​ಚಿಂತಾಮಣಿ | ವೈದ್ಯರ ಘೋರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ?ಬಾಣಂತಿ ಹಾಗೂ ಕುಟುಂಬಸ್ಥರ ತೀವ್ರ ಆಕ್ರೋಶ

Date:

ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಘೋರ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದು ಮೃತಪಟ್ಟಿದೆ ಎಂದು ಆರೋಪಿಸಿ ಬಾಣಂತಿ ಮತ್ತು ಕುಟುಂಬದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


​ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಹೆತ್ತಕ್ಕಿ ಗ್ರಾಮದ ದಂಪತಿಗಳು ಸಂಜನ ಕೋಂ ಸಂದೀಪ್ ಎಂಬ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.ನನಗೆ ನಾರ್ಮಲ್ ಹೆರಿಗೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ”ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದರೂ, ವೈದ್ಯರು ಮತ್ತು ಸಿಬ್ಬಂದಿ ಅದನ್ನು ನಿರ್ಲಕ್ಷಿಸಿ ಬಲವಂತವಾಗಿ ನಾರ್ಮಲ್ ಹೆರಿಗೆಗೆ ಯತ್ನಿಸಿದ್ದಾರೆ ಎಂದು ತಾಯಿ ಸಂಧ್ಯಾ ಆರೋಪಿಸಿದ್ದಾರೆ.

​”ನನಗೆ ನೋವು ತಡೆಯಲಾಗುತ್ತಿಲ್ಲ,ಸಿಸೇರಿಯನ್ ಮಾಡಿ ಎಂದು ಎಷ್ಟು ಬೇಡಿಕೊಂಡರೂ ವೈದ್ಯರು ಕೇಳಲಿಲ್ಲ.ಎಲ್ಲವೂ ನಾರ್ಮಲ್ ಆಗಿದೆ ಎಂದು ಹೇಳಿ ಕೊನೆಗಳಿಗೆಯವರೆಗೆ ನಿರ್ಲಕ್ಷಿಸಿದರು.ಹೆರಿಗೆಯಾದ ತಕ್ಷಣ ಮಗು ಅಳಲಿಲ್ಲ ಎಂದು ಕೇಳಿದ್ದಕ್ಕೂ ಎಲ್ಲವೂ ಸರಿ ಇದೆ ಎಂದೇ ಹೇಳಿದರು.ಆ ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಬೇರೆ ಮೇಜರ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು.ಆದರೆ ಅಲ್ಲಿ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.ವೈದ್ಯರ ನಿರ್ಲಕ್ಷ್ಯವೇ ನನ್ನ ಮಗುವಿನ ಸಾವಿಗೆ ಕಾರಣ,”ಎಂದು ತಾಯಿ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

​ಮಗು ಹುಟ್ಟುವಾಗಲೇ ಉಸಿರಾಟವಿಲ್ಲದೆ ಮೃತಪಟ್ಟಿದ್ದರೂ, ಆಸ್ಪತ್ರೆ ಸಿಬ್ಬಂದಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆಕ್ಸಿಜನ್ ಅಳವಡಿಸಿ ಬೇರೆ ಆಸ್ಪತ್ರೆಗೆ ಕಳುಹಿಸುವ ನಾಟಕವಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಮಗುವಿನ ಸಾವಿಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ತಮಗೆ ನ್ಯಾಯ ಸಿಗಬೇಕು ಎಂದು ಸಂತ್ರಸ್ತ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇನ್ನೂ ನಾರ್ಮಲ್ ಡೆಲಿವರಿ ಪ್ರಯತ್ನಿಸುವಾಗ ಮಗುವಿಗೆ ಉಸಿರಾಟದ ತೊಂದರೆಯಾಗಿ,ಬಳಿಕ ಮೇಲ್ದರ್ಜೆಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ಡಾ.ಸಂತೋಷ್ ಅವರು ಸ್ಪಷ್ಟನೆ ನೀಡಿದ್ದಾರೆ.

ಹೆರಿಗೆಯ ಸಂದರ್ಭದಲ್ಲಿ ಪಾರ್ಟೋಗ್ರಾಫ್ ನಿಯಮದಂತೆ ಜಾಗವು ನಿಗದಿತ ಸೆಂಟಿಮೀಟರ್‌ಗಳಷ್ಟು ತೆರೆದುಕೊಳ್ಳಬೇಕು. ಪ್ರಗತಿ ಸರಿಯಾಗಿ ಆಗುತ್ತಿದ್ದರೆ ಸಿಸೇರಿಯನ್ ಮಾಡುವ ಅವಶ್ಯಕತೆ ಇರುವುದಿಲ್ಲ.ಆದಷ್ಟು ನಾರ್ಮಲ್ ಡೆಲಿವರಿ ಮಾಡಲು ಪ್ರಯತ್ನಿಸಿದ್ದೆವು ಎಂದು ಡಾ. ಸಂತೋಷ್ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ

ಹೆರಿಗೆಯ ಸಮಯದಲ್ಲಿ ಮಗುವಿನ ಕುತ್ತಿಗೆಗೆ ಎರಡು ರೌಂಡ್ ಬಳ್ಳಿಕೊಳ್ಳಿ ಸುತ್ತಿಕೊಂಡಿತ್ತು.ಮಗು ಹುಟ್ಟಿದ ತಕ್ಷಣ 30 ಸೆಕೆಂಡ್‌ಗಳ ಒಳಗೆ ಅಳಬೇಕು,ಆದರೆ ಮಗು ಅಳಲಿಲ್ಲ.ಅಟೆಂಡೆಂಟ್‌ಗಳು ಮುಂಚೆಯೇ ಸಿಸೇರಿಯನ್ ಮಾಡಬೇಕಿತ್ತು ಎಂದು ಆರೋಪಿಸಿರುವುದಕ್ಕೆ ಉತ್ತರಿಸಿರುವ ವೈದ್ಯರು, ಜಾಗ 9-10 ಸೆಂಟಿಮೀಟರ್ ತೆರೆದುಕೊಂಡಿದ್ದರಿಂದ ನಾರ್ಮಲ್ ಆಗುವ ಸಾಧ್ಯತೆ ಇತ್ತು. ತಲೆ ತೀರ ಕೆಳಗೆ ಬಂದಾಗ ಸಿಸೇರಿಯನ್ ಮಾಡುವುದು ಕಷ್ಟ ಹಾಗೂ ರಕ್ತಸ್ರಾವವಾಗುವ ಅಪಾಯವಿರುತ್ತದೆ ಎಂದು ವೈದ್ಯಕೀಯ ತಾಂತ್ರಿಕತೆಯನ್ನು ವಿವರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಜನರ ಮೇಲೆ ತೆರಿಗೆ ಹಾಗೂ ಬೆಲೆ ಏರಿಕೆಯ ಹೊರೆ ಹಾಕುವುದು ಸರಿಯಲ್ಲ : ಮುನಿ ವೆಂಕಟಪ್ಪ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡವರು, ಮಧ್ಯಮ ವರ್ಗದವರು, ಕಾರ್ಮಿಕರು...

ಬಾಗೇಪಲ್ಲಿ | ಶಾಸಕ ಸುಬ್ಬಾರೆಡ್ಡಿಯ ಎಲ್ಲಾ ಹಗರಣಗಳ ವಿರುದ್ದ ನ.11 ರಂದು ಬೃಹತ್ ಹೋರಾಟ

ಸರ್ಕಾರಿ ಅಧಿಕಾರಿಗಳಿಂದ, ಕ್ರಷರ್ ಮಾಲೀಕರಿಂದ ವಸೂಲಿ ಮಾಡಿರುವ ಹಾಗೂ ಬಡ ರೈತರಿಂದ...

ಚಿಂತಾಮಣಿ | ಯಾದವ ಸಮುದಾಯದ ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ಒತ್ತು : ಮುನೇಗೌಡ

ಯಾದವ ಸಂಘದ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ಮುನೇಗೌಡ ಅವರು ಚಿಂತಾಮಣಿ ತಾಲ್ಲೂಕಿನ...