ಚಿಂತಾಮಣಿ: ಬೆಲೆ ಏರಿಕೆ,ಸರ್ಕಾರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ರಾಜಕೀಯ ಹಸ್ತಕ್ಷೇಪ ಖಂಡಿಸಿ ಎನ್‌ಡಿಎ ಕಡೆಯಿಂದ ಬೃಹತ್ ಪ್ರತಿಭಟನೆ

Date:

ಚಿಂತಾಮಣಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ,ಜನವಿರೋಧಿ ನೀತಿಗಳು ಹಾಗೂ ಸರ್ಕಾರದ ವೈಫಲ್ಯ ವಿರುದ್ಧ ಜೆಡಿಎಸ್ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.

- Advertisement -

ಚಿಂತಾಮಣಿ ನಗರದ ಆದರ್ಶ ಚಿತ್ರಮಂದಿರದ ಮುಂಭಾಗದಿಂದ ಪ್ರತಿಭಟನ ರ‍್ಯಾಲಿ ಪ್ರಾರಂಭಗೊಂಡು ನಗರದ ಮುಖ್ಯ ರಸ್ತೆಗಳಿಂದ ಪ್ರಜಾ ಸೇವೆ ಕಚೇರಿಗೆ ತೆರಳಿ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

150 ವರ್ಷ ಹಳೆಯ ಶಿವಮೊಗ್ಗ ತುಂಗಾ ಸೇತುವೆ ಮರುನಿರ್ಮಾಣಕ್ಕೆ...

ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ ತುಂಗಾ ಸೇತುವೆಗೆ ಕೊನೆಗೂ ಹೊಸ ರೂಪ ನೀಡುವ ಕಾಲ ಸನ್ನಿಹಿತವಾಗಿದೆ. ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಹಳೆಯ ತುಂಗಾ...

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ಪ್ರತಿಭಟನಾಕಾರರನ್ನು ಉದ್ದೇಶಿಸಿ ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಗಳು,ಗ್ಯಾರಂಟಿ ಯೋಜನೆಗಳ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ರಾಜಕೀಯ ಹಸ್ತಕ್ಷೇಪದ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

Advertisements

ರಾಜ್ಯ ಸರ್ಕಾರದ ದುರಾಡಳಿತ,ಬೆಲೆ ಏರಿಕೆ ಹಾಗೂ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಲಂಚಗುಳಿತನದ ವಿರುದ್ಧ ಸುದೀರ್ಘವಾಗಿ ಕಿಡಿಕಾರಿದರು.

ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಿ, ಅದರಲ್ಲಿ ರೈತರಿಗೆ 7 ರೂಪಾಯಿ ನೀಡುತ್ತಿರುವುದನ್ನು ಸ್ವಾಗತಿಸಿದ ಅವರು,ಆದರೆ ಇದರಿಂದ ರಾಜ್ಯದ ಕೋಟ್ಯಂತರ ಜನಸಾಮಾನ್ಯರಿಗೆ ತೀವ್ರ ಆರ್ಥಿಕ ಹೊರೆಯಾಗಿದೆ ಎಂದರು.

ಕೇವಲ 25 ಲಕ್ಷ ರೈತ ಕುಟುಂಬಗಳಿಗೆ ಅನುಕೂಲ ಮಾಡುವ ನೆಪದಲ್ಲಿ,ಸುಮಾರು 1.50 ಕೋಟಿ ಕುಟುಂಬಗಳ ಸುಮಾರು 6 ಕೋಟಿ ಜನ ಮೇಲೆ ಸರ್ಕಾರ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಹಿಂದೆ ಇದ್ದಂತಹ ಅವರಂತಹ ದಕ್ಷ ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದರು.ಆದರೆ ಇಂದಿನ ಸರ್ಕಾರದಲ್ಲಿ ಪೊಲೀಸರ ಕೈಗಳನ್ನು ಕಟ್ಟಿಹಾಕಲಾಗಿದೆ.ಗೃಹ ಸಚಿವರ ದುರಹಂಕಾರಿ ಧೋರಣೆಯಿಂದಾಗಿ ಪೊಲೀಸ್ ಠಾಣೆಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ವಾತಂತ್ರ್ಯವಿಲ್ಲದಂತಾಗಿದೆ.ಬೆಂಗಳೂರು ಪೊಲೀಸ್ ಆಯುಕ್ತರ ಮೂಲಕ ವಿರೋಧ ಪಕ್ಷಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ಕೊಡಿಸುತ್ತಿರುವ ಗೃಹ ಸಚಿವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಒಬ್ಬರು ಸುಮಾರು 29 ಜನರಿಗೆ ನೋಟೀಸ್ ನೀಡಿ,ತಲಾ ₹1 ರಿಂದ ₹1.5 ಲಕ್ಷ ವಸೂಲಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

2024ರಲ್ಲಿ ಎಲ್ಲಾ ಅರ್ಹತೆಗಳನ್ನು ಪರಿಶೀಲಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂ ಮಂಜೂರು ಮಾಡಿದ್ದ ಟೈಲರಿಂಗ್ ಯಂತ್ರವನ್ನು,ಅವರು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಚಲಪತಿ ಅವರ ಪತ್ನಿ ಎಂಬ ಒಂದೇ ಕಾರಣಕ್ಕೆ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ.ಶಾಸಕರಾ ಸೂಚನೆ ಮೇರೆಗೆ ಅಧಿಕಾರಿಗಳು ಕರೆ ಮಾಡಿ ಯಂತ್ರ ವಾಪಸ್ ಕೇಳಿದ್ದು,ಈ ಕುರಿತು ಅಧಿಕಾರಿಗಳ ಧ್ವನಿ ಮುದ್ರಿಕೆ ಲಭ್ಯವಿದೆ ಎಂದು ಬಹಿರಂಗಪಡಿಸಿದರು.

