ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ದೇವಿರಮ್ಮನ ಬೆಟ್ಟಕ್ಕೆ ಜನ ಸಾಗರ ಹರಿದು ಬರುತ್ತಿರುವ ವೇಳೆ ದೇವಿರಮ್ಮನ ದರ್ಶನಕ್ಕೆ ಬಂದಿದ್ದ ವ್ಯಕ್ತಿ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಮೃತ ದುರ್ದೈವಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ಗ್ರಾಮದ ನಿವಾಸಿ, (32) ವರ್ಷದ ಲಕ್ಷ್ಮಣ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸೈಬರ್ ವಂಚನೆ: 1.68 ಲಕ್ಷ ಹಣ ದುರ್ಬಳಕೆ
ದೇವಿರಮ್ಮನ ದರ್ಶನ ಪಡೆಯುವ ಉದ್ದೇಶದಿಂದ ಲಕ್ಷ್ಮಣ್ ಎಂಬ ವ್ಯಕ್ತಿ ಬೆಟ್ಟವನ್ನು ಏರುತ್ತಿದ್ದರು. ಈ ವೇಳೆ ಏಕಾಏಕಿ ತೀವ್ರ ಹೃದಯಾಘಾತಕ್ಕೊಳಗಾದ ಬೆಟ್ಟ ಏರುವಾಗಲೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ.




