ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಅಂಗವಿಕಲರಾಗಿ ನಿವೃತ್ತಿ ಹೊಂದಿ 26 ವರ್ಷಗಳು ಕಳೆದರೂ, ತಮಗೆ ಕಾನೂನುಬದ್ಧವಾಗಿ ಸಿಗಬೇಕಾದ 2 ಹೆಕ್ಟೇರ್ ಜಮೀನು ಮಂಜೂರು ಮಾಡದೆ ಕಂದಾಯ ಇಲಾಖೆ ಹಾಗೂ ತಾಲೂಕು ಆಡಳಿತ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಮಾಜಿ ಸೈನಿಕ ಶಿವಾನಂದರೆಡ್ಡಿ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಚಾಂಡ್ರಹಳ್ಳಿ ಗ್ರಾಮದ ಸಮೀಪವಿರುವ ರಾಯಪ್ಪಲ್ಲಿ ಗ್ರಾಮದ ನಿವಾಸಿ ಶಿವಾನಂದರೆಡ್ಡಿ ಅವರು ತಹಶೀಲ್ದಾರ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಇಲಾಖೆಯ ದ್ವಂದ್ವ ನೀತಿಯನ್ನು ಖಂಡಿಸಿದ್ದಾರೆ.
ಕಾವಲುಗಾನಹಳ್ಳಿ ಗ್ರಾಮದ ಸರ್ವೇ ನಂ.11 ರಲ್ಲಿ ಒಟ್ಟು 219 ಎಕರೆ 26 ಗುಂಟೆ ಜಮೀನಿದ್ದು,ಇದರಲ್ಲಿ ವಿವಿಧ ಕಟ್ಟಡಗಳು, ದೇವಸ್ಥಾನದ ಅನ್ನದಾನ ಮಂದಿರ,ವಾಹನ ನಿಲುಗಡೆ ಹಾಗೂ ವಿವಿಧ ಸಮುದಾಯಗಳಿಗೆ ಜಮೀನು ಹಂಚಿಕೆ ಮಾಡಲಾಗಿದೆ.ಅಲ್ಲದೆ ಇತ್ತೀಚೆಗೆ ನಲ್ಲಗುಟ್ಟಹಳ್ಳಿ ಗ್ರಾಮದ ಸರ್ವೇ ನಂ.40 ರಲ್ಲಿ 34 ಸಮುದಾಯಗಳಿಗೆ ಜಮೀನು ಪರಿವರ್ತಿಸಿ ನೀಡಲಾಗಿದೆ.
ಕಂದಾಯ ನಿರೀಕ್ಷಕರ ವರದಿಯಂತೆ ಸೂರವಪಲ್ಲಿಯಲ್ಲಿ 170 ಎಕರೆ,ಕಾವಲುಗಾನಹಳ್ಳಿಯಲ್ಲಿ 200 ಎಕರೆ ಸರ್ಕಾರಿ ಖರಾಬು ಜಮೀನು ಲಭ್ಯವಿದ್ದರೂ,ದೇಶಕ್ಕಾಗಿ ದುಡಿದ ಸೈನಿಕನಿಗೆ ನೀಡಲು ಯಾವುದೇ ಜಮೀನಿಲ್ಲ ಎಂದು ಅಧಿಕಾರಿಗಳು ಹಿಂಬರಹ ನೀಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಕೋಗಿಲೆ ಕ್ರಾಸ್ ಭಾಗದಲ್ಲಿ ಅಕ್ರಮ ವಲಸಿಗರಿಗೆ ಕೆಲವೇ ದಿನಗಳಲ್ಲಿ ವಸತಿ ಸಮುಚ್ಚಯ ನಿರ್ಮಿಸಿ ಮನೆ ನೀಡಲು ಸಾಧ್ಯವಿರುವ ಸರ್ಕಾರಕ್ಕೆ,ದೇಶಕ್ಕಾಗಿ ಹೋರಾಡಿದ ಅಂಗವಿಕಲ ಸೈನಿಕನಿಗೆ 26 ವರ್ಷಗಳಿಂದ ಒಂದು ಚೂರು ಜಾಗ ಗುರುತಿಸಲು ಸಾಧ್ಯವಾಗಿಲ್ಲವೇ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ
ತಾಲೂಕು ಆಡಳಿತ ಹಾಗೂ ಎಸಿ,ಡಿಸಿ ಇಲಾಖೆಗಳು ತಮ್ಮ ಮನವಿಯನ್ನು ಪುನಃ ಪುನಃ ತಳ್ಳಿಹಾಕುತ್ತಿರುವುದರಿಂದ ನೊಂದಿರುವ ಶಿವಾನಂದರೆಡ್ಡಿ ಅವರು,ಮುಖ್ಯಮಂತ್ರಿಗಳ ಬಳಿ ತಮ್ಮ ನೋವನ್ನು ತೋಡಿಕೊಳ್ಳಲು ಅವರ ಗೃಹ ಕಚೇರಿಯವರೆಗೆ ಪಾದಯಾತ್ರೆ ಕಾಲ್ನಡಿಗೆ ಮೂಲಕ ತೆರಳಿ ಮನವಿ ಸಲ್ಲಿಸಲು ಅನುಮತಿ ಕೋರಿದ್ದಾರೆ.
ಚಿಂತಾಮಣಿ | ಕಾರ್ಗಿಲ್ ವೀರನಿಗೆ 26 ವರ್ಷಗಳಿಂದ ಸಿಗದ ಜಮೀನು: ಸಿಎಂ ಗೃಹ ಕಚೇರಿಗೆ ಪಾದಯಾತ್ರೆ ನಿರ್ಧಾರ!
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




