಕಟ್ಟೆಗೆ ಜಮೀನು ಸಿಗುವುದು ಕಷ್ಟವಾಗಲಿದೆ ಈ ಬಗ್ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗಮನಕ್ಕೆ ತಂದು ಈ ಜಮೀನನ್ನು ಬೇರೆ ಇಲಾಖೆಗೆ ನೀಡದೆ ಎಪಿಎಂಸಿ ಟೋಮೋಟೊ ಮಾರುಕಟ್ಟೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗುವುದು ಎಂದರು.
ತಹಸೀಲ್ದಾರ್ ಮನಿಷ ಎನ್.ಪತ್ರಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿ ಇದೇ ಸ್ಥಳದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣ ಮಾಡಲು ಜಮೀನು ಮಂಜೂರು ಮಾಡುವಂತೆ 10 ಎಕರೆ ಜಮೀನು ಕೇಳಿದ್ದು ಈ ಬಗ್ಗೆ ಕೋರ್ಟ್ ಅಧಿಕಾರಿಗಳೊಂದಿಗೆ ಚರ್ಚಿಸಿ ಎಪಿಎಂಸಿ ಮಾರುಕಟ್ಟೆ ಹಾಗೂ ಕೋರ್ಟ್ ಕಟ್ಟಡ ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ನೂತನ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್‌ಗೆ ವಾಲ್ಮೀಕಿ ಸಮನ್ವಯ ಸಮಿತಿಯಿಂದ ಸನ್ಮಾನ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಜೆ.ಜೆ. ಹಳ್ಳಿ ನಾರಾಯಣಸ್ವಾಮಿ ಮತ್ತು ಶ್ರೀನಿವಾಸ, ಅಮರನಾಥ್, ಕೃಷ್ಣಪ್ಪ, ಕೆವಿಎಸ್ ಶ್ರೀನಿವಾಸ, ಸುರೇಶ್, ಶಂಕರ್, ವೆಂಕಟೇಶ್, ನಾರಾಯಣರೆಡ್ಡಿ, ಚಂದ್ರಪ್ಪ, ಮಂಜುನಾಥ್,ಹರೀಶ್, ಆಧಿ, ಮಾಕಿರೆಡ್ಡಿ, ಹೆಚ್‌ವಿಎಸ್ ಹರೀಶ್ ಮತ್ತಿತರರು ಇದ್ದರು.