ಸಾರ್ವಜನಿಕರ ದೂರುಗಳು ಬಂದರೆ ಪಿಎ ಅಥವಾ ಎಂಎಲ್ಎಗೆ ಫೋನ್ ಮಾಡುವಂತೆ ಹೇಳುವ ಅಧಿಕಾರಿಗಳು,ಇಂದು ರಾಜಕಾರಣ ಮಾಡುತ್ತಾ ಒಂದೊಂದು ಕಡೆ ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವ ಪರಿಸ್ಥಿತಿ ತಂದಿದ್ದಾರೆ ಎಂದು ಕೃಷ್ಣಾರೆಡ್ಡಿ ಕಿಡಿಕಾರಿದ್ದಾರೆ.

ಟೈಲರಿಂಗ್ ಯಂತ್ರಗಳು,ಮೂರು ಚಕ್ರದ ವಾಹನಗಳು ಹಾಗೂ ರೈತರ ಸೌಲಭ್ಯಗಳ ವಿತರಣೆಯಲ್ಲಿ ಅನಗತ್ಯ ತಡೆ ಹಾಗೂ ತೊಂದರೆ ನೀಡಲಾಗುತ್ತಿದ್ದು,ಕರ್ನಾಟಕದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿಯನ್ನು ಎಲ್ಲೂ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಹಣಕಾಸಿನ ವಿಚಾರದಲ್ಲಿ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.ವಿಶೇಷವಾಗಿ ಮಹಿಳೆಯರಿಗೆ ದೊರೆಯಬೇಕಾದ ಸೌಲಭ್ಯಗಳು ಮತ್ತು ಆರ್ಥಿಕ ಲಾಭಗಳ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ ಹಾಗೂ ತೊಂದರೆಗಳ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕ್ರಮಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಅವರು, ಅಧಿಕಾರಿಗಳ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ

ಈ ಸಂದರ್ಭದಲ್ಲಿ ಶ್ರೀನಿವಾಸಗೌಡ,ಜೆಡಿಎಸ್ ಯುವ ಘಟಕದ ತಾಲೂಕ ಅಧ್ಯಕ್ಷ ವೆಂಕಟ್ ಚಲಪತಿ,ಡಾ!ಆಜ್ಹಾರ್ ಖಾನ್,ಕೊತ್ತೂರ್ ಬಾಬು,ಮಹೇಶ್ ಬೈ,ಅಬ್ದುಲ್ ಸಮದ್, ಗುಡೇ ಶ್ರೀನಿವಾಸ್,ರಾಜಣ್ಣ,ಶ್ರೀನಿವಾಸರೆಡ್ಡಿ,ವೆಂಕಟೇಶ್, ಜನಾರ್ಧನ್,ಅಪ್ಸರ್ ಪಾಷಾ,ಬ್ಲಡ್ ಮಂಜು,ಆರಿಫ್, ನವಾಜ್,ಮುನವರ್ ಪಾಷಾ,ಸೇರಿದಂತೆ ಎನ್ ಡಿ ಎ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಆಸ್ತಿ ನೋಂದಣಿ ದರ ಪರಿಷ್ಕರಣೆಗೆ ಪ್ರಸ್ತಾವನೆ: ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ

ಮುಂಡಗೋಡ ತಾಲೂಕಿನಲ್ಲಿ ಜಮೀನು, ನಿವೇಶನ ಹಾಗೂ ಕಟ್ಟಡಗಳ ನೋಂದಣಿಗೆ ಸಂಬಂಧಿಸಿದ ಮಾರ್ಗಸೂಚಿ...

ಛಲವಾದಿ ನಾರಾಯಸ್ವಾಮಿ ಮನೆಗೆ ಚಾಕು ಕೊರಿಯರ್ ಬೆನ್ನಲ್ಲೇ ವಿಜಯೇಂದ್ರ ಮನೆಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್‌ ಕಾರ್ಯಕರ್ತರು

ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೋಸ್ಟರ್ ವಾರ್ ಶಿವಮೊಗ್ಗ ಜಿಲ್ಲೆಯಲ್ಲೂ ಸಂಚಲನ...

ಚಾಮರಾಜನಗರ ಜಿಲ್ಲಾ ಪಿಯುಸಿಎಲ್ ಅಧ್ಯಕ್ಷರಾಗಿ ಡಿ.ಎಸ್. ದೊರೆಸ್ವಾಮಿ ಆಯ್ಕೆ

ಚಾಮರಾಜನಗರದ ರಂಗಕರ್ಮಿ ಕೆ. ವೆಂಕಟರಾಜು ಅವರ ‘ನೆಲೆ’ ನಿವಾಸದಲ್ಲಿ ನಡೆದ ಜಿಲ್ಲಾ...

ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ: ಕಾವಡಿ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಬಹುಮಾನ

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ...