ಚಿಕ್ಕಬಳ್ಳಾಪುರ | ಗೋಪಾಲಪ್ಪ ಎಂಬುವವರ ಮೇಲೆ ದೌರ್ಜನ್ಯ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ದಸಂಸ ಆಗ್ರಹ

Date:

ಚಿಕ್ಕಬಳ್ಳಾಪುರದ ಜೆ ಪಿ ನಗರ (ಬೀಚಗಾನಹಳ್ಳಿ ಕ್ರಾಸ್) ಗ್ರಾಮದ ಗೋಪಾಲಪ್ಪ ಎಂಬುವವರ ಮೇಲೆ ದೌರ್ಜನ್ಯ ಎಸಗಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಸಂಸ ಗುಡಿಬಂಡೆ ತಾಲೂಕು ಘಟಕ ತೀವ್ರವಾಗಿ ಖಂಡಿಸಿದೆ.

- Advertisement -

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜೆ ಪಿ ನಗರ (ಬೀಚಗಾನಹಳ್ಳಿ ಕ್ರಾಸ್) ಗ್ರಾಮದ ಗೋಪಾಲಪ್ಪ ಎಂಬುವವರ ಮೇಲೆ ಚಿನ್ನಪ್ಪನಹಳ್ಳಿ ಗ್ರಾಮದ ಗ್ಯಾದಿ ವೆಂಕಟರಮಣಪ್ಪ ಮತ್ತು ಈತನ ಮಗ ಒಗ್ಗೂಡಿ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆ ನೀಡಿದ್ದಾರೆಂದು ದಸಂಸ ಗುಡಿಬಂಡೆ ತಾಲೂಕು ಘಟಕ ತೀವ್ರವಾಗಿ ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಆರೋಪಿಗಳನ್ನು ಕೂಡಲೇ ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ನಿದ್ದೆಯಲ್ಲಿರುವ ಜಿಲ್ಲಾಡಳಿತ ಸಂತ್ರಸ್ಥ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿ ಮನೋಸ್ಥೈರ್ಯ ತುಂಬಬೇಕು. ಹತೆಗೆ ಈ ಪ್ರಕರಣಕ್ಕೆ ವಿಶೇಷ ಅಭಿಯೋಜಕರನ್ನು ನೇಮಿಸಿ ಆರೋಪಿಗಳನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ದಸಂಸ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಗುಡಿಬಂಡೆ ಗಂಗಪ್ಪ  ಒತ್ತಾಯಿಸಿದ್ದಾರೆ.

ಘಟನೆ ಹಿನ್ನೆಲೆ

ಗುಡಿಬಂಡೆ ಗಂಗಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗೋಪಾಲಪ್ಪ ಎಂಬುವವರ ಮಗ ವೆಂಕಟರಮಣಪ್ಪನ ಬಳಿ ಕೆಲಸ ಮಾಡುತ್ತಿದ್ದ. ಅವನಿಗೆ ಸಂಬಳವನ್ನು ಕೊಟ್ಟಿರಲಿಲ್ಲ. ಸಂಬಳ ಪಡೆಯುವ ಮುನ್ನವೇ ಗೋಪಾಲಪ್ಪನವರ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಹಾಗಾಗಿ ಅವರ ತಂದೆ ಮಗನ ಸಂಬಳದ ಹಣವನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಕುಪಿತರಾದ ವೆಂಕಟರಮಣಪ್ಪ ಮತ್ತು ಈತನ ಮಗ ಕೈಯಲ್ಲಿದ್ದ ರಾಡ್‌ನಿಂದ ತಲೆಗೆ, ಎಡಗೈ ಮತ್ತು ಎಡ ಮೊಣಕಾಲಿಗೆ ಹೊಡೆದು ಗಾಯಪಡಿಸಿದ್ದು, “ಕೊಟ್ಟಿರುವ ಹಣ ಪದೇಪದೆ ಕೇಳುತ್ತೀಯ, ಕೊರಚ ನಾ ಕೊಡಕ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದರಿಂದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದಾರೆ” ಎಂದರು.

“ಸೋಮೇನಹಳ್ಳಿ ಹೋಬಳಿಯ ಜೆ ಪಿ ನಗರ(ಬೀಚಗಾನಹಳ್ಳಿ ಕ್ರಾಸ್)ದಲ್ಲಿ ಘಟನೆ ನಡೆದಿದೆ.
ಜುಲೈ 15ರಂದು ಆರೋಪಿಯ ವಿರುದ್ಧ ಸಂತ್ರಸ್ತ ಗೋಪಾಲಪ್ಪ ನೀಡಿದ್ದ ದೂರಿನ ಮೇರೆಗೆ ವಿಚಾರಣೆ ನಡೆಸಲು ಬಂದ ಪೊಲೀಸರಿಗೆ ಆರೋಪಿಯು ಸ್ಪಂದಿಸದೇ ಅಸಡ್ಡೆಯಿಂದ ಪ್ರತಿಕ್ರಿಯಿಸಿದ್ದಾನೆ. ನಂತರ ಜು.16ರಂದು ಬೆಳಿಗ್ಗೆ ಗೋಪಾಲಪ್ಪ ಅವರ ಜೊತೆ ಮಾತನಾಡುವ ನೆಪದಲ್ಲಿ ಬೇರೆಯವರಿಂದ ಮನೆಯಿಂದ ಹೊರಗೆ ಕರೆಯಿಸಿದ ಆರೋಪಿಗಳು ಸಾರ್ವಜನಿಕ ಬೀದಿಯಲ್ಲಿ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ” ಎಂದು ತಿಳಿಸಿದರು.

“ಗಾಯಾಳುವನ್ನು ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ರಕ್ತಸ್ರಾವ ಆಗುತ್ತಿರುವುದನ್ನು ಗ್ರಹಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ವರ್ಗಾಯಿಸಿದ್ದಾರೆ. ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ತಲೆ ಹಾಗೂ ಎಡಭಾಗಗಳಿಗೆ ಹೊಡೆದು ತೀವ್ರ ಗಾಯವಾಗಿರುವ ಕಾರಣ 10 ಹೊಲಿಗೆ ಹಾಕಿರುತ್ತಾರೆ. ಎಡಗೈ ಮತ್ತು ಎಡಗಾಲು ಮೂಳೆಗಳು ಮುರಿದಿವೆ. ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯಾಧಿಕಾರಿಗಳು ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಗೋಪಾಲಪ್ಪ ಚೇತರಿಸಿಕೊಳ್ಳುತ್ತಿದ್ದು, ನಂತರದ ದಿನಗಳಲ್ಲಿ ಹೆಚ್ಚಿನ ವಿಚಾರಗಳು ತಿಳಿಯಬಹುದು” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆ ಎಸ್ ವೈನ್ ಲ್ಯಾಂಡ್‌ ಸ್ಥಳಾಂತರಕ್ಕೆ ಒತ್ತಾಯ; ಜು.19ರಂದು ಪ್ರತಿಭಟನೆ

ಸಂತ್ರಸ್ತ ಗೋಪಾಲಪ್ಪನವರ ಇಬ್ಬರು ಗಂಡು ಮಕ್ಕಳು ಪರೋಕ್ಷವಾಗಿ ಇಂತಹ ದೌರ್ಜನ್ಯಗಳಿಗೆ ಬಲಿಯಾಗಿದ್ದು, ಈ ಹಲ್ಲೆಯಿಂದ ಇವರ ಕುಟುಂಬ ತೀವ್ರ ಆಘಾತಕ್ಕೆ ಗುರಿಯಾಗಿದೆ. ಪೊಲೀಸ್‌ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಅನ್ಯಾಯದ ವಿರುದ್ಧ ಕ್ರಮ ಕೈಗೊಂಡು ಪ್ರಾಬಲ್ಯದ ಸೊಕ್ಕು ಅಡಿಗಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸುತ್ತಾರೋ ಅಥವಾ ದೌರ್ಜನ್ಯ ಮೆರೆಯುತ್ತಿರುವ ಪ್ರಾಬಲ್ಯವನ್ನು ಪೋಷಿಸುತ್ತಾರೋ ಕಾದು ನೋಡಬೇಕು” ಎಂದು ಸವಾಲು ಹಾಕಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ: ಗಜಾನನ ಬಾಲೆ

ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ...

ಶಿವಮೊಗ್ಗ | ಪೋಷಕರಾಗಲು ಅಡ್ಡದಾರಿಯಲ್ಲ; ಕಾನೂನು ಬದ್ಧ ದತ್ತು ಸ್ವೀಕಾರವೇ ಸರಿಯಾದ ಮಾರ್ಗ

ಮಕ್ಕಳ ಮಾರಾಟವು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಯಾವುದೇ ಅನಧಿಕೃತವಾಗಿ ಮಗುವನ್ನು ನೀಡುವುದು...

ಹಾವೇರಿ | ರದ್ದಾದ ಮೀಸಲಾತಿಗೆ ರಾಜ್ಯ ಸರ್ಕಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವಂತೆ ಮನವಿ

"ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು...

ಸೊರಬ | ಕುರಿ ಶೆಡ್‌ ಬೆಂಕಿಗಾಹುತಿ; 150ಕ್ಕೂ ಹೆಚ್ಚು ಕೋಳಿ, ಕುರಿಗಳು ಸುಟ್ಟು ಕರಕಲು!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್...